ಕಾರ್ಯ ಸಿದ್ದಿಗೆ ಕಾಯ, ಮನಸ್ಸು ಏಕಗೊಳ್ಳಬೇಕು: ಸರಸ್ವತೀ ಮಹಾಸ್ವಾಮೀಜಿ
Team Udayavani, Dec 23, 2021, 10:32 AM IST
ಶಿರಸಿ: ಮನುಷ್ಯ ಸಂಕಲ್ಪಿಸುವ ಕಾರ್ಯಗಳು ಸಿದ್ಧಿಸಲು ಕಾಯ ಮತ್ತು ಮನಸ್ಸು ಏಕವಾಗಿ ಕ್ರಿಯಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಅವರು, ತಾಲೂಕಿನ ಬೆಂಗಳಿ ಶ್ರೀ ರಾಮೇಶ್ವರ ದೇವಸ್ಥಾನದ ಪುನರ್ ರ್ನಿರ್ಮಾಣದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ದೇಗುಲಗಳ ಅಭಿವೃದ್ಧಿಯನ್ನು ಕಾಲಕಾಲಕ್ಕೆ ಮಾಡುತ್ತಿರಬೇಕಾಗುತ್ತದೆ. ನಾವು ನಮ್ಮ ಮನೆಗಳನ್ನು ಸದಾ ಶೃಂಗರಿಸುವುದರಲ್ಲಿ ಆಸಕ್ತರಾಗಿರುತ್ತೇವೆ. ಆದರೆ ಮನೆ ಮನೆತನಗಳನ್ನು ಕಾಯುವ ದೇವಸನ್ನಿಧಿ, ಆಪತ್ತು ಬಂದಾಗೆಲ್ಲ ಧಾವಿಸುವ ಊರನಡುವಿನ ದೇವಸ್ಥಾನದ ವಿಷಯ ಬಂದಾಗ ಆಮೇಲೆ ನೋಡೋಣ ಅನ್ನುವ ಧೋರಣೆ ಸಲ್ಲದು ಎಂದರು.
ಸ್ವಚ್ಛ ಪರಿಸರ ಆರೋಗ್ಯಕ್ಕೆ ಅವಶ್ಯಕ. ಹಾಗೆಯೇ ಪೂಜೆ ಸಲ್ಲಿಸುವ ಪ್ರಾರ್ಥನೆ ಸಲ್ಲಿಸುವ ದೇವಸ್ಥಾನದಲ್ಲಿ ಕಾಯ್ದುಕೊಳ್ಳುವುದು ಆರೋಗ್ಯಕರ ಮನಸ್ಸಿಗೆ ಕಾರಣ ಅಂದೂ ತಿಳಿಸಿದರು.
ಊರ ಐತಿಹಾಸಿಕ ಮಾಹಿತಿಗಳನ್ನು ಮುಂದಿನ ತಲೆಮಾರಿಗೆ ಕಾಯ್ದಿಡುವ ಉದ್ದೇಶದಿಂದ ವೆಂಕಟೇಶ ದೀಕ್ಷಿತ್ ಮತ್ತು ದಿನೇಶ್ ಹೆಗಡೆ ನೇತೃತ್ವದ ಸ್ಮರಣ ಸಂಚಿಕೆಯನ್ನು ಶ್ರೀಗಳವರು ಬಿಡುಗಡೆ ಮಾಡಿದರು.
ಪ್ರಾಸ್ತಾವಿಕವಾಗಿ ಪ್ರಸನ್ನ ಹೆಗಡೆ ಮಾತನಾಡಿದರು. ಮೊಕ್ತೇಸರ ಲಕ್ಷ್ಮೀಶ ಹೆಗಡೆ, ಕಾರ್ಯದರ್ಶಿ ವಿನಾಯಕ ಹೆಗಡೆ, ವೇ. ಮೂ. ನಾಗೇಶ ಪತ್ರೆ, ವೇ. ಮೂ. ಪಶುಪತಿ ಶಾಸ್ತ್ರಿ ಮತ್ತು ಸೀಮಾಧ್ಯಕ್ಷ ಅನಂತ ಭಟ್ಟರು ಮತ್ತು ಊರಿನ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು. ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Saira Banu: ಎ.ಆರ್.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ
Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
UV Fusion: ನಿಸ್ವಾರ್ಥ ಜೀವ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.