ಹಿಮದಿಂದಾಗಿ ಸಾವಿರಾರು ಪ್ರವಾಸಿಗರು ಅತಂತ್ರ :ಸಿಕ್ಕಿಂನ ನಥುಲಾ ಬಳಿ ಸಿಲುಕಿಕೊಂಡ ಟೂರಿಸ್ಟ್
ಭಾರತೀಯ ಸೇನೆಯಿಂದ ರಕ್ಷಣೆ ಕಾರ್ಯ
Team Udayavani, Dec 26, 2021, 8:17 PM IST
ಗ್ಯಾಂಗ್ಟಕ್: ಹಿಮವರ್ಷವನ್ನು ಕಣ್ತುಂಬಿಕೊಳ್ಳಲೆಂದು ಸಿಕ್ಕಿಂ ಕಡೆ ಪ್ರವಾಸ ಬೆಳೆಸಿದ್ದ ಸಾವಿರಕ್ಕೂ ಅಧಿಕ ಮಂದಿ ಅದೇ ಹಿಮವರ್ಷದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಭಾರತೀಯ ಸೇನೆಯು ಅವರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಶನಿವಾರ ಹೆಚ್ಚು ಪ್ರಮಾಣದಲ್ಲಿ ಹಿಮವರ್ಷವಾಗಿದ್ದರಿಂದಾಗಿ ಸಿಕ್ಕಿಂನ ನಾಥುಲಾ ಬಳಿಯ ಜವಹರಲಾಲ್ ನೆಹರು ರಸ್ತೆ ಸಂಪೂರ್ಣವಾಗಿ ಹಿಮಾವೃತವಾಗಿದೆ. ಪ್ರವಾಸಿಗರ ವಾಹನ ಸಂಚಾರಕ್ಕೆ ತಡೆಯಾಗಿದೆ. 120 ವಾಹನಗಳಲ್ಲಿದ್ದ 1,027 ಪ್ರವಾಸಿಗರು ರಸ್ತೆಯಲ್ಲೇ ಸಿಲುಕಿದ್ದು, ಕೊರೆವ ಚಳಿಯಲ್ಲಿ ಕಾರಿನಿಂದ ಕೆಳಗಿಳಿಯಲೂ ಆಗದೆ ಒದ್ದಾಡಿದ್ದಾರೆ. ಅವರನ್ನು ಭಾರತೀಯ ಸೇನೆಯ ಯೋಧರು ರಕ್ಷಿಸಿದ್ದು, ಅಲ್ಲಿಂದ 17 ಮೈಲು ದೂರವಿರುವ ಸೇನೆಯ ಕ್ಯಾಂಪ್‌ಗೆ ಕರೆದೊಯ್ದು ಅಲ್ಲಿಯೇ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಭಾನುವಾರ ಅವರನ್ನು ಗ್ಯಾಂಗ್ಟಕ್‌ಗೆ ಕಳುಹಿಸಿಕೊಡಲಾಗಿದೆ. ನಾಥುಲಾ ಪ್ರದೇಶದಲ್ಲಿ ಭಾನುವಾರ ಮೈನಸ್ 8 ಡಿಗ್ರಿ ಸೆ. ಉಷ್ಣಾಂಶ ವರದಿಯಾಗಿದೆ.
ಹಿಮಗಡ್ಡೆಯಾದ ಜಮ್ಮು:
ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಶನಿವಾರ ರಾತ್ರಿ ಉಷ್ಣಾಂಶ ಅತ್ಯಂತ ಕಡಿಮೆಯಾಗಿದ್ದು, ಜನರು ಚಳಿಯಿಂದ ಪರದಾಡುವಂತಾಗಿತ್ತು. ಶ್ರೀನಗರದಲ್ಲಿ ಉಷ್ಣಾಂಶ ಮೈನಸ್ 1.8 ಡಿಗ್ರಿಗೆ ತಲುಪಿತ್ತು. ಕಜಿಗುಂದ್‌ನಲ್ಲಿ ಮೈನಸ್ 1.2 ಡಿಗ್ರಿ, ಕುಪ್ವಾರದಲ್ಲಿ ಮೈನಸ್ 1.5 ಡಿಗ್ರಿ, ಕೊಕೆರಂಗ್‌ನಲ್ಲಿ ಮೈನಸ್ 0.2 ಡಿಗ್ರಿ ಉಷ್ಣಾಂಶ ವರದಿಯಾಗಿದೆ. ಗುಲ್ಮರ್ಗ್‌ನಲ್ಲಿ ಮೈನಸ್ 7.5ಡಿಗ್ರಿ, ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ಆಗಿರುವ ಪಹಲ್ಗಮ್‌ನಲ್ಲಿ ಮೈನಸ್ 3.8 ಡಿಗ್ರಿ ಉಷ್ಣಾಂಶ ವರದಿಯಾಗಿದೆ.
ಇದನ್ನೂ ಓದಿ : ಮಂಗಳೂರು : ಬಸ್ ಸಿಬ್ಬಂದಿಗಳ ಈ ಕಾರ್ಯಕ್ಕೆ ಪೊಲೀಸ್ ಆಯುಕ್ತರಿಂದ ಶ್ಲಾಘನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.