ಸಾರ್ವಜನಿಕ ಬದುಕಿನಲ್ಲಿ ಎಲ್ಲರೂ ಗ್ರಾಹಕರೇ :ಗೋಖಲೆ ಘಾಳಪ್ಪ


Team Udayavani, Dec 25, 2021, 11:57 AM IST

1-sds

 ದಾವಣಗೆರೆ: ಗ್ರಾಹಕರು ಕೊಳ್ಳುವ, ಪಡೆಯುವ ಸೇವೆಯ ಗುಣಮಟ್ಟ, ಪ್ರಮಾಣ, ಬೆಲೆ ಒಳಗೊಂಡಂತೆ ಮುಖ್ಯ ಅಂಶಗಳನ್ನ ಪರಿಶೀಲಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಗೋಖಲೆ ಘಾಳಪ್ಪ ತಿಳಿಸಿದರು.

ಶುಕ್ರವಾರ ಜನತಾಬಜಾರ್‌ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಬದುಕಿನಲ್ಲಿ ಎಲ್ಲರೂ ಗ್ರಾಹಕರೇ. ಯಾವುದೇ ವಸ್ತು ಕೊಂಡುಕೊಳ್ಳುವ ಮೊದಲು ಗ್ರಾಹಕರು ಗುಣಮಟ್ಟ ಉತ್ತಮ, ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿಯೇ ಖರೀದಿಸಬೇಕು ಎಂದರು. ಗ್ರಾಹಕರು ಪಡೆಯುವ ಸೇವೆ, ಖರೀದಿಗೆ ಪ್ರತಿಯಾಗಿ ಬಿಲ್‌ ಅಥವಾ ರಸೀದಿ ತಪ್ಪದೆ ಕೇಳಿ ಪಡೆಯಬೇಕು. ಗ್ರಾಹಕರು ಎಚ್ಚರ ಆಗುವವರೆಗೂ ಅನ್ಯಾಯ, ಶೋಷಣೆ ಹಾಗೂ ಮೋಸ ನಿಲ್ಲುವುದಿಲ್ಲ. ವ್ಯಾಪಾರ, ಖರೀದಿ, ಸೇವೆ ಹೀಗೆ ವಿವಿಧ ವ್ಯವಹಾರಗಳಲ್ಲಿ ವಂಚನೆ, ಅನ್ಯಾಯ ಹಾಗೂ ಮೋಸಕ್ಕೆ ಒಳಗಾಗುವ ಗ್ರಾಹಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಸರ್ಕಾರ ಐಎಸ್‌ಐ ಮಾರ್ಕ್‌ ಹೊಂದಿರುವ ಗುಣಮಟ್ಟದ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿದೆ. ಆದರೆ, ಸಾರ್ವಜನಿಕರು ಕಾನೂನು, ಪೊಲೀಸರಿಂದ ತಪ್ಪಿಸಿಕೊಳ್ಳಲು ತೋರಿಕೆಗಾಗಿ, ಕಡಿಮೆ ದರದ, ಕಳಪೆ ಗುಣಮಟ್ಟದ ಹೆಲ್ಮೆಟ್‌ ಧರಿಸಿ, ಅಪಘಾತಕ್ಕೊಳಗಾದಾಗ, ಜೀವ ಬಲಿಕೊಡುತ್ತಿರುವುದು ಸಾರ್ವಜನಿಕರ ಅಸಡ್ಡೆಗೆ ಉದಾಹರಣೆ. ಇನ್ನಾದರೂ ಸಾರ್ವಜನಿಕರು ತಮ್ಮ ಹಕ್ಕು ಕರ್ತವ್ಯಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಜಿಲ್ಲೆಯಲ್ಲಿ ಮೋಸ , ವಂಚನೆ ಗೆ ಒಳಗಾಗುವವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಹೆಚ್ಚು ದೂರು ಸಲ್ಲಿಸುವಂತಾಗಲಿ. ಆಗಿರುವ ವಂಚನೆ, ಮೋಸಕ್ಕೆ ಪರಿಹಾರ ಪಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಜ್ಯೋತಿ ರಾಧೇಶ್‌ ಜಂಬಗಿ ಮಾತನಾಡಿ, ಗ್ರಾಹಕರ ಸಂÃಕ್ಷಣಾ ಕಾಯ್ದೆಗೆ 2019 ರಲ್ಲಿ ತಿದ್ದುಪಡಿಯಿಂದ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ರಕ್ಷಣೆ ಹಾಗೂ ಹಕ್ಕು ದೊರೆತಂತಾಗಿದೆ. ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಇದೀಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವಾಗಿ ಬದಲಾಗಿದೆ ಎಂದು ತಿಳಿಸಿದರು.

