ಭರವಸೆಯ ಹೊಂಗಿರಣ ಬೀರಲಿ
Team Udayavani, Dec 24, 2021, 5:53 AM IST
ಕಡಬ: ಏಸು ಕಂದ ನಮ್ಮೆಲ್ಲರ ಹೃದಯವೆಂಬ ಗೋದಲಿಯಲ್ಲಿ ಹುಟ್ಟಿದಾಗ ಮಾತ್ರ ನಾವು ಆಚರಿಸುವ ಕ್ರಿಸ್ತ ಜಯಂತಿ ಹಬ್ಬವು ಸಾರ್ಥಕವಾಗುವುದು.
ಎಲ್ಲ ರೀತಿಯ ಅಭದ್ರತೆಗಳಿಂದ, ಕಷ್ಟ ಕಾರ್ಪಣ್ಯಗಳಿಂದ ನಮ್ಮ ಜೀವನವು ಬಿಡುಗಡೆ ಹೊಂದಲಿ. ಪ್ರತಿಯೊಬ್ಬರೂ ಶಾಂತಿಯ ದೂತರಾಗಿ ಏಸುವಿನ ಅನ್ವೇಷಣೆಗೆ ತೊಡಗೋಣ.
ವಿಶ್ವ ಶಾಂತಿಯ ಸಾಧಕರಾಗೋಣ, ಹೊಸ ವರುಷದಲ್ಲಿ ಕ್ರಿಸ್ತರ ಅನುಯಾಯಿಗಳು ಹಾಗೂ ಅನುರೂಪಿಗಳಾಗಿ ಹೊಸ ಬಾಳನ್ನು ಆರಂಭಿಸಿ ದೀನ ದಲಿತರೊಡನೆ ಸಮಾನತೆಯಿಂದ ಬಾಳ್ಳೋಣ. ಪರೋಪಕಾರಾರ್ಥಂ ಇದಂ ಶರೀರಂ ಎನ್ನುವ ದಿವ್ಯವಾಣಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ.
ಮನುಷ್ಯತ್ವ ಹಾಗೂ ಮಾನ ವೀಯತೆ ಮರೀಚಿಕೆಯಾಗುವಂತಹ ಪ್ರಸ್ತುತ ಸಮಾಜದಲ್ಲಿ ದೇವರೂ, ಸಂಪೂರ್ಣ ಮಾನವರೂ ಆದ ಏಸು ಕ್ರಿಸ್ತರ ಜಯಂತಿ ಮಾನವ ಕುಲದ ಭಾವೈಕ್ಯತೆ ಹಾಗೂ ನೈತಿಕತೆ ಯನ್ನು ಜ್ಞಾಪಿಸುವಂತಾಗಲಿ. ಕಳೆದೆ ರಡು ವರ್ಷಗಳಿಂದ ಕೋವಿಡ್ ಮಹಾಮಾರಿ ಯಿಂದ ತತ್ತರಿಸಿರುವ ಸಂದರ್ಭ ಈ ವರ್ಷದ ಕ್ರಿಸ್ತ ಜಯಂತಿಯು ಜನತೆಗೆ ಭರವಸೆಯ ಹೊಂಗಿರಣ ಬೀರಲಿ.
2022ರ ಹೊಸ ವರ್ಷವು ಶಾಂತಿ, ನೆಮ್ಮದಿಯ ವರ್ಷವಾಗಲಿ. ಏಸು ನಮ್ಮ ಜೀವನದ ಅಮೂಲ್ಯ ನಿಧಿಯಾಗಿ ಬದುಕಿಗೆ ಅರ್ಥ, ಮೌಲ್ಯ, ಸುರಕ್ಷತೆ ಒದಗಿಸಿ ಶಾಂತಿ ದಯಪಾಲಿಸಲಿ ಎಂದುಪ್ರಾರ್ಥಿಸುತ್ತೇನೆ.
-ರೈ|ರೆ|ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್,
ಧರ್ಮಾಧ್ಯಕ್ಷರು, ಪುತ್ತೂರು ಧರ್ಮ ಪ್ರಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.