ಮಡಿಕೇರಿ: ಆಡುತ್ತಿರುವಾಗಲೇ ಹಾಕಿ ಪಟು ನಿಧನ
Team Udayavani, Dec 26, 2021, 2:28 PM IST
ಮಡಿಕೇರಿ: ಆಟುವಾಡುತ್ತಿರುವಾಗಲೇ ಹಾಕಿಪಟುವೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಶನಿವಾರ ಮೂರ್ನಾಡುವಿನಲ್ಲಿ ನಡೆದಿದೆ.
ತೊತ್ತಿಯಂಡ ಸೋಮಯ್ಯ(22) ಎಂಬುವವರೇ ಮೃತ ದುರ್ದೈವಿ. ಮೂರ್ನಾಡುವಿನ ಲಾಲುಮುದ್ದಯ್ಯ ಮೈದಾನದಲ್ಲಿ ನಡೆಯುತ್ತಿರುವ ಚೌರೀರ ಹಾಕಿ ಟೂರ್ನಿ ಸಂದರ್ಭ ಕುಸಿದು ಬಿದ್ದ ಇವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಕೊನೆಯುಸಿರೆಳೆದಿದ್ದಾರೆ.
ಮೂರ್ನಾಡು ಬಲಮುರಿ ಗ್ರಾಮ ನಿವಾಸಿ ತೊತ್ತಿಯಂಡ ವಿಠಲ್ ದೇವಯ್ಯ ಅವರ ಪುತ್ರರಾಗಿರುವ ಸೋಮಯ್ಯ ಅವರು ಶನಿವಾರ ನಡೆಯುತ್ತಿದ್ದ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 2 ಗಂಟೆಯ ವೇಳೆಗೆ 10ನೇ ಪಂದ್ಯವಾಗಿ ಬಟ್ಟೀರ ಹಾಗೂ ತೊತ್ತಿಯಂಡ ಕುಟುಂಬಗಳ ನಡುವೆ ಮೈದಾನ 2ರಲ್ಲಿ ಪಂದ್ಯಾವಳಿ ನಡೆಯುತ್ತಿತ್ತು. ಈ ವೇಳೆ ಸೋಮಯ್ಯ ಅವರಿಗೆ ಹೃದಯಾಘಾತವಾಗಿ, ಕುಸಿದು ಬಿದ್ದಿದ್ದಾರೆ.
ಕೊಡಗಿನ ಕ್ರೀಡಾಭಿಮಾನಿಗಳು ಹಾಗೂ ಚೌರೀರ ಹಾಕಿ ಟೂರ್ನಿ ಆಯೋಜಕರು ಸೋಮಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.