ನಾನು ಎಲ್ಲೂ ಹೋಗುವುದಿಲ್ಲ,ವಿದೇಶ ಪ್ರವಾಸ ರದ್ದಾಗಿದೆ : ಸಿಎಂ ಸ್ಪಷ್ಟನೆ
Team Udayavani, Dec 24, 2021, 8:01 PM IST
ಬೆಳಗಾವಿ : ‘ನಾನು ಎಲ್ಲೂ ಹೋಗುವುದಿಲ್ಲ,ದಾವೋಸ್ ಗೆ(ಸ್ವಿಟ್ಜರ್ಲೆಂಡ್) ಹೋಗುತ್ತಿಲ್ಲ,ಅಲ್ಲಿ ಕೋವಿಡ್ ಇರುವ ಕಾರಣ ಪ್ರವಾಸ ರದ್ದಾಗಿದೆ’ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ.
ಅಧಿವೇಶನ ಬಿತ್ತರಿಸಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದ ಹೇಳಿದ ಸಿಎಂ, ‘ಮಾತಿನಂತೆ 10 ದಿನ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದೇವೆ ಹಲವು ಸಮಸ್ಯೆಗಳನ್ನ ಚರ್ಚಿಸಿದ್ದೇವೆ. ಮಳೆ, ಪ್ರವಾಹದಲ್ಲಿ ಬೆಳೆ ನಷ್ಟಕ್ಕೆ ಪರಿಹಾರ ಕೊಟ್ಟಿದ್ದೇವೆ. ಕಂದಾಯ ಸಚಿವರು ಸಮರ್ಥವಾಗಿ ಉತ್ತರಿಸಿದ್ದಾರೆ. ವೇಗವಾಗಿ ಪರಿಹಾರ ವಿತರಿಸಿದ್ದೇವೆ.14 ಲಕ್ಷ ರೈತರಿಗೆ 700 ಕೋಟಿಗು ಹೆಚ್ಚು ಪರಿಹಾರ ವಿತರಿಸಿದ್ದೇವೆ’ ಎಂದರು.
ಸರ್ಕಾರ ರೈತರ ಪರ
‘ಹೆಚ್ಚಿನ ಪರಿಹಾರ ದೊರೆಯುವಂತೆ ಬಿಎಸ್ ವೈ ಸಲಹೆ ನೀಡಿದ್ದಾರೆ.ನಾವು ಅದಕ್ಕೆ ಸ್ಪಂದಿಸಿದ್ದೇವೆ. ಒಣ ಬೇಸಾಯಕ್ಕೆ ಹೆಕ್ಟರ್ ಗೆ ಇದ್ದ 6 ಸಾವಿರ ಪರಿಹಾರ 13 ಸಾವಿರಕ್ಕೆ ಏರಿಸಿದ್ದೇವೆ.ನೀರಾವರಿ 13 ದಿಂದ ಹೆಕ್ಟೇರ್ ಗೆ 25 ಸಾವಿರಕ್ಕೆ ಏರಿಸಿದ್ದೇವೆ. ನಮ್ಮ ಸರ್ಕಾರ ರೈತರ ಪರವಾಗಿರುವ ಸರ್ಕಾರ’ ಎಂದರು.
ಪುಂಡರಿಗೆ ಪಾಠ
ಕನ್ನಡದ ಅಸ್ಮಿತೆಗೆ ಬದ್ಧರಾಗಿದ್ದೇವೆ. ಪುಂಡರಿಗೆ ಪಾಠ ಕಲಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ದಿಗೆ ಸರ್ಕಾರ ಬದ್ಧ
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗಿದೆ.ಸರ್ಕಾರದಿಂದ ಸಚಿವ ಕಾರಜೋಳ ಉತ್ತರಿಸಲು ಸಿದ್ಧರಿದ್ದರು.ಆದರೆ, ಕಾಂಗ್ರೆಸ್ ನವರು ಧರಣಿ ನಡೆಸಿ ಸಚಿವರು ಉತ್ತರಿಸಲು ಬಿಡಲಿಲ್ಲ.ಪ್ರತಿಪಕ್ಷಗಳಿಗೆ ನಿಜವಾದ ಕಾಳಜಿ ಇದ್ದಿದ್ದರೆ ಸರ್ಕಾರದ ಉತ್ತರ ಕೇಳಬೇಕಿತ್ತು.ಉತ್ತರ ಕರ್ನಾಟಕದ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾಗಿಲ್ಲ