5 ಲಕ್ಷ ರೂಪಾಯಿ ವರೆಗಿನ ಖರೀದಿ, ಸೇವೆ ನ್ಯೂನತೆಗೆ ಸಂಬಂ ಧಿಸಿದಂತೆ ದೂರು ಸಲ್ಲಿಸಲು ಯಾವುದೇ ಶುಲ್ಕವಿಲ್ಲ. 5 ರಿಂದ 10 ಲಕ್ಷದವರೆಗೆ 200 ರೂಪಾಯಿ ಮಾತ್ರ ಶುಲ್ಕ ನಿಗದಿಪಡಿಸಲಾಗಿದೆ. ತನ್ನದಲ್ಲದ ತಪ್ಪಿಗೆ ಬ್ಯಾಂಕ್‌ನಿಂದ ಹಣ ಕಳೆದುಕೊಂಡ ಜಿಲ್ಲೆಯ ಗ್ರಾಹಕರೊಬ್ಬರು ಆಯೋಗಕ್ಕೆ ದೂರು ಸಲ್ಲಿಸಿ, ಹಣ ಮರಳಿ ಪಡೆದುಕೊಂಡ ಉದಾಹರಣೆ ಇದೆ. ನೂತನ ಕಾಯ್ದೆಯು ಜನರ ದಾರಿ ತಪ್ಪಿಸುವಂತಹ ಜಾಹೀರಾತುಗಳಿಗೆ ಕಡಿವಾಣ ಹಾಕಿದೆ ಎಂದು ತಿಳಿಸಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಚ್‌.ಎಸ್‌. ರಾಜು ಮಾತನಾಡಿ, ಜಿಲ್ಲೆಯಲ್ಲಿ ತೂಕ ಮತ್ತು ಅಳತೆಗೆ ಸಂಬಂಧಿ ಸಿದಂತೆ ಒಟ್ಟು 1297 ತಪಾಸಣೆ ನಡೆಸಿದ್ದು, 386 ಅಪರಾಧ ಪತ್ತೆಯಾಗಿದೆ. 6.70 ಲಕ್ಷ ರೂಪಾಯಿ ದಂಡ ವಿಧಿ ಸಲಾಗಿದೆ. ದಾವಣಗೆರೆಯಲ್ಲಿ ಆಟೋಗಳಿಗೆ ಮೀಟರ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. 1.6 ಕಿ.ಮೀ. ವರೆಗಿನ ಪ್ರಯಾಣಕ್ಕೆ ಗರಿಷ್ಟ 30 ರೂಪಾಯಿ ದರ ನಿಗದಿಪಡಿಸಿದೆ. ಹೆಚ್ಚಿನ ದರವನ್ನು ಆಟೋ ಚಾಲಕರು ಕೇಳಿದರೆ ಪೊಲೀಸ್‌, ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ದೂರು ಸಲ್ಲಿಸಬಹುದಾಗಿದೆ. ಎಚ್ಚೆತ್ತ ಗ್ರಾಹಕನೇ ಸಶಕ್ತ ಗ್ರಾಹಕನಾಗಲು ಸಾಧ್ಯ ಎಂದು ತಿಳಿಸಿದರು. ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆಹಾರ ಇಲಾಖೆ ನಿವೃತ್ತ ವ್ಯವಸ್ಥಾಪಕ ಪಿ. ಅಂಜಿನಪ್ಪ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷೆ ಎಚ್‌. ಅನಿತಾ, ಆಹಾರ ಇಲಾಖೆ ಉಪನಿರ್ದೇಶಕ ಇಂದು ಕಡೇ ಕಾರ್ತಿಕೋತ್ಸವ ಬಿ.ಟಿ. ಪ್ರಕಾಶ್‌ ಇದ್ದರು.

