ಕರ್ನಾಟಕದಿಂದ ಜನ ತಾಳಿದೆ ಮರಾಠಿ ರಂಗಭೂಮಿ
ಸಾಹಿತ್ಯದ ಕಾರ್ಯಕ್ರಮಗಳ ನಿರಂತರವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
Team Udayavani, Dec 25, 2021, 5:42 PM IST
ರಬಕವಿ-ಬನಹಟ್ಟಿ: ಕರ್ನಾಟಕದಿಂದ ಮರಾಠಿ ರಂಗಭೂಮಿ ಹುಟ್ಟಿಕೊಂಡಿದೆ ಎಂದು ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು. ನಗರದ ಈಶ್ವರಲಿಂಗ ಮೈದಾನದಲ್ಲಿ ಪಿ.ಬಿ. ಧುತ್ತರಗಿ ರಂಗೋತ್ಸವ-2021 ಉದ್ಘಾಟನೆ, ರಂಗಗೀತೆ, ರಂಗ ಗೌರವ, ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ರಂಗಗೀತೆಗಳು ಅಂದು-ಇಂದು ಕುರಿತು ಮಾತನಾಡಿದರು.
ಕನ್ನಡ ರಂಗಭೂಮಿ ಪ್ರೇರಣೆಯಿಂದಲೇ ಮರಾಠಿ ರಂಗಭೂಮಿ ಬೆಳೆದದ್ದು ಐತಿಹಾಸಿಕ ಸಂಗತಿಯಾಗಿದೆ. ಕನ್ನಡದ ರಂಗಗೀತೆಗಳು ಮಾಯವಾಗುತ್ತಿರುವುದು ವಿಷಾದನೀಯ. 1980 ರ ನಂತರ ಬಂದ ಚಲನಚಿತ್ರ ಸಂಗೀತದಿಂದ ರಂಗಗೀತೆಗಳು ಹಿನ್ನೆಲೆಗೆ ಬಂದಿವೆ. ಸಂಗೀತಕ್ಕೆ ವಿಶೇಷ ಸ್ಥಾನವಿದೆ. ಸಂಗೀತದ ಬಗ್ಗೆ ಒಲವು ಕಡಿಮೆ ಆಗಿದೆ. ರಂಗಗೀತೆಗಳು ಬದುಕಲು ಅದನ್ನು ಕೇಳುವವರು ಬೇಕು. ರಂಗಗೀತೆಗಳು ಉಳಿಯುವಂತಾಗಲು ಎಲ್ಲರು ಪ್ರಯತ್ನಿಸಬೇಕು.
ರಂಗಗೀತೆಗಳನ್ನು ಪುನಶ್ಚೇತನಗೊಳಿಸುವುದು ಅವಶ್ಯ. ಆ ಕೆಲಸ ಆಗಬೇಕಿದೆ ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯ ಎಂದರು.
ಸಾಹಿತಿ ಡಾ| ಅಶೋಕ ನರೋಡೆ ಮಾತನಾಡಿ, ನಾಟಕ ಒಂದು ಪರಿಣಾಮಕಾರಿ ಮಾಧ್ಯಮ, ನಾಟಕ ಪ್ರತಿಕ್ಷಣ ಹೊಸದನ್ನು ಸೃಷ್ಟಿಸುತ್ತದೆ. ದುತ್ತರಗಿಯವರನ್ನು ನೆನೆಪಿಸುವುದು ಸಂತಸದ ವಿಷಯ. ರಬಕವಿ-ಬನಹಟ್ಟಿಯಲ್ಲಿ ಸಂಗೀತ, ನಾಟಕ, ಸಾಹಿತ್ಯದ ಕಾರ್ಯಕ್ರಮಗಳ ನಿರಂತರವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಹಾರುಗೇರಿಯ ಶರಣ ವಿಚಾರ ವಾಹಿನಿಯ ಅಧ್ಯಕ್ಷ ಆಯ್. ಆರ್. ಮಠಪತಿ ಕಾರ್ಯಕ್ರಮ ಉದ್ಘಾಟಿಸಿದರು. ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇಳಕಲ್ಲನ ವಿಶ್ವನಾಥ ವಂಶಾಕೃತಮಠ, ಗುಳೇದಗುಡ್ಡದ ಡಾ| ಸಣ್ಣವೀರಣ್ಣ ದೊಡ್ಡಮನಿ, ಕಾನಿಪ ಅಧ್ಯಕ್ಷ ನೀಲಕಂಠ ದಾತಾರ, ಹಿರಿಯ ಸಾಹಿತಿ ಜಯವಂತ ಕಾಡದೇವರ, ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿದರು.
ಕವಟಗಿಯ ಸಂಗಮೇಶ ಗುರವ, ಬನಹಟ್ಟಿಯ ಶ್ರೀಶೈಲ ಹಲ್ಯಾಳ, ರಾಮಪುರದ ಅರವಿಂದ ರಾಸೂರ ಹಾಗೂ ರಫೀಕ್ ಹನಗಂಡಿಯವರಿಗೆ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಿಕಾರ್ಜುನ ಹುಲಗಬಾಳಿ, ಜಿ. ಎಸ್. ವಡಗಾಂವಿ, ರಾಜಶೇಖರ ಮಾಲಾಪುರ, ಶ್ರೀಶೈಲ ಧಬಾಡಿ, ಶ್ರೀಪಾದ ಬಾಣಕಾರ, ದಾನಪ್ಪ ಹುಲಜತ್ತಿ, ದ್ರಾಕ್ಷಾಯಣಿ ಮಂಡಿ, ಶ್ರೀಕಾಂತ ಕೆಂದೂಳಿ, ಡಾ. ಡಿ. ಎ. ಬಾಗಲಕೋಟ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.