ಒಮಿಕ್ರಾನ್‌: ಮೈಮರೆತು ಓಡಾಡುತ್ತಿರುವ ಜನ


Team Udayavani, Dec 24, 2021, 1:31 PM IST

omicron

Representative Image used

ತುಮಕೂರು: ಕಲ್ಪತರು ನಾಡಿನಲ್ಲಿ ಹಂತ-ಹಂತವಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಮಿಕ್ರಾನ್‌ ಸೋಂಕಿತರು ಕಂಡು ಬಂದಿದ್ದು, ಸದ್ಯ ಇನ್ನು ಜಿಲ್ಲೆಗೆ ಈ ಸೋಂಕು ವ್ಯಾಪಿಸಿಲ್ಲ. ಆದರೆ, ಜಿಲ್ಲೆಯ ಜನ ಕೊರೊನಾ ಮರೆತು ಎಂದಿನಂತೆ ಅಡ್ಡಾಡು ತ್ತಿರುವುದು ಮತ್ತೆ ಎಲ್ಲಿ ಕೊರೊನಾ ಒಕ್ಕರಿಸುತ್ತೋ ಎನ್ನುವ ಭೀತಿ ಉಂಟಾಗಿದೆ.

ಕೊರೊನಾ ವೈರಸ್‌ ನಿಯಂತ್ರಣ ಆಗಬೇಕಾದರೆ 18 ವರ್ಷ ಮೇಲ್ಪಟ್ಟವರಿಂದ ಎಲ್ಲರಿಗೂ ಲಸಿಕೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಜನ ಕೊರೊನಾ ನಿಯಂತ್ರಣ ಮಾಡಲು ಶೇ.95ರಷ್ಟು ಮೊದಲ ಡೋಸ್‌ ಲಸಿಕೆ ಪಡೆದು ಕೊಂಡಿದ್ದಾರೆ. ಆದರೆ, ಎರಡನೇ ಡೋಸ್‌ ಇನ್ನು ಶೇ.71ರಷ್ಟು ಜನ ಪಡೆದಿದ್ದು, ಕೊರೊನಾ, ಒಮಿಕ್ರಾನ್‌ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆಯುವುದು ಅತೀ ಮುಖ್ಯವಾಗಿದೆ.

ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಮನವಿ: ಕೆಲವು ಜನರು ಇನ್ನು ಮೂಢನಂಬಿಕೆಗೆ ಕಟ್ಟು ಬಿದ್ದಿದ್ದು, ಎಷ್ಟೇ ಪ್ರಚಾರ ಮಾಡಿದರೂ ಜನ ಲಸಿಕೆ ಪಡೆಯಲು ಬರಲಿಲ್ಲ, ಲಸಿಕಾ ಅಭಿಯಾನದ ಮೂಲಕ ಜಿಲ್ಲಾಡಳಿತ ಎಲ್ಲ ರೀತಿಯಿಂದಲೂ ಜನರಿಗೆ ಲಸಿಕೆ ನೀಡುತ್ತಿದೆ. ಪ್ರಾರಂಭದಿಂದಲೂ ಜನರಿಗೆ ಕೊರೊನಾ ಲಸಿಕೆಯನ್ನು ನೀಡುತ್ತಲೇ ಬಂದಿದ್ದು, ಈಗ ಸಾಕಷ್ಟು ಲಸಿಕೆ ಇರುವುದರಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಎಲ್ಲಿಯೂ ಕಾಯುವ ಅಗತ್ಯವಿಲ್ಲ.

ಲಸಿಕಾ ಕೇಂದ್ರಕ್ಕೆ ಹೋದ ತಕ್ಷಣ ಲಸಿಕೆ ಹಾಕುತ್ತಿದ್ದು, ಮೊದಲನೇ ಡೋಸ್‌ ಪಡೆಯದಿದ್ದರೆ ಅವರೂ ಮತ್ತು ಎರಡನೇ ಡೋಸ್‌ ಲಸಿಕೆ ಪಡೆಯಬೇಕಾದವರು ಕೊರೊನಾ ಲಸಿಕೆ ಪಡೆದು ರೋಗ ಹರಡದಂತೆ ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಮನವಿ ಮಾಡಿದ್ದಾರೆ.

33.24 ಲಕ್ಷ ಜನರಿಗೆ ಲಸಿಕೆ: ಜಿಲ್ಲೆಯಲ್ಲಿ ಡಿ. 21ಕ್ಕೆ ಮೊದಲ ಮತ್ತು ಎರಡನೇ ಡೋಸ್‌ ಕೊರೊನಾ ಲಸಿಕೆ ಸೇರಿ 33,24, 420 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. 10 ತಾಲೂಕುಗಳಲ್ಲೂ ಜನರಿಗೆ ತಕ್ಷಣ ಲಸಿಕೆ ಸಿಗುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಕಡೆ ಮೊದಲ ಡೋಸ್‌ ಲಸಿಕೆ ಶೇ. 95ಕ್ಕೂ ಹೆಚ್ಚು ಪ್ರಗತಿ ಆಗಿದೆ.

