ಶತಮಾನದ ಬಳಿಕ ದ್ಯಾಮವ್ವ-ದುರ್ಗವ್ವ ಜಾತ್ರೆ
ಜಾನಪದ ಕಲಾವಿದರು ಹಾಗೂ ಮಜಲಿನ ಕಲಾ ತಂಡಗಳ ಪ್ರದರ್ಶನಗಳು ಗಮನ ಸೆಳೆದವು.
Team Udayavani, Dec 25, 2021, 4:05 PM IST
ಧಾರವಾಡ: ಇಲ್ಲಿಯ ಕಸಬಾಗೌಡರ ಓಣಿಯ ಶ್ರೀ ದ್ಯಾಮವ್ವ-ದುರ್ಗವ್ವ ದೇವಸ್ಥಾನದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಶತಮಾನದ ಬಳಿಕ ಶುಕ್ರವಾರ ಜರುಗಿತು. ಈ ಜಾತ್ರೆಯು ಇದಕ್ಕೂ ಮುನ್ನ 1899ರಲ್ಲಿ ನಡೆದಿತ್ತು. ಬಳಿಕ ಹರಿಜಾತ್ರೆ ನಡೆದಿದ್ದು, ಬಿಟ್ಟರೆ ಇದೀಗ ಬರೋಬ್ಬರಿ 122 ವರ್ಷಗಳ ಬಳಿಕ ನೂತನ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಸಾಗಿತು. ರಥೋತ್ಸವಕ್ಕೆ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಿರೇಮಠದ ಗದಿಗಯ್ಯ ಸ್ವಾಮೀಜಿ ಹಾಗೂ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.
ದೇವಸ್ಥಾನದಿಂದ ಆರಂಭಗೊಂಡ ದ್ಯಾಮವ್ವ-ದುರ್ಗವ್ವ ಪ್ರತಿಷ್ಠಾಪಿಸಿದ್ದ ರಥೋತ್ಸವವು ಸಂಚರಿಸಿದ ಮಾರ್ಗಗಳೆಲ್ಲವೂ ಭಂಡಾರದಿಂದ ಮಿಂದೆದ್ದವು. ಭಕ್ತರಂತೂ ದೇವಿಯರ ಜಯಘೋಷಣೆಗಳ ಮಧ್ಯೆ ಭಕ್ತಿಯಿಂದ ಭಂಡಾರದಲ್ಲಿ ಮಿಂದೆದ್ದರು. ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದಾರಿ ಉದ್ದಕ್ಕೂ ದೇವಿಯರ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಕಾಮನಕಟ್ಟಿ, ರವಿವಾರ ಪೇಟೆ, ಶ್ರೀನಗರೇಶ್ವರ ದೇವಸ್ಥಾನ, ಶ್ರೀ ಕಾಳಮ್ಮ ದೇವಸ್ಥಾನ, ಮಟ್ಟಿ ಪರಪ್ಪನಕೂಟದ ಮಾರ್ಗವಾಗಿ ಮಹಾರಥೋತ್ಸವವು ರಾತ್ರಿ ಹೊತ್ತಿಗೆ ದೇವಸ್ಥಾನಕ್ಕೆ ಮರಳಿ ಸಂಪನ್ನಗೊಂಡಿತು. ವಿವಿಧ ಜಾನಪದ ಕಲಾವಿದರು ಹಾಗೂ ಮಜಲಿನ ಕಲಾ ತಂಡಗಳ ಪ್ರದರ್ಶನಗಳು ಗಮನ ಸೆಳೆದವು.
ಧಾರ್ಮಿಕ ವಿಧಿ-ವಿಧಾನ: ರಥೋತ್ಸವಕ್ಕೂ ಮುನ್ನ ಬೆಳಗ್ಗೆ ಮೂರ್ತಿ ಉತ್ಥಾಪನಾ, ಆವಾಹಿತ ದೇವತಾ ಪೂಜಾ ನೆರವೇರಿಸಲಾಯಿತು. ಬಳಿಕ 8:50ರಿಂದ 10:28 ಗಂಟೆಯೊಳಗೆ ನೂತನ ರಥ ಹಾಗೂ ದೇವಿಯರ ಪ್ರಾಣ ಪ್ರತಿಷ್ಠಾಪನಾ ನೇತ್ರೋನಿಲನ, ಕದಳಿಛೇದನ, ಪ್ರಾಣಪ್ರತಿಷ್ಠಾ ಹೋಮ, ಮೂರ್ತಿ ಹೋಮ, ಜಯಾದಿ, ಪ್ರಾಯಶ್ಚಿತ್ತ ಹೋಮ ಜರುಗಿತು.
ನಂತರ ದೇವಾಲಯ ಬಲಿಹರಣ, ರಥಕ್ಕೆ ಬಲಿಹರಣ, ಪಂಚಾಮೃತಾಭಿಷೇಕ ಅಲಂಕಾರ ಪೂಜೆ ನೆರವೇರಿದ ಬಳಿಕ ಮಧ್ಯಾಹ್ನ 12:22 ಗಂಟೆಗೆ ದೇವಿಯರ ಮಾಂಗಲ್ಯಧಾರಣೆಯೊಂದಿಗೆ ಉಡಿ ಸಮರ್ಪಿಸಲಾಯಿತು. ಬಳಿಕ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದ ಬಳಿಕ ಮಹಾಪ್ರಸಾದ ವಿತರಣೆ ನಡೆಯಿತು. ರಥೋತ್ಸವ ಪ್ರಯುಕ್ತ ಭಕ್ತರಿಂದ ದೇವಿಯರಿಗೆ ಉಡಿ ತುಂಬಲು ಅವಕಾಶ ಇರಲಿಲ್ಲ. ಶನಿವಾರ ಭಕ್ತರಿಂದ ದೇವಿಯರಿಗೆ ಉಡಿ ತುಂಬಲು ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.