ಪ್ರೊ ಕಬಡ್ಡಿ: ಜೈಪುರ್‌ ಪಿಂಕ್‌ ಪ್ಯಾಂಥರ್ ವನ್ನು ಕೆಡವಿದ ಗುಜರಾತ್‌ ಜೈಂಟ್ಸ್‌

Team Udayavani, Dec 23, 2021, 11:07 PM IST

ಪ್ರೊ ಕಬಡ್ಡಿ: ಜೈಪುರ್‌ ಪಿಂಕ್‌ ಪ್ಯಾಂಥರ್ ವನ್ನು ಕೆಡವಿದ ಗುಜರಾತ್‌ ಜೈಂಟ್ಸ್‌

ನವೀನ್‌ ಕುಮಾರ್‌.

ಬೆಂಗಳೂರು: ಗಿರೀಶ್‌ ಮಾರುತಿ ಅವರ ಅಮೋಘ ಟ್ಯಾಕಲ್‌ ಪರಾಕ್ರಮದಿಂದ ಗುಜರಾತ್‌ ಜೈಂಟ್ಸ್‌ ಪ್ರೊ ಕಬಡ್ಡಿಯಲ್ಲಿ ಗೆಲುವಿನ ಆರಂಭ ಪಡೆದಿದೆ. ಗುರುವಾರದ ಮೊದಲ ಮುಖಾಮುಖಿಯಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ ತಂಡವನ್ನು 34-27 ಅಂಕಗಳಿಂದ ಮಣಿಸಿದೆ.

ಗುಜರಾತ್‌ ಪರ ಗಿರೀಶ್‌ ಮಾರುತಿ 7 ಟ್ಯಾಕಲ್‌ ಅಂಕಗಳ ಮೂಲಕ ಮಿಂಚಿದರು. ರೈಡರ್‌ ರಾಕೇಶ್‌ ನರ್ವಾಲ್‌ ಕೂಡ ಒಂದು ಬೋನಸ್‌ ಸೇರಿದಂತೆ 7 ಅಂಕ ಸಂಪಾದಿಸಿದರು. ಮತ್ತೋರ್ವ ರೈಡರ್‌ ರಾಕೇಶ್‌ ಸುಂಗ್ರೋಯ ಕೂಡ ಗಮನಾರ್ಹ ಪ್ರದರ್ಶನ ನೀಡಿ 6 ಅಂಕ ತಂದುಕೊಟ್ಟರು. ಗಿರೀಶ್‌ ಮಾರುತಿ ಅವರಿಗೆ ಸರಿಸಮನಾಗಿ ಪರ್ವೇಶ್‌ ಭೈಂಸ್ವಾಲಾ ಕೂಡ ಟ್ಯಾಕಲ್‌ನಲ್ಲಿ ಮಿಂಚಿದರು. ಇವರಿಂದ 4 ಅಂಕ ಬಂತು. ಒಂದು ಬೋನಸ್‌ ಅಂಕವಾಗಿತ್ತು.
ಇನ್ನೊಂದೆಡೆ ಜೈಪುರ್‌ ತಂಡದ ರೈಡರ್‌ ಅರ್ಜುನ್‌ ದೇಶ್ವಾಲ್‌ ಉತ್ತಮ ಹೋರಾಟ ಪ್ರದರ್ಶಿಸಿ 10 ಅಂಕ ತಂದಿತ್ತರೂ ಪ್ರಯೋಜನವಾಗಲಿಲ್ಲ. ಇವರಿಂದ ರೈಡ್‌ ಮೂಲಕ 7, ಬೋನಸ್‌ ರೂಪದಲ್ಲಿ 3 ಅಂಕ ಬಂದಿತ್ತು. ನಾಯಕ ದೀಪಕ್‌ ನಿವಾಸ್‌ ಹೂಡಾ ಆಟ ಸಾಧಾರಣ ಮಟ್ಟದಲ್ಲಿತ್ತು (4 ಅಂಕ). ಸಂದೀಪ್‌ ಧುಲ್‌ ಕೂಡ ಯಶಸ್ಸು ಕಾಣಲಿಲ್ಲ (3 ಅಂಕ).

