ಕುರುಗೋಡು: ಪುರಸಭೆ ಚುನಾವಣೆಗೆ ಸಕಲ ಸಿದ್ಧತೆ
ಮತ ಸೆಳೆಯಲು ಅಭ್ಯರ್ಥಿ ಗಳಿಂದ ನಾನಾ ಕಸರತ್ತು
Team Udayavani, Dec 26, 2021, 6:54 PM IST
ಕುರುಗೋಡು: ತಾಲೂಕು ಅದನಂತರ ಮೊದಲನೇ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಪುರಸಭೆಗೆ 23 ವಾರ್ಡ್ ಗಳು ಇದ್ದು, 23 ಮತ ಗಟ್ಟೆ ಗಳಳಿಗೆ ಹಾಗೂ 11ಸಾಮಾನ್ಯ ಮತಗಟ್ಟೆ ಗಳಿಗೆ ಇಂದು ಬೆಳಿಗ್ಗೆ 7 ರಿಂದ ಸಂಜೆ 5 ರ ತನಕ ಚುನಾವಣೆ ನಡೆಯಲಿದೆ. ಪಟ್ಟಣದಲ್ಲಿ ಒಟ್ಟು ಮತದಾರರು 16933 ಇದ್ದಾರೆ. ಇದರಲ್ಲಿ ಗಂಡು 8247, ಹೆಣ್ಣು 8678, ಇತರೆ ಇತರೆ 8 ಮಂದಿಯ ಮತಗಳು ಇವೆ.
ಈಗಾಗಲೇ ಚುನಾವಣೆ ಅಧಿಕಾರಿಗಳು ಸಕಲ ಸಿದ್ಧತೆ ಗಳನ್ನು ಏರ್ಪಡಿಸಿಕೊಂಡಿದ್ದಾರೆ. ಈಗಾಗಲೇ 23 ಮತ ಗಟ್ಟೆಗಳಿಗೆ ಮತ್ತು ಸಾಮಾನ್ಯ ಮತ ಗಟ್ಟೆಗಳಿಗೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವಿಎಂ ಮಿಷನ್ ಗಳ ಪರಿಕರಗಳ ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್ ಹಾಗೂ ಮತದಾರರ ಮತ ಪಟ್ಟಿಗಳು ಸೇರಿದಂತೆ ವಿವಿಧ ಪರಿಕರಗಳನ್ನು ಪಿ ಆರ್ ಒ, ಎ ಪಿ ಆರ್ ಒ, ಪಿ ಒ ಮತಗಟ್ಟೆ ಅಧಿಕಾರಿಗಳು ಪರಿಶೀಲನೆ ನಡೆಸಿಕೊಂಡು ತಮ್ಮ ತಮ್ಮ ಮತಗಟ್ಟೆ ಗಳಿಗೆ ತೆರಳಿದ್ದಾರೆ.
ಚುನಾವಣೆ ವೀಕ್ಷಕರಾಗಿ ಹಟ್ಟೆಪ್ಪ ಜಿಲ್ಲಾ ಉದ್ಯೋಗ ಅಧಿಕಾರಿ, ಚುನಾವಣೆ ವೆಚ್ಚದ ಅಧಿಕಾರಿಯಾಗಿ ರಮೇಶ್ ಇಂಜಿನಿಯರ್ ಬಳ್ಳಾರಿ, ಚುನಾವಣೆ ವೆಚ್ಚದ ನೋಡಲ್ ಅಧಿಕಾರಿಯಾಗಿ ವೆಂಕಟೇಶ್, ಮಂಜುನಾಥ್, ಚುನಾವಣೆ ಅಧಿಕಾರಿಯಾಗಿ ಸುರೇಂದ್ರ ರೆಡ್ಡಿ, ಉಷಾ,
ಸಹಾಯಕ ಚುನಾವಣೆ ಅಧಿಕಾರಿಯಾಗಿ ಕಿರಣ್ ಕುಮಾರ್, ಮಂಜುನಾಥ್,ಸೆಕ್ಟರ್ ಅಧಿಕಾರಿಗಳಾಗಿ ವಸಂತ, ಪ್ರವೀಣ್ ಜೋಷಿ, ಇವರುಗಳನ್ನು ನೇಮಕ ಮಾಡಲಾಗಿದೆ.
ಚುನಾವಣೆ ಬಂದೋಬಸ್ತ್ ಗೆ ಪೊಲೀಸ್ ಇಲಾಖೆ ಯಿಂದ ಡಿ. ವೈ.ಎಸ್ಪಿ 1, ಸಿಪಿಐ 1, ಪಿ. ಎಸ್. ಐ. 3, ಎ ಎಸ್ ಐ 8, ಪೊಲೀಸ್ ಪೇದೆಗಳು 45, ಇದರಲ್ಲಿ ಮಹಿಳೆ ಪೊಲೀಸ್ ರು 5, ಡಿ ಆರ್ ಪೊಲೀಸ್ ವಾಹನಗಳು 01, ನೇಮಿಸಲಾಗಿದೆ.
