ವರದಕ್ಷಿಣೆ ದಾಹಕ್ಕೆ ನವ ವಿವಾಹಿತೆ ಬಲಿ
Team Udayavani, Dec 23, 2021, 12:22 PM IST
Representative Image used
ಹಾಸನ: ವಿವಾಹವಾದ 20 ದಿನಗಳೊಳಗೇ ಗಂಡನ ಮನೆಯವರ ವರದಕ್ಷಿಣೆ ದಾಹಕ್ಕೆ ಯುವತಿಯೊಬ್ಬಳು ಬಲಿಯಾಗಿರುವ ಪ್ರಕರಣ ಹಾಸನದ ಸಲೀಂ ನಗರದಲ್ಲಿ ನಡೆದಿದೆ. ಅರಕಲಗೂಡು ತಾಲೂಕು, ಮಲ್ಲಿಪಟ್ಟಣ ಹೋಬಳಿ, ಹೊಳಲಗೋಡು ಗ್ರಾಮದ ಮುಕ್ತಾರ್‌ಖಾನ್ ಎಂಬವರ 4ನೇ ಮಗಳು ಫಿಜಾಖಾನಂ (22) ಎಂಬಾಕೆಯನ್ನು ಹಾಸನದ ಸಲೀಂ ನಗರ ವಾಸಿ ಶಾಗಿಲ್ ಎಂಬಾತ ಡಿ.2 ರಂದು ವಿವಾಹವಾಗಿದ್ದ.
ಮದುವೆ ಸಂದರ್ಭದಲ್ಲಿ ಮುಸ್ಲಿಂ ಸಂಪದಾಯದ ಪ್ರಕಾರ 2.50 ಲಕ್ಷ ರೂ. ನಗದು, ಮತ್ತು ಆಭರಣಗಳನ್ನು ಕೊಟ್ಟು ವಿವಾಹ ಮಾಡಲಾಗಿತ್ತು. ಒಂದು ವಾರದ ಹಿಂದೆ ಫಿಜಾಖಾನಂ ಮತ್ತು ಶಾಗಿಲ್ ಮಧುಚಂದ್ರಕ್ಕೂ ಹೋಗಿ ಬಂದಿದ್ದರು. ತವರು ಮನೆಯಿಂದ 5 ಲಕ್ಷ ರೂ. ವರದಕ್ಷಿಣೆ ತರುವಂತೆ ಫಿಜಾಖಾನಂಗೆ ಶಾಗಿಲ್ ಮನೆಯವರು ಒತ್ತಾಯ ಮಾಡುತ್ತಿದ್ದರು ಎನ್ನಲಾಗಿದೆ.
ಶಾಗಿಲ್‌ನ ಅಣ್ಣ ಸಜೀಲ್ ಅಹಮ್ಮದ್ ಎಂಬಾತ ಫಿಜಾಖಾನಂಳ ಸಹೋದರ ಸಲ್ಮಾನ್ ಗೆ ಮಂಗಳವಾರ ಬೆಳಗ್ಗೆ ಫೋನ್ ಮಾಡಿ ಫಿಜಾಖಾನಂ ಬೆಳಿಗ್ಗೆ ಸ್ನಾನಮಾಡಲುಹೋದಾಗ ಸ್ನಾನದಮನೆಯಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದ್ದ. ತವರು ಮನೆಯವರು ಬರುವ ವೇಳೆಗೆ ಫಿಜಾಖಾನಂ ಶವ ನಗರದ ಎಸ್‌ಎಸ್‌ಎಂ ಆಸ್ಪತ್ರೆಯಲ್ಲಿತ್ತು.
ವರದಕ್ಷಿಣೆ ಆಸೆಯಿಂದ ಶಾಗಿಲ್‌ಗೆ ಮತ್ತೂಂದು ಮದುವೆ ಮಾಡುವ ದುರುದದೇಶದಿಂದಲೇ ಆತನ ಸಹೋದರರಾದ ಸುಹಿಲ್ ಅಹಮ್ಮದ್ ಮತ್ತು ಸಜೀಲ್ ಅಹಮ್ಮದ್ ಅವರು ಉದ್ದೇಶಪೂರ್ವಕವಾಗಿ ಫಿಜಾಖಾನಂ ಸ್ನಾನ ಮಾಡಲು ಹೋದಾಗ ಗ್ಯಾಸ್ ಗೀಜರ್ ಆನ್ ಮಾಡಿಹೊರಗಡೆಯಿಂದ ಚಿಲಕ ಹಾಕಿ ಆಕೆ ಸ್ನಾನದ ಮನೆಯಲ್ಲಿಯೇ ಸಾಯುವಂತೆ ಮಾಡಿದ್ದಾರೆ. ಮೂವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತಳ ತಂದೆ ಮುಕ್ತಾರ್ ಖಾನ್ ಅವರು ಹಾಸನದ ಪೆನ್‌ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.