ಮತಾಂತರ ನಿಷೇಧ ವಿಧೇಯಕ ಪಾಸ್ ಮಾಡುವ ಮೂಲಕ ಎಲ್ಲರ ಧರ್ಮಗಳ ರಕ್ಷಣೆಗೆ ಒತ್ತು ನೀಡಿದ್ದೇವೆ..ಪೂರಕ ಅಂದಾಜುಗಳಲ್ಲಿ ಎಸ್.ಸಿ ಎಸ್.ಟಿ ಗೆ 500 ಕೋಟಿ ಅನುದಾನ ಒದಗಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಕ್ಕೆ ಅನುದಾನ ಒದಗಿಸಿದ್ದೇವೆ. ಜನವರಿ ತಿಂಗಳಲ್ಲಿ ಜಂಟಿ ಸದನ ಕರೆಯುವ ತೀರ್ಮಾನ ಮಾಡಿದ್ದೇವೆ. ವಿಪಕ್ಷದವರು ಅನಗತ್ಯವಾಗಿ ಧರಣಿ ಮಾಡಿದರು. ಉತ್ತರ ಕರ್ನಾಟಕದ ಬಗ್ಗೆ ಬೇರೆ ಬೇರೆ ರೂಪದಲ್ಲಿ ಚರ್ಚೆಯಾಗಿದೆ. ನಾನು ನೀರಾವರಿ ಸಚಿವನಾಗಿ, ಗೃಹ ಸಚಿವನಾಗಿ, ಮುಖ್ಯಮಂತ್ರಿಯಾಗಿ ಉತ್ತರ ಕರ್ನಾಟಕದ ಭಾಗಕ್ಕೆ ಏನು ಕೆಲಸ ಮಾಡಿದ್ದೇನೆ ಈ ಭಾಗದ ಜನರೇ ಹೇಳುತ್ತಾರೆ.ಬೇರೆಯವರಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾಗಿಲ್ಲ.ಜನರನ್ನೇ ಕೇಳಿ ಅವರು ಹೇಳುತ್ತಾರೆ ಎಂದರು.
ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ನಾವು ಬಂದ ಮೇಲೆ ಪ್ರಗತಿ ಸಾಧಿಸುತ್ತಿದ್ದೇವೆ.ಕಾಂಗ್ರೆಸ್ ನವರು ಏನು ಮಾಡಿದರು? ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಅಂದರು ಆದರೆ ಹಣ ಬಿಡುಗಡೆ ಮಾಡಲಿಲ್ಲ. ಇವರಿಂದ ನಾವು ಉತ್ತರ ಕರ್ನಾಟಕದ ಅಭಿವೃದ್ದಿ ವಿಚಾರವಾಗಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಹೊಸ ವರ್ಷಾಚರಣೆಗೆ ಈಗಿರುವ ಕೋವಿಡ್ ಮಾರ್ಗಸೂಚಿಯೇ ಮುಂದುವರಿಯುತ್ತದೆ. ಹೊಟೆಲ್ ಗಳಲ್ಲಿ 50 ಪರ್ಸೆಂಟ್ ಕಾರ್ಯನಿರ್ವಹಣೆಗೆ ಅವಕಾಶವಿದೆ.ಅದು ಮುಂದುವರಿಯುತ್ತದೆ ಎಂದರು.
ನಮ್ಮ ಸಂಖ್ಯಾ ಬಲದಲ್ಲೇ ವಿಧೇಯಕ ಪಾಸ್
ಒತ್ತಡದಿಂದ ನಾವು ಮತಾಂತರ ಕಾಯ್ದೆ ಪಾಸ್ ಮಾಡಲು ಹೋಗಿಲ್ಲ. ಪರಿಷತ್ ನಲ್ಲಿ ನಮಗೆ ಬಹುಮತ ಇಲ್ಲ.ನಾವು ಬೇರೆ ಮಾರ್ಗಗಳಲ್ಲಿ ಬಿಲ್ ಪಾಸ್ ಮಾಡಲು ಹೋಗಿಲ್ಲ. ನಮ್ಮ ಸದಸ್ಯರನ್ನೇ ಕರೆಸಿಕೊಳ್ಳುವ ಪ್ರಯತ್ನ ಮಾಡಿದ್ದೆವು. ಕೊನೆ ಹಂತದಲ್ಲಿ ಒತ್ತಡದಲ್ಲಿ ಬಿಲ್ ಪಾಸ್ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಮುಂದಿನ ಅಧಿವೇಶನದಲ್ಲಿ ನಮ್ಮ ಸಂಖ್ಯಾ ಬಲದಲ್ಲೇ ವಿಧೇಯಕ ಪಾಸ್ ಮಾಡಿಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.