ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು ನಾನು, ಭಯಸ್ತನಲ್ಲ: ಹಂಸಲೇಖ
Team Udayavani, Dec 26, 2021, 4:13 PM IST
ಬೆಂಗಳೂರು : “ನಾನು ಭಯಸ್ತನಲ್ಲ, ರೋಡಿನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು ನಾನುʼʼ ಎಂದು ನಾದ ಬ್ರಹ್ಮ ಹಂಸಲೇಖ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ “ಯರಬೇವುʼʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಂಸ ಲೇಖ ಅವರಿಗೆ ರಂಗಕರ್ಮಿ ನಾಗರಾಜಮೂರ್ತಿ “ಯಾರಿಗೂ ಹೆದರಬೇಡಿʼʼ ಎಂದು ಧೈರ್ಯ ತುಂಬಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಒಂದು ವಿವಾದವಾಗಿ ನನಗೆ ಗೊತ್ತಿಲ್ಲದ ಸಮುದಾಯದವರೆಲ್ಲ ನನ್ನ ಜತೆಗೆ ನಿಂತರು. ಹೀಗೆಲ್ಲ ಆಗುತ್ತದೆ ಎಂದು ನನಗೆ ಗೊತ್ತೇ ಇರಲಿಲ್ಲ. ಈ ಹಿಂದೆ ಬರೆದುಕೊಳ್ಳದೇ ಭಾಷಣ ಮಾಡಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಜೀವನದಲ್ಲಿ ಮೊದಲ ಬಾರಿಗೆ ಬರೆದುಕೊಂಡು ಮಾತನಾಡುತ್ತಿದ್ದೇನೆ ಎಂದರು.
ನಾನು ಭಯಸ್ತನ್ನಲ್ಲ. ರೋಡಿನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು. ಆದರೆ ನುಡಿದರೆ ಮುತ್ತಿನ ಹಾರದಂತೆ ಇರಬೇಕು. ನುಡಿ ಕೆಲವೊಮ್ಮೆ ಸ್ಫಟಿಕದ ಸಲಾಕೆಯೂ ಆಗುತ್ತದೆ. ನಾನು ವಿವಾದದಲ್ಲಿ ಸಿಲುಕಿದಾಗ ನನ್ನ ರಕ್ಷಣೆಗೆ ಬಂದವರು ಪ್ರೊ.ಸಿದ್ದರಾಮಯ್ಯ ಎಂದು ಸ್ಮರಿಸಿದರು.
ಇದನ್ನೂ ಓದಿ : ಹಂಸಲೇಖ ಹೇಳಿಕೆಯಲ್ಲಿ ಯಾವ ಅಪರಾಧವಿದೆ ? : ಸಿದ್ದರಾಮಯ್ಯ
ಮತ್ತೆ ಸಿಎಂ ಆಗಲಿ
ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಸಿಎಂ ಆಗಲಿ. ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರಸಿಯನ್ನು ಸಿದ್ದರಾಮಯ್ಯ ಉಳಿಸಲಿ. ಈಗ ನನಗೆ ಎಪ್ಪತ್ತು. ತಿನ್ನೋದು ಒಪ್ಪತ್ತು. ಎರಡು ಹೊತ್ತು ಬಸವನ ಹಸಿವು ಪ್ರೊಟಿನ್ ನೀಡುತ್ತಿದೆ ಎಂದರು.
ಪೇಜಾವರ ಶ್ರೀಗಳ ಬಗ್ಗೆ ಮೈಸೂರಿನಲ್ಲಿ ಹಂಸಲೇಖ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಈ ಬಗ್ಗೆ ಅವರು ಕ್ಷಮೆ ಯಾಚಿಸಿದ್ದರೂ ವಿವಾದ ತಣ್ಣಗಾಗಿರಲಿಲ್ಲ. ಈ ಪ್ರಕರಣದ ಬಗ್ಗೆ ಹಂಸಲೇಖ ಸಾರ್ವಜನಿಕ ವೇದಿಕೆಯಲ್ಲಿ ಯಾವುದೇ ಅಭಿಪ್ರಾಯ ಹಂಚಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. “ನಾನು ಭಯಸ್ಥನಲ್ಲʼʼ ಎಂಬ ಅವರ ಹೇಳಿಕೆ ಮತ್ತೊಂದು ವಿವಾದ ಸೃಷ್ಟಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.