ಇನ್ನೂ ಚುನಾವಣೆ ಬಹಿರಂಗ ಪ್ರಚಾರ ಸಭೆಗಳು ಮುಗಿದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿ ಗಳು ಸದ್ದಿಲ್ಲದೇ ಯುವಕರ ತಂಡಗಳನ್ನು ರಚನೆ ಮಾಡಿಕೊಂಡು ಅಂತವರಿಗೆ ಮಾಂಸ ಮತ್ತು ಮದ್ಯೆ ಕೊಡಿಸಿ ಪಟ್ಟಣದ ಹೊರಗಡೆ ಕಳಿಸಿ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಇನ್ನೂ ನಿತ್ಯವಾಗಿ ಕುಟುಂಬದವರಿಗೆ ಮಂಡಕ್ಕಿ, ಮಾಂಸ ನೀಡುತ್ತಿದ್ದಾರೆ. ಮಹಿಳೆಯರನ್ನು ಕೂಲಿ ಕೆಲಸಕ್ಕೆ ಕಳಿಸದೆ ನಿತ್ಯ 300 ರಂತೆ ಕೂಲಿ ಕೊಟ್ಟು ಮನೆಯಲ್ಲಿ ಇರುವಂತೆ ತಿಳಿಸಿ ಇದರ ಮೂಲಕ ಮತ ಸೆಳೆಯಲು ಮುಂದಾಗಿದ್ದಾರೆ.
ಇದಲ್ಲದೆ ಸತತವಾಗಿ ಮೂರು ನಾಲ್ಕು ದಿನಗಳಿಂದ ಎರಡು ಪಕ್ಷದ ಅಭ್ಯರ್ಥಿ ಗಳು ಬಿರುಸಿನಿಂದ ಪ್ರಚಾರ ನಡೆಸಿ ಲವಲವಿಕೆ ಯಿಂದ ಇದ್ದು, ಚುನಾವಣೆ ಬರುತ್ತಿದ್ದಂತೆ ಮುಖದಲ್ಲಿ ಲಕ್ಷಣಗಳು ಕುಗ್ಗಿವೆ.
ಇನ್ನೂ ಹಾಲಿ ಮತ್ತು ಮಾಜಿ ಶಾಸಕರು ತಮ್ಮ ಪ್ರತಿಷ್ಠೆಯ ಕಣ ಉಳಿಸಿಕೊಳ್ಳಲು ಜಿಲ್ಲೆಯ ಪಕ್ಷದ ಮುಖಂಡರ ಜೊತೆಗೆ ಮತ್ತು ಸ್ಥಳೀಯ ಕಾರ್ಯಕರ್ತರನ್ನು ಒಗ್ಗೂಡಿಸಿ ಮತ ಪಡಿಯಲು ಮತದಾರರಿಗೆ ಮನವೊಲಿಸಲು ನಾನಾ ಕಸರತ್ತು ನಡೆಸಿದ್ದಾರೆ.
ಎರಡು ಪಕ್ಷದ ಅಭ್ಯರ್ಥಿ ಗಳಿಂದ ಕೆಲ ವಾರ್ಡ್ ಗಳಲ್ಲಿ ತೀವ್ರ ಪೈಪೋಟಿ ಕಂಡುಬರುವುದರಿಂದ ಒಂದು ವೋಟಿಗೆ 5 ಸಾವಿರ ಕೊಡಲು ಮುಂದಾಗಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಿದೆ.
ಕಳೆದ ಬಾರಿ ಪುರಸಭೆ ಚುನಾವಣೆ ಯಲ್ಲಿ ಅತಿ ಹೆಚ್ಚು ಬಿಜೆಪಿ ಅಭ್ಯರ್ಥಿ ಗಳು ಜಯಗಳಿಸಿ ಪುರಸಭೆ ಬಿಜೆಪಿ ವಶ ವಾಗಿತ್ತು. ಈ ಬಾರಿ ಕೂಡ ತಮ್ಮ ವಶ ಮಾಡಿಕೊಳ್ಳಲು ಬಿಜೆಪಿಗರು ನಾನಾ ಕಸರತ್ತು ನಡೆಸಿದರೆ. ಕಾಂಗ್ರೆಸ್ ನವರು ಕೂಡ ಕಳೆದ ಬಾರಿ ಕಡಿಮೆ ಸ್ಥಾನ ಪಡೆದುಕೊಂಡಿರುವುದರಿಂದ ಈ ಬಾರಿ ಪುರಸಭೆ ಕಾಂಗ್ರೆಸ್ ವಶ ಮಾಡಿಕೊಂಡು ಮುಂಬರುವ ಚುನಾವಣೆ ಯಲ್ಲಿ ಪ್ರತಿಷ್ಠೆಯ ಕಣ ಉಳಿಸಿಕೊಳ್ಳುವ ಸಲುವಾಗಿ ಎಗ್ಗಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ ಇಂದು ಚುನಾವಣೆ ನಡೆಯುತ್ತಿದ್ದೂ ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಠೆಯ ಕಣ ಯಾರ ಪಲಾಗಲಿದೆ ಎಂಬುವುದಕ್ಕೆ ಡಿ 30ಕ್ಕೆ ಉತ್ತರ ದೊರೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.