ಪಾಕ್ ಜೈಲಿನಲ್ಲಿ 29 ವರ್ಷ ಕಳೆದು ಭಾರತಕ್ಕೆ ಮರಳಿದ ಕುಲದೀಪ್ ಸಿಂಗ್
Team Udayavani, Dec 25, 2021, 9:08 PM IST
ಜಮ್ಮು: ಪಾಕಿಸ್ಥಾನದ ಜೈಲಿನಲ್ಲಿ 29 ವರ್ಷಗಳ ಕಾಲ ಕಳೆದ ಕಥುವಾ ನಿವಾಸಿ ಕುಲದೀಪ್ ಸಿಂಗ್ ಶುಕ್ರವಾರ ರಾತ್ರಿ ಇಲ್ಲಿ ತಮ್ಮ ತವರು ಮನೆಗೆ ಮರಳಿದ್ದು, ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು.
ಔರಂಗಾಬಾದ್‌ನ ಮೊಹಮ್ಮದ್ ಗುಫ್ರಾನ್ ಅವರೊಂದಿಗೆ ಸಿಂಗ್ (53) ಅವರನ್ನು ಸೋಮವಾರ ಪಾಕಿಸ್ಥಾನ ಬಿಡುಗಡೆ ಮಾಡಿತ್ತು, ಅವರು ವಾಪಸಾತಿ ನಂತರ ಪಂಜಾಬ್‌ನ ಗುರುನಾನಕ್ ದೇವ್ ಆಸ್ಪತ್ರೆಯ ರೆಡ್‌ಕ್ರಾಸ್ ಭವನವನ್ನು ತಲುಪಿದ್ದರು.
1992 ರಲ್ಲಿ ಬಂಧಿಸಿದ ನಂತರ ಪಾಕಿಸ್ಥಾನಿ ಏಜೆನ್ಸಿಗಳು ಮೂರು ವರ್ಷಗಳ ಕಾಲ ತನಗೆ ಚಿತ್ರಹಿಂಸೆ ನೀಡಿವೆ ಎಂದು ಸಿಂಗ್ ಹೇಳಿದರು.ದೇಶಕ್ಕಾಗಿ ಯಾವುದೇ ತ್ಯಾಗದಿಂದ ಹಿಂದೆ ಸರಿಯಬೇಡಿ ಎಂದು ಕುಲದೀಪ್ ಸಿಂಗ್ ಯುವಕರನ್ನು ಕೇಳಿಕೊಂಡರು.
ಪಾಕ್ ನಲ್ಲಿ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತು ನಂತರ 25 ವರ್ಷಗಳ ಜೈಲು ಶಿಕ್ಷೆಗೆ ಕಳುಹಿಸಲಾಗಿತ್ತು. ಕಥುವಾದ ಬಿಲ್ಲವರ್‌ನಲ್ಲಿರುವ ಮಕ್ವಾಲ್ ಗ್ರಾಮದ ನಿವಾಸಿ ಸಿಂಗ್ ಅವರನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ, ದೇಶ ಮತ್ತು ಅವರನ್ನು ಹೊಗಳಿ ಘೋಷಣೆಗಳನ್ನು ಕೂಗಿ ಆತ್ಮೀಯವಾಗಿ ಸ್ವಾಗತಿಸಿದರು.
ನನ್ನ ಎಲ್ಲಾ ಸ್ನೇಹಿತರಿಗೆ, ಗ್ರಾಮಸ್ಥರಿಗೆ ಮತ್ತು ವಿಶೇಷವಾಗಿ ಯುವಕರಿಗೆ ನನ್ನ ಸಂದೇಶವೆಂದರೆ ಹಾನಿ ಮಾಡುವ ತಪ್ಪು ಮಾರ್ಗಗಳಿಂದ ದೂರವಿರಿ. ಆದರೆ, ದೇಶಕ್ಕಾಗಿ ಯಾವುದೇ ತ್ಯಾಗ ಮಾಡುವ ವಿಚಾರದಲ್ಲಿ ಹಿಂದೆ ಸರಿಯಬೇಡಿ ಎಂದರು. ಪಾಕಿಸ್ಥಾನದಲ್ಲಿ ಸಿಂಗ್ ಅವರನ್ನು ಬಂಧಿಸಿದ ನಂತರ, ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಿಂದ ಅವರಿಗೆ ಪತ್ರ ಬರೆದಾಗ ಮಾತ್ರ ಅವರು ಎಲ್ಲಿದ್ದಾರೆ ಎಂದು ತಿಳಿಯಿತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪಾಕ್ ನಲ್ಲಿ ಗೂಢಚಾರಿಕೆಗೆ ಶಿಕ್ಷೆಗೊಳಗಾದ ಭಾರತೀಯ ಖೈದಿ ಸರಬ್ಜಿತ್ ಸಿಂಗ್ ಅವರ ಹತ್ಯೆಯ ನಂತರ ಕಳೆದ ಎಂಟು ವರ್ಷಗಳಿಂದ ಸಿಂಗ್ ಅವರೊಂದಿಗೆ ಯಾವುದೇ ಸಂಪರ್ಕವಿಲ್ಲದ ಕಾರಣ ಅವರು ಎಲ್ಲಾ ಭರವಸೆಯನ್ನು ಕಳೆದುಕೊಂಡಿದ್ದರು ಎಂದು ಅವರು ಹೇಳಿದರು.
ಅವರು ಬಹಳ ವರ್ಷಗಳ ನಂತರ ಮರಳಿ ನಮ್ಮ ನಡುವೆ ಬಂದಿರುವುದು ನಮಗೆ ಅಪಾರ ಖುಷಿ ತಂದಿದೆ ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.