ಗುಜರಾತ್‌ ತಂಡದ ಕೋಚ್‌ ಮನ್‌ಪ್ರೀತ್‌ ಸಿಂಗ್‌ ಮತ್ತು ನಾಯಕ ಹಾಗೂ ಡಿಫೆಂಡರ್‌ ಸುನೀಲ್‌ ಕುಮಾರ್‌ ಅವರಿಬ್ಬರೂ ಗ್ರೀನ್‌ಕಾರ್ಡ್‌ ಪಡೆದದ್ದು ಈ ಪಂದ್ಯದ ಸ್ವಾರಸ್ಯವೆನಿಸಿತು. ಈ ಎರಡೂ ತಂಡಗಳು ಕಳೆದ ಸೀಸನ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದವು. ಗುಜರಾತ್‌ 9ನೇ ಸ್ಥಾನಕ್ಕೆ ಕುಸಿದಿತ್ತು. ಜೈಪುರ್‌ ಕೂಡ ಮುಂದಿನ ಸುತ್ತಿಗೆ ತೇರ್ಗಡೆ ಆಗಿರಲಿಲ್ಲ.

ಇದನ್ನೂ ಓದಿ:ಮಣಿಪುರಕ್ಕೆ ಮಯನ್ಮಾರ್‌ ಉಗ್ರರಿಂದ ದಾಳಿ? ಕೇಂದ್ರ ಗುಪ್ತಚರ ಇಲಾಖೆಯ ಮುನ್ನೆಚ್ಚರಿಕೆ

ಪಟ್ನಾ ಪೈರೆಟ್ಸ್‌ಗೆ ಗೆಲುವಿನ ಶುಭಾರಂಭ
ಮೋನು ಗೋಯತ್‌ ಅವರ ಜಬರ್ದಸ್ತ್ ರೈಡಿಂಗ್‌ ಪರಾಕ್ರಮದಿಂದ ಹರಿಯಾಣ ಸ್ಟೀಲರ್ ವಿರುದ್ಧದ ದಿನದ ಅಂತಿಮ ಪಂದ್ಯದಲ್ಲಿ ಪಟ್ನಾ ಪೈರೆಟ್ಸ್‌ 42-39 ಅಂತರದ ಗೆಲುವು ದಾಖಲಿಸಿದೆ. ಮೋನು ರೈಡಿಂಗ್‌ನಲ್ಲಿ ಒಟ್ಟು 15ಅಂಕಗಳನ್ನು ಕಲೆಹಾಕಿ ಮಿಂಚಿದರು. ನಾಯಕ ಪ್ರಶಾಂತ್‌ ಕುಮಾರ್‌ ರೈ 7 ಅಂಕ ಗಳಿಸಿದರು.

ದಿಲ್ಲಿ ವಿರುದ್ಧ ಪುನೇರಿ ಪಲ್ಟಿ
ದ್ವಿತೀಯ ಪಂದ್ಯದಲ್ಲಿ ದಬಾಂಗ್‌ ದಿಲ್ಲಿ ವಿರುದ್ಧ ಪುನೇರಿ ಪಲ್ಟಾನ್ಸ್‌ 41-30 ಅಂತರದಿಂದ ಪಲ್ಟಿ ಹೊಡೆಯಿತು. ನವೀನ್‌ ಕುಮಾರ್‌ ಅವರ ಪ್ರಚಂಡ ಹಾಗೂ ಯಶಸ್ವಿ ರೈಡಿಂಗ್‌ ದಿಲ್ಲಿ ಮೇಲುಗೈಯಲ್ಲಿ ಪ್ರಮುಖ ಪಾತ್ರ ವಹಿಸಿತು. ನವೀನ್‌ 16 ಅಂಕ ಗಳಿಸಿದರು.

ಟಾಪ್ ನ್ಯೂಸ್

1-waya-bh

Wayanad ವಿಶ್ವದ ಅತ್ಯುತ್ತಮ ಪ್ರವಾಸೋದ್ಯಮ ತಾಣವನ್ನಾಗಿಸುತ್ತೇವೆ: ರಾಹುಲ್ ಭರವಸೆ

T20: ಮತ್ತೆ ಎಡವಿದ ವಿಂಡೀಸ್‌; ಇಂಗ್ಲೆಂಡ್‌ಗೆ 7 ವಿಕೆಟ್‌ ಜಯ

T20: ಮತ್ತೆ ಎಡವಿದ ವಿಂಡೀಸ್‌; ಇಂಗ್ಲೆಂಡ್‌ಗೆ 7 ವಿಕೆಟ್‌ ಜಯ

Jamer-hdk

By Election: ಎಚ್‌ಡಿಕೆ ವಿರುದ್ಧ ಸಚಿವ ಜಮೀರ್‌ ಅವಹೇಳನಕಾರಿ ಹೇಳಿಕೆ; ಜೆಡಿಎಸ್‌ ಆಕ್ರೋಶ

Kharge

Kharge; ಕೇವಲ ನಾಲ್ಕು ಜನರು ಕೇಂದ್ರ ಸರಕಾರ ನಡೆಸುತ್ತಿದ್ದಾರೆ..