ದೂರು ಸಲ್ಲಿಕೆಯೇ ಅಪರೂಪ

ದಾವಣಗೆರೆ ಜಿಲ್ಲೆಯಲ್ಲಿ ಗ್ರಾಹಕರಿಂದ ದೂರುಗಳು ಸಲ್ಲಿಕೆಯಾಗುವುದೇ ಅಪರೂಪವಾಗಿದೆ. ಅಂದಮಾತ್ರಕ್ಕೆ ಜಿಲ್ಲೆಯಲ್ಲಿ ಗ್ರಾಹಕರಿಗೆ ಮೋಸ, ವಂಚನೆ, ಶೋಷಣೆ ನಡೆಯುತ್ತಿಲ್ಲ ಎಂದು ಅರ್ಥವಲ್ಲ. ಯಾರೂ ಕೂಡ ದೂರು ಸಲ್ಲಿಸಲು, ತಮ್ಮ ಹಕ್ಕು ಚಲಾಯಿಸಲು ಮುಂದಾಗುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅನ್ಯಾಯ, ಮೋಸಕ್ಕೆ ಒಳಗಾದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಧ್ಯಕ್ಷ ಗೋಖಲೆ ಘಾಳಪ್ಪ ತಿಳಿಸಿದರು.

ಪರಿಹಾರ ಮಿತಿ ಹೆಚ್ಚಳ

ಗ್ರಾಹಕ ತನ್ನ ಗ್ರಾಹಕತ್ವ ಸಾಬೀತಿಗೆ ತಪ್ಪದೆ ರಸೀದಿ ಅಥವಾ ಬಿಲ್‌ ಪಡೆಯಲೇಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ 20 ಸಾವಿರ ರೂಪಾಯಿ ಪರಿಹಾರದ ಮಿತಿಯನ್ನು ಇದೀಗ 1 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಇ-ಕಾಮರ್ಸ್‌, ಆನ್‌ಲೈ ನ್‌ ವ್ಯವಹಾರಗಳು ಕೂಡ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವ್ಯಾಪ್ತಿಗೆ ಬರುತ್ತದೆ. ಗ್ರಾಹಕ ಮೋಸಕ್ಕೆ, ವಂಚನೆಗೆ ಒಳಗಾದ ಪ್ರಕರಣಕ್ಕೆ ಸಂಬಂ ಧಿಸಿದಂತೆ 2 ವರ್ಷಗಳ ಒಳಗೆ ಅಗತ್ಯ ದಾಖಲೆ, ಬಿಲ್‌, ರಸೀದಿಯೊಂದಿಗೆ ದೂರು ಸಲ್ಲಿಸಬೇಕು. ತಾವಿರುವ ವ್ಯಾಪ್ತಿಯಲ್ಲಿಯೇ ದೂರು ಸಲ್ಲಿಸಬಹುದಾಗಿದೆ ಎಂದು ಜ್ಯೋತಿ ರಾಧೇಶ್‌ ಜಂಬಗಿ ಮಾಹಿತಿ ನೀಡಿದರು.

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP Waqf protest: Renukacharya, Gayatri Siddeshwar and many others taken into police custody

Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್‌ ವಶಕ್ಕೆ

BBommai

Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

1-renuuu

Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ

Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ

Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.