ಮಾರುಕಟ್ಟೆಯಲ್ಲಿ ತರಕಾರಿ ದರ ಮತ್ತೆ ಜಿಗಿತ

Team Udayavani, Dec 26, 2021, 6:52 AM IST

ಮಾರುಕಟ್ಟೆಯಲ್ಲಿ ತರಕಾರಿ ದರ ಮತ್ತೆ ಜಿಗಿತ

ಕುಂದಾಪುರ: ಅಕ್ಟೋಬರ್‌, ನವೆಂಬರ್‌ನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದಿಂದ ಕರಾವಳಿಗೆ ನಿರೀಕ್ಷಿತ ಮಟ್ಟದಲ್ಲಿ ತರಕಾರಿ ಪೂರೈಕೆಯಾಗದಿರುವ ಕಾರಣ ತರಕಾರಿ ದರ ಮತ್ತೆ ಹೆಚ್ಚಳವಾಗಿದೆ. ಟೊಮೇಟೊ ಹೊರತುಪಡಿಸಿ, ಉಳಿದೆಲ್ಲ ತರಕಾರಿ ಬೆಲೆ ಏರಿಕೆಯಾಗಿದೆ.

ಟೊಮೇಟೊ ಕೆ.ಜಿ.ಗೆ 80 ರೂ. ಇದ್ದುದು ಈಗ 50 ರೂ.ಗೆ ಇಳಿದಿದೆ. ನಾಸಿಕ್‌ನಿಂದ ಯಥೇಚ್ಛವಾಗಿ ಟೊಮೇಟೊ ಪೂರೈಕೆಯಾಗು ತ್ತಿರುವುದರಿಂದ ಬೆಲೆ ಇಳಿಕೆಯಾಗುತ್ತಿದೆ. 70 – 80 ರೂ. ಇದ್ದ ಬೀನ್ಸ್‌ 90-100 ರೂ., 40-50 ರೂ. ಇದ್ದ ಸೌತೆಕಾಯಿ 70 -80 ರೂ., 60-70 ರೂ. ಇದ್ದ ಅಲಸಂಡೆ 90-100 ರೂ.ಗೆ ಏರಿಕೆಯಾಗಿದೆ. 30- 40 ರೂ. ಇದ್ದ ಹೂಕೋಸು 70 ರೂ., 60-70 ರೂ. ಇದ್ದ ತೊಂಡೆಕಾಯಿ 100 ರೂ., 35-40 ರೂ. ಇದ್ದ ಈರುಳ್ಳಿ 50-60 ರೂ., 40 ರೂ. ಇದ್ದ ಹಸಿಮೆಣಸಿಗೆ 100 ರೂ., 30-40 ರೂ. ಇದ್ದ ಬಿಟ್ರೋಟ್‌, ಕ್ಯಾಬೇಜ್‌ 70-80 ರೂ. ಆಗಿದೆ. ಮೂಲಂಗಿ 70-80 ರೂ., ಕ್ಯಾರೆಟ್‌ 80-100 ರೂ. ಆಸುಪಾಸಿನಲ್ಲಿದೆ. 25-30 ರೂ. ಇರುವ ಆಲೂಗಡ್ಡೆ ಮಾತ್ರ ಯಥಾಸ್ಥಿತಿಯಿದೆ. 140-150 ರೂ. ಇದ್ದ ನುಗ್ಗೆಕಾಯಿ ದರ ಭಾರೀ ಏರಿಕೆಯಾಗಿದ್ದು, 300ರ ಆಸುಪಾಸಿನಲ್ಲಿದೆ. ಊರಿನ ಗುಳ್ಳ (ಬದನೆ) 70-80 ರೂ. ದರವಿದೆ.

ಒಂದೆಡೆ ಮಳೆಯಿಂದಾಗಿ ತರಕಾರಿ ಅಭಾವ, ಮತ್ತೂಂದೆಡೆ ಹೆಚ್ಚು ಪೂಜೆ, ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳು, ಮದುವೆ, ಗೃಹಪ್ರವೇಶದಂತಹ ಶುಭ ಸಮಾರಂಭಗಳು ನಡೆಯುವ ಸಮಯ ವಾಗಿರುವುದರಿಂದ ತರಕಾರಿಗೆ ಬೇಡಿ ಕೆಯೂ ಹೆಚ್ಚಾಗಿರುವುದರಿಂದ ತರಕಾರಿ ಬೆಲೆಯಲ್ಲಿ ಏರಿಕೆ ಯಾಗುತ್ತಿದೆ.

ತಿಂಗಳ ಕಾಲ ಇಳಿಕೆ ಅಸಾಧ್ಯ? :

ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತಿತರ ಕಡೆಗಳಿಂದ ಮಂಗಳೂರು, ಉಡುಪಿ, ಕುಂದಾಪುರ ಭಾಗಗಳಿಗೆ ಪೂರೈಕೆಯಾಗುತ್ತಿದ್ದ ತರಕಾರಿ ಮಳೆಗೆ ಹಾನಿಯಾಗಿದ್ದು, ಕೆಲವೆಡೆ ಈಗಷ್ಟೇ ತರಕಾರಿ ಬೆಳೆ ಬೆಳೆಯಲಾಗಿದ್ದು, ಹಾಗಾಗಿ ಅದು ಪೂರೈಕೆಯಾಗುವವರೆಗೆ ಅಂದರೆ ಇನ್ನು ಒಂದು ತಿಂಗಳ ಕಾಲ ತರಕಾರಿ ದರ ಇಳಿಕೆಯಾಗುವುದು ಅನುಮಾನ. ಉತ್ತರ ಕರ್ನಾಟಕ ಭಾಗದಿಂದ ಹಾಗೂ ಊರಿನ ತರಕಾರಿ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗಲು ಆರಂಭವಾದರೆ ಬೆಲೆ ಇಳಿಕೆಯಾಗಬಹುದು ಎನ್ನುತ್ತಾರೆ ಕುಂದಾಪುರದ ತರಕಾರಿ ವ್ಯಾಪಾರಿ ಗಣೇಶ್‌.

ಟಾಪ್ ನ್ಯೂಸ್

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.