ಯಾವುದೇ ಅಡ್ಡ ಪರಿಣಾಮ ವಿಲ್ಲದ ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ಕೊರೊನಾ ಸೋಂಕು ಬಂದರೂ ಗುಣಮುಖರಾಗುತ್ತಿರುವುದನ್ನು ಗಮನಿಸಿದ ಜನರು, ಈಗ ಕೋವಿಡ್‌ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯಲು ಮುಂದಾಗ ಬೇಕಾಗಿದೆ. ಮೊದಲ ಡೋಸ್‌ 19.04 ಲಕ್ಷ ಜನರು ಪಡೆದಿದ್ದು, ಶೇ. 95ರಷ್ಟು ಎರಡನೇ ಡೋಸ್‌ 14.20 ಲಕ್ಷ ಜನರು ಪಡೆದು ಶೇ. 71ರಷ್ಟು ಪ್ರಗತಿ ಸಾಧಿಸಲಾಗಿದೆ. ಎರಡೂ ಡೋಸ್‌ ಪಡೆಯಬೇಕಾದ್ದು ನಾಗರಿಕರ ಕರ್ತವ್ಯವಾಗಿದ್ದು, ಮೊದಲನೇ ಲಸಿಕೆ ಪಡೆದಿರುವ ಅನೇಕರು ಇನ್ನು ಎರಡನೇ ಡೋಸ್‌ ಪಡೆದಿಲ್ಲ.

ಲಸಿಕೆ ತಪ್ಪದೇ ಪಡೆಯಿರಿ: ಜಿಲ್ಲೆಯ ತುಮಕೂರು, ತುರುವೇಕೆರೆ ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್‌, ಮಧುಗಿರಿ, ಗುಬ್ಬಿ ಭಾಗಗಳಲ್ಲಿ ಲಸಿಕೆ ಪಡೆಯುವಲ್ಲಿ ಉತ್ತಮ ಸಾಧನೆ ಆಗುತ್ತಿದೆ. ಆದರೆ, ಪಾವಗಡ ತಾಲೂಕಿನಲ್ಲಿ ಜನ ಲಸಿಕೆ ಪಡೆಯಲು ಹೆದರುತ್ತಿದ್ದು, ಅಲ್ಲಿ ಅತೀ ಕಡಿಮೆ ಶೇ. 85ರಷ್ಟು ಪ್ರಗತಿ ಸಾಧಿಸಲಾಗಿದೆ.

ಶಿರಾ ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರೆತ್ತಿದೆ. ಎರಡೂ ಡೋಸ್‌ ಸೇರಿ ಶೇ. 99ರಷ್ಟು ಪ್ರಗತಿ ಸಾಧಿಸಲಾಗಿದೆ. ನಮ್ಮ ನಿರೀಕ್ಷೆ ಯಷ್ಟು ಲಸಿಕೆ ಬರುತ್ತಿದೆ. ಜನರು ಲಸಿಕಾ ಕೇಂದ್ರಕ್ಕೆ ಬಂದು ತಪ್ಪದೇ ಎರಡೂ ಡೋಸ್‌ ಲಸಿಕೆ ತಪ್ಪದೇ ಪಡೆಯಿರಿ ಎಂದು ಲಸಿಕೆ ವಿತರಣೆ ನಿರ್ವಹಣಾಧಿಕಾರಿ ಡಾ.ಕೇಶವರಾಜ್‌ ಮನವಿ ಮಾಡಿದ್ದಾರೆ.

“ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈಗ ಕೊರೊನಾ ನಿಯಂತ್ರಣದಲ್ಲಿದೆ. ಆದರೆ, ಬೇರೆ ಬೇರೆ ಕಡೆ ಕೊರೊನಾ ಜೊತೆಗೆ ಒಮಿಕ್ರಾನ್‌ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಅದಕ್ಕೆ ಬೇಕಾದ ಸೂಕ್ತ ಕ್ರಮವನ್ನು ಜಿಲ್ಲಾಡಳಿತದಿಂದ ಕೈಗೊಂಡಿದೆ.” ವೈ.ಎಸ್‌. ಪಾಟೀಲ್‌, ಜಿಲ್ಲಾಧಿಕಾರಿ.

“ಒಮಿಕ್ರಾನ್‌ ಈಗ ಎಲ್ಲ ಕಡೆ ಹರಡುತ್ತಿರುವ ಹಿನ್ನೆಲೆ, ಜಿಲ್ಲೆಯಲ್ಲಿ ಸೋಂಕು ಹರಡದಂತೆ ಕಾಪಾಡಲು ಪ್ರತಿ ಯೊಬ್ಬರೂ ಕೊರೊನಾ ಲಸಿಕೆ ಪಡೆಯ ಬೇಕು. ಮೊದಲನೇ ಕೊರೊನಾ ಲಸಿಕೆ ಪಡೆದವರು ತಪ್ಪದೇ ಎರಡನೇ ಲಸಿಕೆ ಪಡೆಯಬೇಕು. ಜಿಲ್ಲೆಯ ಕೊರೊನಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗು ತ್ತಿದೆ. ಜಿಲ್ಲೆಯಲ್ಲಿ ಶೇ.95ರಷ್ಟು ಜನರು ಲಸಿಕೆ ಪಡೆದಿದ್ದಾರೆ.” ಡಾ. ಕೇಶವರಾಜ್‌, ಕೊರೊನಾ ಲಸಿಕಾ ವಿತರಣಾ ಅಧಿಕಾರಿ.

– ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.