ಸುಲಭದ ಆರೋಗ್ಯ ಸೇವೆಗೆ ಡಿಜಿಟಲ್ ವ್ಯವಸ್ಥೆ
ಎಂಐಟಿ ವಿದ್ಯಾರ್ಥಿಗಳಿಂದ ಆವಿಷ್ಕಾರ
Team Udayavani, Dec 26, 2021, 6:45 AM IST
ಉಡುಪಿ: ಆನ್‌ಲೈನ್ ಮೂಲಕ ಸುಲಭವಾಗುವ, ಕೈಗೆಟಕುವ ಮಾನಸಿಕ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಸಂಪೂರ್ಣ ಡಿಜಿಟಲ್ ವ್ಯವಸ್ಥೆ ರೂಪಿಸಿದ್ದಾರೆ.
ವಿದ್ಯಾರ್ಥಿಗಳಾದ ಅರ್ಕೊ ಚಟ್ಟೋಪಾ ಧ್ಯಾಯ, ಎನ್ರಿಕ್ ಫೆರಾವೊ, ಪ್ರಣವ್ ರೆಡ್ಡಿ, ಪ್ರಿಯಾಂಶು ಗುಪ್ತಾ ಈ ಕಲ್ಪನೆ ಅಭಿವೃದ್ಧಿಪಡಿಸಿದ್ದರು. ಅದಕ್ಕಾಗಿ ಅವರು “ಅಮಿಗೋ’ವನ್ನು ಹುಟ್ಟು ಹಾಕಿದರು. ಅಮಿಗೋ ಭಾರತದ ಮೊದಲ ಆಲ್ ಇನ್ ಒನ್ ಮಾನಸಿಕ ಆರೋಗ್ಯ ಪರಿಹಾರ ವಾಗಿದೆ. ಇದು ಮಾನಸಿಕ ಆರೋಗ್ಯ ಮೂಲಸೌಕರ್ಯಕ್ಕಾಗಿ ದೇಶಾದ್ಯಂತ ಕೈಗೆಟಕುವ ದರದಲ್ಲಿ ಅತ್ಯಂತ ವೇಗವಾದ, ಸುರಕ್ಷಿತ, ಅತ್ಯಂತ ಪರಿಣಾಮಕಾರಿ, ವಿಶ್ವಾಸಾರ್ಹ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡುವ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಾಗಿದೆ. ವೃತ್ತಿಪರರು, ಸಹಾಯದ ಅಗತ್ಯವಿರುವ ಜನರ ನಡುವೆ ಇದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
ಸ್ಟಾರ್ಟ್‌ಅಪ್ ಮೂಲಕ ಕಾರ್ಯನಿರ್ವಹಣೆ ಸ್ಟಾರ್ಟ್‌ಅಪ್ ಇಂಡಿಯಾ ಕಾರ್ಯ ಕ್ರಮದಡಿಯಲ್ಲಿ ಅಮಿಗೋ ಕೇಂದ್ರ ಸರಕಾರದ ಡಿಪಿಐಐಟಿ (ಡಿಪಾರ್ಟ್ ಮೆಂಟ್ – ಪ್ರಮೋಷನ್ ಆ-ಇಂಡಸ್ಟ್ರಿ ಆ್ಯಂಡ್ ಇಂಟರ್ನಲ್ ಟ್ರೇಡ್)ನಿಂದ ಗುರುತಿಸಲ್ಪಟ್ಟಿದೆ. ಯುನೈಟೆಡ್ ನೇಶನ್ಸ್ ಸಸ್ಟೆನೇಬಲ್ ಡೆವಲಪ್‌ಮೆಂಟ್ ಗುರಿ 3ಕ್ಕೆ ಅನುಗುಣವಾಗಿ ಈ ಸ್ಟಾರ್ಟ್ ಅಪ್ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಪ್ರಮುಖ ಪ್ರಾದೇಶಿಕ ಭಾಷೆಗಳನ್ನು ಒಳ ಗೊಂಡಂತೆ 13 ಭಾಷೆಗಳಲ್ಲಿ ಸೆಷನ್‌ಗಳನ್ನು ನಡೆಸಬಹುದಾದ ಹೆಚ್ಚಿನ ಪರಿಶೀಲನ ಮನಃಶಾಸ್ತ್ರಜ್ಞರ ಜಾಲವನ್ನು ಅಮಿಗೊ ಹೊಂದಿದೆ. ಖನ್ನತೆ, ಆತಂಕ, ಕೋಪದ ಸಮಸ್ಯೆ, ಜೀವನ ತರಬೇತಿ ಮುಂತಾದ ಸಮಸ್ಯೆಯನ್ನು ಒಳಗೊಂಡ ಹಲವು ವಿಷಯಗಳಿಗೆ ಸಮಾಲೋಚನೆ ಲಭ್ಯವಿದೆ.
