ಹಳಿಯಲ್ಲೂ-ರಸ್ತೆಯಲ್ಲೂ ಸೈ
Team Udayavani, Dec 26, 2021, 7:40 AM IST
ಟೋಕಿಯೊ: ರೈಲು ಮತ್ತು ಬಸ್ ಒಂದೇ ರೀತಿ ಇದ್ದರೆ ಹೇಗಿರುತ್ತದೆ? ಅಚ್ಚರಿಯಾದರೂ ನಿಜ. ಜಪಾನ್‌ನ ಸಂಶೋಧಕರು ಹೇಳಿಕೊಂಡಿರುವ ಪ್ರಕಾರ ಜಗತ್ತಿನಲ್ಲಿಯೇ ಮೊದಲನೇಯದ್ದು ಎಂದು ಹೇಳಲಾಗಿರುವ ಮೊದಲನೇ ಎರಡು ಹಂತಗಳ ವಾಹನ (ಡ್ಯುವಲ್-ಮೋಡಲ್ ವೆಹಿಕಲ್)ವನ್ನು ಅಭಿವೃದ್ಧಿಪಡಿಸಿದೆ. ಜಪಾನ್‌ನ ಕೈಯೋ ಎಂಬ ನಗರದಲ್ಲಿ ಈ ಸಾಧನೆ ಮಾಡಲಾಗಿದೆ. ಈ ವಾಹನದ ಹೆಗ್ಗಳಿಕೆ ಏನೆಂದರೆ, ರಸ್ತೆ ಮತ್ತು ರೈಲು ಹಳಿಗಳ ಮೇಲೆ ಕೂಡ ಸಂಚರಿಸುತ್ತದೆ. ಅದನ್ನು ಶನಿವಾರ ಮೊದಲ ಬಾರಿಗೆ ಪ್ರಯೋಗಾರ್ಥ ಸಂಚಾರಕ್ಕೆ ಬಿಡಲಾಗಿತ್ತು.
ಹಳಿಯಲ್ಲಿ 60 ಕಿಮೀ: ರೈಲು ಹಳಿಯಲ್ಲಿ ಪ್ರತೀ ಗಂಟೆಗೆ 60 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಇದ್ದರೆ ರಸ್ತೆಯಲ್ಲಿ ಅದರ ಮೂರು ಪಟ್ಟು ಸಾಮರ್ಥ್ಯದಲ್ಲಿ ಸಂಚರಿಸುತ್ತದೆ. ರಸ್ತೆಗೆ ಬೇಕಾದಾಗ ರಬ್ಬರ್ ಟಯರ್‌ಗಳನ್ನು ಮತ್ತು ಹಳಿಯಲ್ಲಿ ಸಂಚರಿಸಬೇಕು ಎನ್ನುವಾಗ ಉಕ್ಕಿನ ಗಾಲಿಗಳನ್ನು ಅಳವಡಿಸುವ ಅವಕಾಶ ಇದೆ. ಸದ್ಯ ಅದು ಡೀಸೆಲ್‌ನಿಂದ ಚಲಿಸುತ್ತದೆ ಮತ್ತು ಅದನ್ನು ಹಲವು ಆಕರ್ಷಕ ಬಣ್ಣಗಳಲ್ಲಿ ಸಿದ್ಧಪಡಿಸಲಾಗಿದೆ.
1 ವಾಹನ ದಲ್ಲಿ 21 ಮಂದಿ ಪ್ರಯಾಣ ಮಾಡಲು ಸಾಧ್ಯವಿದೆ. ಕೈಯೋ ನಗರದಲ್ಲಿ ರೈಲು ಸೇವೆ ಒದಗಿಸುವ ಅಸಾ ಕೋಸ್ಟ್ ರೈಲ್ವೇ ಇಂಥ ಹೊಸ ಮಾದರಿಯ ಸಂಚಾರ ವ್ಯವಸ್ಥೆಗೆ ಬೆಂಬಲ ನೀಡುತ್ತಿದೆ. ಇದರಿಂದಾಗಿ ಆ ದೇಶದ ದೂರದ ಪ್ರದೇಶಗಳಿಗೂ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ. ಜಪಾನ್‌ನ ದಕ್ಷಿಣ ಭಾಗದಲ್ಲಿರುವ ಶಿಕೋಕು ದ್ವೀಪಕ್ಕೂ ಇದು ಉಪಯೋಗವಾಗಲಿದೆ ಎಂದು ಅಸಾ ಕೋಸ್ಟ್ ರೈಲ್ವೇಯ ಸಿಇಒ ಶಿಗೆಕಿ ಮಿಯುರಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.