ರಾಷ್ಟ್ರೀಯ ಸಮಸ್ಯೆಗಳಿಗೆ ಸಮಾಜವಾದ,ಜಾತ್ಯತೀತವಾದ ಮೂಲ ಕಾರಣ: ತೇಜಸ್ವಿ
Team Udayavani, Dec 26, 2021, 6:34 AM IST
ಉಡುಪಿ: ಸಮಾಜವಾದ ಮತ್ತು ಜಾತ್ಯತೀತವಾದ ರಾಷ್ಟ್ರೀಯ ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಸಮಾಜವಾದ ಭಾರತವನ್ನು ಆರ್ಥಿಕವಾಗಿ ಬಡದೇಶ ಮಾಡಿದರೆ ಜಾತ್ಯತೀತವಾದ ಸಾಂಸ್ಕೃತಿಕವಾಗಿ ಭಾರತವನ್ನು ಬಡದೇಶವನ್ನಾಗಿಸಿದೆ. ಯುಪಿಎ ಸರಕಾರ 70 ವರ್ಷಗಳಿಂದಲೂ ಇದೇ ಸಿದ್ಧಾಂತವನ್ನು ಪಾಲಿಸಿಕೊಂಡು ಬಂದಿತ್ತು. ಆದರೆ ಕಳೆದ 7 ವರ್ಷಗಳಲ್ಲಿ ಭಾರತ ಅಭಿವೃದ್ಧಿಯತ್ತ ಬದಲಾಗುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಸಂದರ್ಭ ಬಿಜೆಪಿ ರಾಜ್ಯ ಯುವ ಮೋರ್ಚಾ, ಜಿಲ್ಲಾ ಬಿಜೆಪಿ, ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ “ಸುಶಾಸನ’ ಎನ್ನುವ ಪರಿಕಲ್ಪನೆಯಲ್ಲಿ ಮಣಿಪಾಲದಲ್ಲಿ ಶನಿವಾರ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
7 ವರ್ಷಗಳ ಅವಧಿಯಲ್ಲಿ ಮೋದಿ ಸರಕಾರ 33 ಹೊಸ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಿದೆ. ಸಮಾಜವಾದ ಎಂಬ ಪೆಡಂಭೂತದಿಂದ ಹೊರಬಂದು ಭಾರತ ಯಶಸ್ವಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದವರಲ್ಲಿ ಭಾರತದ ಮೇಲಿನ ವ್ಯಾಮೋಹ ಹೆಚ್ಚಳವಾಗತೊಡಗಿದೆ ಎಂದರು.
ಆರೋಗ್ಯಭರಿತ ಸ್ಪರ್ಧೆ:
ಬಿಹಾರ ಸಹಿತ ಬಿಜೆಪಿ ಆಡಳಿತ ಇರದ ಕೆಲವೊಂದು ಗ್ರಾಮಗಳು ಈಗಲೂ ಕುಗ್ರಾಮವಾಗಿಯೇ ಉಳಿದುಕೊಂಡಿವೆ. ಯುವ ಭಾರತದ ಆಕಾಂಕ್ಷಿಗಳನ್ನು ರಾಹುಲ್ ಗಾಂಧಿಯವರು ಇನ್ನೂ ಅರ್ಥೈಸಿಕೊಂಡಿಲ್ಲ. ಆದರೆ ಬಿಜೆಪಿ ಯುವ ಸಮುದಾಯಕ್ಕೆ ಮುಕ್ತ ಸ್ವಾತಂತ್ರ್ಯ ಒದಗಿಸಿ ಆರೋಗ್ಯ ಭರಿತ ಸ್ಪರ್ಧೆ ಕಲ್ಪಿಸಿದೆ ಎಂದರು.
ಹಿಂದೂ ಪುನರುತ್ಥಾನದ ಕೆಲಸ:
ಸೋಮನಾಥ, ಅಯೋಧ್ಯೆ, ಕಾಶಿ ಸಹಿತ ದೇಶದಲ್ಲಿ ಈಗ ಹಿಂದೂ ಪುನರುತ್ಥಾನದ ಕೆಲಸ ಕಾರ್ಯಗಳು ನಡೆಯುತ್ತಿವೆ. ಸಮಾಜವನ್ನು ಒಟ್ಟಿಗೆ ಸೇರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಾಮಾನ್ಯ ಕಾರ್ಯಕರ್ತನೂ ಅಧ್ಯಕ್ಷ ಸಹಿತ ಮಹೋನ್ನತ ಹುದ್ದೆ ಅಲಂಕರಿಸುವ ಅವಕಾಶ ಇರುವ ಪಕ್ಷವೇ ಬಿಜೆಪಿ ಎಂದರು.
ಸನಾತನ ಧರ್ಮದ ಪುನರುತ್ಥಾನವಾಗಿ ಭಾರತ ದೇಶ ಜಗದ್ಗುರುವಾಗಿ ಎದ್ದೇಳಲು ಧಾರ್ಮಿಕ ಜೀರ್ಣೋದ್ಧಾರ ಮೋದಿಯವರ ಸುಶಾಸನ ಕಾರ್ಯಕ್ರಮದ ಮೂಲಕ ಆಗಿದೆ. ದೇವಸ್ಥಾನಗಳ ಪುನರುತ್ಥಾನ, ಸ್ಥಳೀಯ ಭಾಷೆ, ಸಂಸ್ಕೃತಿ ಅಭಿವೃದ್ಧಿಗೆ ಮೋದಿ ಸರಕಾರ ಒತ್ತು ನೀಡಿದೆ ಎಂದರು.
ಚಿಂತನೆ, ಸಂವಾದ :
ಈ ಗೋಷ್ಠಿಯಲ್ಲಿ ಸಮಾಜದ ವಿವಿಧ ಸಂಘಟನೆಗಳು ಮತ್ತು ವಿವಿಧ ವೃತ್ತಿಪರ ಕ್ಷೇತ್ರಗಳ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಚಿಂತನೆ ಮತ್ತು ಸಂವಾದ ನಡೆಸಲಾಯಿತು.
ಶಾಸಕ ಕೆ. ರಘುಪತಿ ಭಟ್ ಪ್ರಸ್ತಾವನೆಗೈದರು. ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ| ಸಂದೀಪ್ ಸ್ವಾಗತಿಸಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ವಂದಿಸಿದರು. ಪ್ರಸಾದ್ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು.
ಮತಾಂತರ ನಿಷೇಧ ಕಾಯ್ದೆ ಉತ್ತಮ ಬೆಳವಣಿಗೆ :
ಹೊರದೇಶಗಳಿಂದ ಬಂದು ಇಲ್ಲಿರುವ ಅನ್ಯಧರ್ಮದವರನ್ನು ಓಲೈಕೆ ಮಾಡಿ ಅವರ ಮೂಲಕ ಹಿಂದೂಗಳಿಗೆ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ. ಸನಾತನ ಧರ್ಮ ಉಳಿಸಲು ಮತಾಂತರ ಕಾಯ್ದೆ ಉತ್ತಮ ನಿರ್ಧಾರವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
Karkala: ಬೈಕ್ ಢಿಕ್ಕಿ; ಗಾಯ
ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.