ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯಲಿ
Team Udayavani, Dec 26, 2021, 3:13 PM IST
ಹೊನ್ನಾಳಿ: ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರುಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಗ್ರಾಮ ಸಂಪನ್ಮೂಲವ್ಯಕ್ತಿ ಚಂದ್ರಕಲಾ ಹೇಳಿದರು.ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಶ್ರೀಚನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತ ಮಹಾವಿದ್ಯಾಲಯದಎನ್ನೆಸ್ಸೆಸ್ ಘಟಕದ ವತಿಯಿಂದ ಪಟ್ಟಣದ ಹಿರೇಕಲ್ಮಠದಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿಉತ್ತಮ ಆಡಳಿತ ನೀಡುವಲ್ಲಿ ಗ್ರಾಪಂ ಸದಸ್ಯರಪಾತ್ರ ಕುರಿತು ಅವರು ಮಾತನಾಡಿದರು.
ಮಹಿಳಾಮೀಸಲಾತಿಯಿಂದಾಗಿ ಜನಪ್ರತಿನಿಧಿಗಳಾಗಿಆಯ್ಕೆಯಾಗುವಮಹಿಳೆಯರು ಸಂಬಂಧಿಸಿದ ಸಂಸ್ಥೆಗಳಲ್ಲಿ ಸಕ್ರಿಯವಾಗಿಕಾರ್ಯನಿರ್ವಹಿಸುವ ಮೂಲಕ ತಾವು ರಬ್ಬರ್ ಸ್ಟಾಂಪ್‌ಗಳಲ್ಲ ಎಂಬುದನ್ನು ತೋರಿಸಬೇಕು. ಸಾಮಾಜಿಕ ನ್ಯಾಯಸಭೆಯಲ್ಲಿ ಕನಿಷ್ಠ ಓರ್ವ ಮಹಿಳೆ ಇರಬೇಕು. ಈ ನಿಟ್ಟಿನಲ್ಲಿಎಲ್ಲರೂ ಒತ್ತಡ ಹೇರಬೇಕು ಎಂದರು.ಸಂಪನ್ಮೂಲ ವ್ಯಕ್ತಿ ಯುವರಾಜ್ ಎಂ. ಜಕ್ಕಾಳಿ ಮಾತನಾಡಿ,ಗ್ರಾಪಂ ಚುನಾವಣೆಗಳು ನಡೆಯುವ ಬಗೆ ಹಾಗೂ ಗ್ರಾಪಂಸದಸ್ಯರಕರ್ತವ್ಯಗಳ ಬಗ್ಗೆ ವಿವರಿಸಿದರು.
ಕೈಗಾರಿಕಾ ತರಬೇತಿಕೇಂದ್ರದ ಪ್ರಾಂಶುಪಾಲ ಜಗದೀಶ್ ಮೋತಿ ಕಾರ್ಯಕ್ರಮಉದ್ಘಾಟಿಸಿದರು.ಶ್ರೀ ಚನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತಮಹಾವಿದ್ಯಾಲಯದ ಪ್ರಾಂಶುಪಾಲ ಎಚ್.ಎಂ.ಗುರುಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಐಟಿಐ ಕಾಲೇಜಿನಕಿರಿಯ ತರಬೇತಿ ಅಧಿಕಾರಿಗಳಾದ ರಾಮಚಂದ್ರಪ್ಪಕಡೇಮನಿ, ಕೋರಿ ಯೋಗೀಶ್ ಕುಳಗಟ್ಟೆ, ಶ್ರೀಚನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ನಿಜಗುಣ ಶಿವಯೋಗಿ, ಟಿ. ಶಿವರಾಜ್, ಎನ್ನೆಸ್ಸೆಸ್‌ಕಾರ್ಯಕ್ರಮಾಧಿಕಾರಿ ಪ್ರತಿಮಾ ನಿಜಗುಣ ಶಿವಯೋಗಿ,ಎಲ್.ಆರ್. ಅಪೇûಾ, ಮಂಗಳಗೌರಮ್ಮ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.