2 ನಿಮಿಷಗಳಲ್ಲಿ ಬುಕಿಂಗ್ ಅಮಿಗೋ ಪ್ರತಿಯೊಬ್ಬರ ಸೇರ್ಪಡೆ ಉತ್ತೇಜಿಸುತ್ತದೆ. ವಿಭಿನ್ನ ಲೈಂಗಿಕ ಆಭ್ಯಾಸದವರಿಗೂ ಸೇವೆ ಒದಗಿಸುತ್ತದೆ. ಎಲ್ಲ ಚಿಕಿತ್ಸಕರನ್ನು ಕಟ್ಟುನಿಟ್ಟಾದ ಪ್ರಕ್ರಿಯೆ ಮೂಲಕ ನೇಮಿಸಿಕೊಳ್ಳ ಲಾಗುತ್ತದೆ. ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಅಮಿಗೋದಲ್ಲಿ ಕೇವಲ 2 ನಿಮಿಷಗಳಲ್ಲಿ ಬುಕ್ಕಿಂಗ್ ಪ್ರಕ್ರಿಯೆ ಮಾಡಬಹುದು. ಪ್ರತಿ ಯೊಬ್ಬರ ಅಗತ್ಯ ಸರಿಹೊಂದಿಸಲು ಸೆಷನ್‌ಗಳಿಗೆ ಬೇರೆ ಬೇರೆ ಬೆಲೆ ನಿಗದಿಪಡಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು.
ಸುಲಭದಲ್ಲಿ ಸೇವೆ :
ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನ ದಂತೆ ಭಾರತದಲ್ಲಿ ಶೇ. 6.5 ಜನರು ಖನ್ನತೆಗೆ ಒಳಗಾಗುತ್ತಾರೆ. ಭಾರತವು ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೆ ತುತ್ತಾದ ದೇಶಗಳ ಪೈಕಿ ಒಂದಾಗಿ ದ್ದರೂ ಸಹ 2020ರಲ್ಲಿ ದೇಶದಲ್ಲಿ ಕೋವಿಡ್‌ನಿಂದ ಹೆಚ್ಚಿನವರು ಆತ್ಮಹತ್ಯೆ ಯಿಂದ ಸಾವನ್ನಪ್ಪಿದ್ದಾರೆ. ಆನ್‌ಲೈನ್ ಸಂವಹನವು ಹೊಸ ಸವಾಲು ಹುಟ್ಟು ಹಾಕಿದೆ. ಬಿಲ್ ಪಾವತಿಯಿಂದ ಹಿಡಿದು ಆನ್‌ಲೈನ್ ತರಗತಿ, ಸಭೆಗಳವರೆಗೆ ಕೆಲವೊಂದು ಕ್ಲಿಕ್‌ನಿಂದಲೇ ಸಾಧ್ಯ. ಸಾಮಾಜಿಕ ಅಂತರ ನಿವಾರಿಸಿ ವೈದ್ಯರೊಂದಿಗೆ ಆನ್‌ಲೈನ್ ಸಮಾಲೋಚನೆಗಾಗಿ ವಿವಿಧ ವೇದಿಕೆ ಅಭಿವೃದ್ಧಿಪಡಿಸಿದೆ. ಈ ಮೂಲಕ ಕೇವಲ ಒಂದೇ ಒಂದು ಕ್ಲಿಕ್‌ನಿಂದ ವೈದ್ಯರ ಸೇವೆ ಪಡೆಯಬಹುದಾಗಿದೆ.
ಬಳಕೆದಾರರಿಗೆ ಕ್ರಾಸ್-ಪ್ಲಾಟ್‌ಫಾರ್ಮ್ ಅನುಭವ ಪಡೆಯಲು ನಾವು ಐಒಎಸ್ ಅಪ್ಲಿಕೇಶನ್ ಮತ್ತು ವೆಬ್ ಅಪ್ಲಿಕೇಶನ್ ಪ್ರಾರಂಭಿಸಲಿದ್ದೇವೆ. ಶೀಘ್ರದಲ್ಲೇ ಅಂತರ್ಜಾಲದಲ್ಲಿ ನೋಡುವ ಎಲ್ಲವನ್ನೂ ನಂಬುವುದಕ್ಕಿಂತ ಹೆಚ್ಚಾಗಿ ಸ್ವಯಂ-ಆರೈಕೆಯಲ್ಲಿ ತೊಡಗುವ ಜನರು ಮಾನಸಿಕ ಆರೋಗ್ಯ ಮತ್ತು ಕುರಿತು ಪರಿಶೀಲಿಸಬಹುದಾದ ಮಾಹಿತಿ, ಅನಾರೋಗ್ಯಗಳ ವಿವರ ಒದಗಿಸಲಿದ್ದೇವೆ. ಆನ್‌ಲೈನ್ ಮೂಲಕ ಖಾಸಗಿ ಸಮಾಲೋಚನೆ ಸುರಕ್ಷಿತ, ಪರಿಣಾಮಕಾರಿ ಮತ್ತು ಸುಲಭ. –ಅರ್ಕೊ ಚಟ್ಟೋಪಾಧ್ಯಾಯ, ಅಮಿಗೋದ ಸಂಸ್ಥಾಪಕ, ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.