ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ಶಾಲೆಯಲ್ಲಿ ವಸ್ತುಸ್ಥಿತಿ ಅಧ್ಯಯನ
Team Udayavani, Dec 27, 2021, 7:10 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ರಾಜ್ಯದ ಕಾಲೇಜು ಮಟ್ಟದಲ್ಲಿ ಈಗಾಗಲೇ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಥಮಿಕ, ಪ್ರೌಢ, ಪದವಿಪೂರ್ವ ತರಗತಿಗೂ ಅನುಷ್ಠಾನಿಸುವ ನಿಟ್ಟಿ ನಲ್ಲಿ ಶಾಲಾ ಮಟ್ಟದಲ್ಲಿ ವಸ್ತುಸ್ಥಿತಿ ಅಧ್ಯಯನ- ಅವಲೋಕನ ಆರಂಭಿಸಲಾಗಿದೆ.
ಮೊದಲಿಗೆ ನೂತನ ಶಿಕ್ಷಣ ನೀತಿಯ ವಿವರವನ್ನು ವಿವಿಧ ಸರಕಾರಿ ಶಾಲೆಗಳಿಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಮು ದಾಯ ಆಧಾರಿತ/ ಸ್ಥಳೀಯ ಸಂಸ್ಥೆ ಸದಸ್ಯರಿಗೆ ಮನದಟ್ಟು ಮಾಡಿ ಅಭಿಪ್ರಾಯ ಪಡೆದು ಕೊಳ್ಳಲಾಗುತ್ತದೆ. “ವಸ್ತುಸ್ಥಿತಿ ವರದಿ’ ಸಿದ್ಧವಾದ ಬಳಿಕ ಪಠ್ಯ ಕ್ರಮ, ಪಠ್ಯಸೂಚಿ ನಿರ್ಧಾರವಾಗಲಿದೆ.
26 ಸಮಿತಿ ರಚನೆ :
ಪೂರ್ವಸಿದ್ಧತೆಗಾಗಿ ಸರಕಾರ ಒಟ್ಟು 26 ಸಮಿತಿ ಗಳನ್ನು ರಚಿಸಿದೆ. ಬೆಂಗಳೂರು, ಕಲಬುರಗಿ, ಬೆಳ ಗಾವಿ, ಮೈಸೂರು ವಿಭಾಗಗಳ ಹಲವು ಜಿಲ್ಲೆಗಳ ಆಯ್ದ ಕಡೆಗಳಿಗೆ ಪ್ರತ್ಯೇಕ ತಂಡಗಳು ತೆರಳಿ ಚಾರಿತ್ರಿಕ ಶಿಕ್ಷಣ ವ್ಯವಸ್ಥೆ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕುರಿತು ಅಭಿಪ್ರಾಯ ಸಂಗ್ರಹ, ವಸ್ತುಸ್ಥಿತಿ ವಿಶ್ಲೇಷಣೆ ನಡೆಸಲಿವೆ. ಬಳಿಕ ಶಿಫಾರಸು ಅಂಶಗಳನ್ನು ಗಮನಿಸಿ ಶಿಕ್ಷಣ ಇಲಾಖೆಗೆ ವರದಿ ನೀಡಲಿವೆ.
“ಗುಣಮಟ್ಟದ ಶಿಕ್ಷಣದಲ್ಲಿ ಸಮುದಾಯದ ಪಾತ್ರ’ ಎಂಬ ಅಂಶದಲ್ಲಿ 20 ಜಿಲ್ಲೆಗಳ ಒಂದೊಂದು ಡಯಟ್ ವ್ಯಾಪ್ತಿಯಲ್ಲಿ ಕನಿಷ್ಠ 10 ಶಾಲೆಗಳನ್ನೊಳಗೊಂಡು ಗುಂಪು ಚರ್ಚೆ ನಡೆಯಲಿದೆ. ಇದರಲ್ಲಿ ಅಂಗನವಾಡಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿದ ವಿದ್ಯಾರ್ಥಿಗಳ ಪೋಷಕರು ಕೂಡ ಭಾಗವಹಿಸಲಿದ್ದಾರೆ. ತಲಾ 10 ಬಾಲಕ/ ಬಾಲಕಿಯರು ಅಭಿಪ್ರಾಯ ಮಂಡಿಸಲಿದ್ದಾರೆ. 8 ಮಂದಿ ಮುಖ್ಯಶಿಕ್ಷಕರು, 8 ಸಹ ಶಿಕ್ಷಕರು, ನಾಲ್ವರು ಅಂಗನವಾಡಿ ಶಿಕ್ಷಕಿಯರು ಭಾಗವಹಿಸಲಿದ್ದಾರೆ.
“ಹುದ್ದೆ ಖಾಲಿ’ ಸವಾಲು! :
ನೂತನ ಶಿಕ್ಷಣ ನೀತಿ ಶಾಲೆಗಳಲ್ಲಿ ಜಾರಿಯಾಗುವ ಕಾಲದಲ್ಲಿ ಶಿಕ್ಷಕರ ನೇಮಕ ಅಗತ್ಯವಾಗಿ ಆಗಬೇಕಿದೆ. ಮೂಲಗಳ ಪ್ರಕಾರ ಎಲ್ಲ ವೃಂದದ ಒಟ್ಟು ಹುದ್ದೆಗಳ ಪೈಕಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 41,869, ಸರಕಾರಿ ಪ್ರೌಢ ಶಾಲೆಗಳಲ್ಲಿ 8,292 ಶಿಕ್ಷಕ ಹುದ್ದೆಗಳು, ಪ.ಪೂ. ಶಿಕ್ಷಣ ಇಲಾಖೆಯಲ್ಲಿ 3,539 ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. ಸದ್ಯ ಪ್ರಾಥಮಿಕ ಶಾಲೆಗಳಲ್ಲಿ 18,000 ಅತಿಥಿ ಶಿಕ್ಷಕರು ಹಾಗೂ ಪ್ರೌಢ ಶಾಲೆಗಳಲ್ಲಿ 5,078 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಸದ್ಯಕ್ಕೆ ಇದು ರಕ್ಷಣೆ ನೀಡುತ್ತಿದೆಯಾದರೂ ಹೊಸ ನೀತಿ ಜಾರಿಯಾಗುವಾಗ ಶಿಕ್ಷಕರ ಕೊರತೆ ಸಂಗತಿ ಮತ್ತಷ್ಟು ಒತ್ತಡ ಸೃಷ್ಟಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಜನಾಭಿಪ್ರಾಯವನ್ನು ವಿವಿಧ ಸಮಿತಿಗಳ ಮುಖೇನ ಸಂಗ್ರಹಿಸಲಾಗು ತ್ತಿದೆ. ಜತೆಗೆ ವಸ್ತುಸ್ಥಿತಿಯ ಬಗ್ಗೆ ವಿವಿಧ ಹಂತಗಳಲ್ಲಿ ಅವಲೋಕನ ನಡೆಯುತ್ತಿದೆ. ಪೂರ್ಣ ವಿವರ ಸಿದ್ಧಗೊಂಡ ಅನಂತರ ನೀತಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.- ಬಿ.ಸಿ. ನಾಗೇಶ್,ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.