1-jmm

Jharkhand; ಬಿಜೆಪಿ ಪರ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಪ್ರಚಾರ: ಜೆಎಂಎಂ ಆರೋಪ

coco

Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ

Chikkamagaluru; ನಕ್ಸಲರ ಓಡಾಟದ ಸುದ್ದಿ; ಶೃಂಗೇರಿ ಬಳಿ ಇಬ್ಬರ ವಿಚಾರಣೆ ನಡೆಸಿದ ಪೊಲೀಸರು

Chikkamagaluru; ನಕ್ಸಲರ ಓಡಾಟದ ಸುದ್ದಿ; ಶೃಂಗೇರಿ ಬಳಿ ಇಬ್ಬರ ವಿಚಾರಣೆ ನಡೆಸಿದ ಪೊಲೀಸರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 match: 108 ರನ್‌ ಗಳಿಸಿಯೂ ಗೆದ್ದ ನ್ಯೂಜಿಲ್ಯಾಂಡ್‌

T20 match: 108 ರನ್‌ ಗಳಿಸಿಯೂ ಗೆದ್ದ ನ್ಯೂಜಿಲ್ಯಾಂಡ್‌

T20: ಮತ್ತೆ ಎಡವಿದ ವಿಂಡೀಸ್‌; ಇಂಗ್ಲೆಂಡ್‌ಗೆ 7 ವಿಕೆಟ್‌ ಜಯ

T20: ಮತ್ತೆ ಎಡವಿದ ವಿಂಡೀಸ್‌; ಇಂಗ್ಲೆಂಡ್‌ಗೆ 7 ವಿಕೆಟ್‌ ಜಯ

BGT; ಪರ್ತ್‌ ಪಂದ್ಯಕ್ಕೆ ರೋಹಿತ್‌ ಅಲಭ್ಯ: ಯಾರು ಕ್ಯಾಪ್ಟನ್?‌ ಯಾರು ಓಪನರ್?: ಕೋಚ್ ಉತ್ತರ

BGT; ಪರ್ತ್‌ ಪಂದ್ಯಕ್ಕೆ ರೋಹಿತ್‌ ಅಲಭ್ಯ: ಯಾರು ಕ್ಯಾಪ್ಟನ್?‌ ಯಾರು ಓಪನರ್?: ಕೋಚ್ ಉತ್ತರ

Aryan to Anaya; ಮಹಿಳೆಯಾಗಿ ಬದಲಾದ ಟೀಂ ಇಂಡಿಯಾ ಮಾಜಿ ಕೋಚ್‌ ಪುತ್ರ!

Aryan to Anaya; ಮಹಿಳೆಯಾಗಿ ಬದಲಾದ ಟೀಂ ಇಂಡಿಯಾ ಮಾಜಿ ಕೋಚ್‌ ಪುತ್ರ!

1-pak

ODI; 22 ವರ್ಷ ಬಳಿಕ ಆಸ್ಟ್ರೇಲಿಯದಲ್ಲಿ ಸರಣಿ ಗೆದ್ದ ಪಾಕಿಸ್ಥಾನ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

T20 match: 108 ರನ್‌ ಗಳಿಸಿಯೂ ಗೆದ್ದ ನ್ಯೂಜಿಲ್ಯಾಂಡ್‌

T20 match: 108 ರನ್‌ ಗಳಿಸಿಯೂ ಗೆದ್ದ ನ್ಯೂಜಿಲ್ಯಾಂಡ್‌

1-waya-bh

Wayanad ವಿಶ್ವದ ಅತ್ಯುತ್ತಮ ಪ್ರವಾಸೋದ್ಯಮ ತಾಣವನ್ನಾಗಿಸುತ್ತೇವೆ: ರಾಹುಲ್ ಭರವಸೆ

T20: ಮತ್ತೆ ಎಡವಿದ ವಿಂಡೀಸ್‌; ಇಂಗ್ಲೆಂಡ್‌ಗೆ 7 ವಿಕೆಟ್‌ ಜಯ

T20: ಮತ್ತೆ ಎಡವಿದ ವಿಂಡೀಸ್‌; ಇಂಗ್ಲೆಂಡ್‌ಗೆ 7 ವಿಕೆಟ್‌ ಜಯ

1-wqeewq

Thirthahalli; ನದಿಗೆ ಹಾರಿ ಆತ್ಮಹ*ತ್ಯೆಗೆ ಯತ್ನಿಸಿದ ಹೆಬ್ರಿ ಮೂಲದ ವೃದ್ಧನ ರಕ್ಷಣೆ

12

Udupi: ಕಟಪಾಡಿ-ನಿಟ್ಟೂರು; ಹೆದ್ದಾರಿ ಬದಿ ತ್ಯಾಜ್ಯ ರಾಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.