ವಾಜಪೇಯಿ ಸರಳ ವ್ಯಕ್ತಿತ್ವದ ರಾಜಕಾರಣಿ
Team Udayavani, Dec 26, 2021, 3:19 PM IST
ಶಿವಮೊಗ್ಗ: ಅಟಲ್ ಬಿಹಾರಿ ವಾಜಪೇಯಿ ಅವರುಅಜಾತ ಶತ್ರುವಾಗಿದ್ದು, ಕಾರ್ಯಕರ್ತರ ಬಗ್ಗೆ ಅತ್ಯಂತಆತ್ಮೀಯತೆ ಮತ್ತು ಗೌರವ ವ್ಯಕ್ತಪಡಿಸುತ್ತಿದ್ದರುಎಂದು ವಿಧಾನ ಪರಿಷತ್ ಮಾಜಿ ಸಭಾಪತಿಡಿ.ಎಚ್. ಶಂಕರಮೂರ್ತಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಟಲ್ ಜೀಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನಸಲ್ಲಿಸಿ ಅವರು ಮಾತನಾಡಿದರು.ಸಾಮಾನ್ಯ ಕಾರ್ಯಕರ್ತನ ಬಗ್ಗೆ ಅಟಲ್ ಅವರನಡವಳಿಕೆ ಎಲ್ಲರಿಗೂ ಮಾರ್ಗದರ್ಶಕವಾಗಿದ್ದು,ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಪ್ರಯತ್ನಮಾಡೋಣ. ಕವಿ ಹೃದಯದ ವಾಜಪೇಯಿಯವರುಪ್ರಕೃತಿ ಆರಾಧಕರೂ ಆಗಿದ್ದರು.
ನಂಬಿದ ಸಿದ್ಧಾಂತಗಳಬಗ್ಗೆ ಅಚಲ ನಂಬಿಕೆ ಇಟ್ಟುಕೊಂಡು ಅದನ್ನುಕಾರ್ಯಗತಗೊಳಿಸುವ ಅಚಲ ವಿಶ್ವಾಸ ಅವರಲ್ಲಿತ್ತು.ತಾನೊಬ್ಬ ಸಮರ್ಥ ನಾಯಕನಾಗಿದ್ದರೂ ಕೂಡಕಾರ್ಯಕರ್ತರಿಗೆ ಎಲ್ಲಾದರೂ ನೋವಾದರೆತಾವೇ ಕ್ಷಮೆ ಕೇಳಿಬಿಡುತ್ತಿದ್ದರು. ಪ್ರತಿಯೊಬ್ಬ ಬಿಜೆಪಿಕಾರ್ಯಕರ್ತರು ಅಟಲ್ ಜೀ ಅವರನ್ನು ಅನುಸರಿಸಿದರೆದೇಶದ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.ರಾಷ್ಟ್ರೀಯ ಹೆದ್ದಾರಿಗಳು, ನಮ್ಮ ಸೈನಿಕರಿಗೆ ಶಕ್ತಿತುಂಬುವ ಕೆಲಸ, ಗ್ರಾಮೀಣಾಭಿವೃದ್ಧಿ ಸೇರಿದಂತೆ ತಾವುಪ್ರತಿಪಾದಿಸುತ್ತಿದ್ದ ಸಿದ್ಧಾಂತಗಳನ್ನು ಪ್ರಧಾನಿಯಾದತಕ್ಷಣ ಜಾರಿಗೆ ತರುವಲ್ಲಿ ಯಶಸ್ವಿಯಾದರು. ಕವಿಹೃದಯದವರಾಗಿದ್ದರೂ ಸಹ ದೇಶದ ಸುರಕ್ಷತೆ ಪ್ರಶ್ನೆಬಂದಾಗ ನಾವು ಯಾರಿಗೂ ಕಡಿಮೆ ಇಲ್ಲ ಎಂದುಸಾಬೀತುಪಡಿಸಲು ಪ್ರೋಖಾÅನ್ ನಲ್ಲಿ ಅಣು ಬಾಂಬ್‌ಪರೀಕ್ಷೆ ನಡೆಸಿ ವಿಶ್ವದ ಗಮನಸೆಳೆದಿದ್ದರು ಎಂದರು.
ಶಿವಮೊಗ್ಗದ ಪ್ರಥಮ ಸಭೆಗೆ ಬಂದಾಗ ಸುಮಾರುಎರಡು ಕಿ.ಮೀ. ದೂರದವರೆಗೂ ಕಾರಿಗೆ ಕಾಯದೇಸಭಾಂಗಣದವರೆಗೆ ನಡೆದುಕೊಂಡೇ ಹೋದರು.ಜೋಗದಲ್ಲಿ ಯಾವುದೇ ಮೂಲ ಸೌಲಭ್ಯವಿಲ್ಲದಿದ್ದಾಗಜಲಪಾತದ ಕೆಳಗಿನವರೆಗೆ ಹೋಗಿ ಅಲ್ಲೇ ಬಂಡೆಯಮೇಲೆ ಮಲಗಿ ಪರಿಸರದ ಭವ್ಯತೆಯನ್ನು ಮತ್ತುಕೊಡುಗೆಯನ್ನು ಹಾಡಿ ಹೊಗಳಿದ ಸರಳ ಸ್ನೇಹಿಮಯಿವ್ಯಕ್ತಿತ್ವವನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವೇಇಲ್ಲ ಎಂದರು.
ಬಿಜೆಪಿಯ ಪ್ರಾರಂಭದ ದಿನಗಳಲ್ಲಿ ಪ್ರತಿನಿತ್ಯ 18ರಿಂದ 20 ಭಾಷಣಗಳನ್ನು ಮಾಡುತ್ತಿದ್ದ ಅವರು ಪಕ್ಷವನ್ನುದೇಶದಲ್ಲಿ ಅ ಧಿಕಾರಕ್ಕೆ ತರುವವರೆಗೆ ವಿಶ್ರಮಿಸದೇಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬುವ ಅವರ ಚೈತನ್ಯಅಸಾಧಾರಣವಾದುದು. ಮೋದಿ ಸರ್ಕಾರ ಬಂದಮೇಲೆ ಅವರಿಗೆ ಭಾರತರತ್ನ ನೀಡಲಾಯಿತು.
ಅವರುಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಪ್ರಯತ್ನಮಾಡೋಣ ಎಂದರು.ಈ ಸಂದರ್ಭದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದಗಿರೀಶ್ ಪಟೇಲ್, ಚನ್ನಬಸಪ್ಪ, ಜಗದೀಶ್, ಜ್ಞಾನೇಶ್ವರ್,ಬಳ್ಳೆಕೆರೆ ಸಂತೋಷ್, ಎನ್.ಡಿ. ಸತೀಶ್, ರಾಮು,ಕೆ.ಇ. ಕಾಂತೇಶ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.