![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-415x249.jpg)
ಕಾಶೀ ಶ್ರೀಗಳ ಪರಿಶ್ರಮದಿಂದ ಸಿದ್ಧಾಂತ ಶಿಖಾಮಣಿಗೆ ವಿಶ್ವಖ್ಯಾತಿ
ಪ್ರತಿ ದಿನದ ಊಟ, ಊಪಹಾರಕ್ಕೆ 11 ಸಾವಿರಕ್ಕಿಂತಲೂ ಅಧಿಕ ಹಣ ಖರ್ಚಾಗುತ್ತಿದೆ.
Team Udayavani, Dec 27, 2021, 6:23 PM IST
![ಕಾಶೀ ಶ್ರೀಗಳ ಪರಿಶ್ರಮದಿಂದ ಸಿದ್ಧಾಂತ ಶಿಖಾಮಣಿಗೆ ವಿಶ್ವಖ್ಯಾತಿ](https://www.udayavani.com/wp-content/uploads/2021/12/Kashi-new-620x283.jpg)
ಬಂಕಾಪುರ: ವೀರಶೈವ ಧರ್ಮದ ಸಿದ್ಧಾಂತ ಶಿಖಾಮಣಿ ಗ್ರಂಥ ವಿವಿಧ ಭಾಷೆಗಳಲ್ಲಿ ವಿಶ್ವದ ಮೂಲೆ, ಮೂಲೆಗಳಿಗೆ ಪರಿಚಿತವಾಗಿರುವುದರ ಹಿಂದೆ ಶ್ರೀ ಕಾಶೀ ಡಾ|ಚಂದ್ರಶೇಖರ ಶಿವಾಚಾರ್ಯರ ಪರಿಶ್ರಮವಿದೆ ಎಂದು ಬೆಂಗಳೂರಿನ ನಿರ್ಮಾಪಕ ಪ್ರಶಾಂತ ರಿಪ್ಪನ್‌ಪೇಟೆ ಹೇಳಿದರು.
ಬಿಸನಳ್ಳಿ ಗ್ರಾಮದ ಶ್ರೀ ಕಾಶೀ ಜಂಗಮವಾಡಿ ಶಾಖಾ ಮಠದ ಆವರಣದಲ್ಲಿ ಲೋಕಕಲ್ಯಾಣಾರ್ಥ ವಾಗಿ ನಡೆದ ನಾಲ್ಕನೇ ದಿನದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಶ್ರೀ ಕಾಶೀ ಜಗದ್ಗುರುಗಳವರು ಬಿಸನಳ್ಳಿ ಗ್ರಾಮದ ಧರ್ಮ ವೇದಿಕೆಯಲ್ಲಿ ಶ್ರೀಶೈಲ, ಉಜ್ಜಯನಿ ಜಗದ್ಗುರುಗಳವರ ಸಮ್ಮುಖದಲ್ಲಿ ಶ್ರೀ ಕಾಶೀ ಜಂಗಮವಾಡಿಮಠದ ಮುಂದಿನ ಉತ್ತರಾಧಿಕಾರಿಗಳನ್ನಾಗಿ ಹೊಟಗಿಮಠದ ಡಾ|ಮಲ್ಲಿಕಾರ್ಜುನ ಶಿವಾಚಾರ್ಯರ ಹೆಸರನ್ನು ಘೋಷಣೆ
ಮಾಡಿರುವುದು ಬಿಸನಳ್ಳಿ ಗ್ರಾಮದ ಹಿರಿಮೆಯನ್ನು ಹೆಚ್ಚಿಸಿದಂತಾಗಿದೆ. ಮುಂದೊಂದು ದಿನ ಈ ಬಿಸನಳ್ಳಿ ಗ್ರಾಮ ಸುಕ್ಷೇತ್ರ ಕಾಶೀಯ ಹಾಗೆ ಅಭಿವೃದ್ಧಿ ಹೊಂದಿ ದಕ್ಷಿಣ ಕಾಶೀ ಎಂದೇ ಪ್ರಚಲಿತವಾಗಲಿದೆ ಎಂದು ಹೇಳಿದರು.
ಹಾವೇರಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಕುಡಿಯಲು ಹಾಲು, ನೀರನ್ನು ಬೆರೆಸಿ ಇಟ್ಟರೂ ಕೂಡ, ನೀರನ್ನು ಬಿಟ್ಟು ಬರಿ ಹಾಲನ್ನು ಸೇವಿಸುವ ಹಂಸ ಪಕ್ಷಿ ಹಾಗೆ, ಮನುಷ್ಯ ಕೂಡ ಈ ಜಗದಲಿ ಇರುವ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳಲ್ಲಿ ಒಳ್ಳೆಯದನ್ನು ಮಾತ್ರ ಗ್ರಹಿಸಿ ಮೈಗೂಡಿಸಿಕೊಂಡಾಗ ಮನುಷ್ಯ, ಮಾನವನಾಗಿ, ಮಹದೇವನಾಗಬಲ್ಲ ಎಂದು ಹೇಳಿದರು.
ಕಾಶೀ ಜಂಗಮವಾಡಿ ಮಠದ ಜ|ಡಾ|ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಭೆಯಲ್ಲಿ ಶಿಕ್ಷಕಿ ಜಿ.ಎಸ್.ದೇಸಾಯಿ ಅವರಿಗೆ ಶ್ರೀ ಮಠದಿಂದ ಆದರ್ಶ ಶಿಕ್ಷಕಿ ಪ್ರಶಸ್ತಿ ಹಾಗೂ ಬೆಂಗಳೂರಿನ ಬಿ.ವಿ.ಮಲ್ಲಿಕಾರ್ಜುನಯ್ಯ ಅವರಿಗೆ ಮಾಧ್ಯಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಕಾಶೀ ಪೀಠದ ಮುಂದಿನ ಉತ್ತರಾಧಿ ಕಾರಿಗಳಾದ ಡಾ|ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಹಿರೇಮಣಕಟ್ಟಿ ಶ್ರೀ ವಿಶ್ವಾರಾಧ್ಯ ಶ್ರೀಗಳು, ಸಾಲೂರಿನ ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯರು, ಶಂಭಣ್ಣ ಮಾ.ಪ.ಶೆಟ್ಟರ, ಸಂಜೀವಕುಮಾರ ನೀರಲಗಿ, ಜಿ.ಎಸ್.ಹಿರೇಮಠ, ತಿಪ್ಪಣ್ಣ ಸಾತಣ್ಣವರ, ಹರ್ಜಪ್ಪ ಲಮಾಣಿ, ಗುರುಶಾಂತಪ್ಪ ನರೇಗಲ್, ಗಂಗಾಧರ ಬಡ್ಡಿ, ಪರಶುರಾಮ ಕುದರಿ, ನಾಗರಾಜ ಹೊಸಮನಿ, ನಿಂಗಪ್ಪ ಹುಬ್ಬಳ್ಳಿ, ನೀಲಕಂಠಪ್ಪ ನರೇಗಲ್ ಸೇರಿದಂತೆ ಇತರರು ಭಾಗವಹಿಸಿದ್ದರು. ಶಿಕ್ಷಕಿ ಜಿ.ಎಸ್.ದೇಸಾಯಿ ನಿರೂಪಿಸಿದರು.
ಶ್ರೀ ಮಠದಲ್ಲಿ ನೂರಾರು ವಟುಗಳು ಸಂಸ್ಕೃತ ಅಭ್ಯಾಸ ಮಾಡುತ್ತಿದ್ದು, ಅವರ ಪ್ರತಿ ದಿನದ ಊಟ, ಊಪಹಾರಕ್ಕೆ 11 ಸಾವಿರಕ್ಕಿಂತಲೂ ಅಧಿಕ ಹಣ ಖರ್ಚಾಗುತ್ತಿದೆ. 11 ಸಾವಿರ ದೇಣಿಗೆ ನೀಡಿದ ಸದ್ಭಕ್ತರ ಕುಟುಂಬದ ಹೆಸರಿನಲ್ಲಿ ಶಾಶ್ವತವಾಗಿ ಪ್ರಸಾದ ಸೇವೆ ನಡೆಸಲಾಗುವುದು. 365 ದಾನಿಗಳಿಗೆ ಮಾತ್ರ ಈ ಅವಕಾಶವಿದ್ದು, ಆಸಕ್ತರು ಸೇವಾ ಸಮಿತಿಯವರನ್ನು ಸಂಪರ್ಕಿಸಬಹುದು.
ಶ್ರೀ ನೀಲಕಂಠ ಶಿವಾಚಾರ್ಯರು,
ಗುಳೇದಗುಡ್ಡ
ಟಾಪ್ ನ್ಯೂಸ್
![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ](https://www.udayavani.com/wp-content/uploads/2024/12/6-35-150x90.jpg)
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
![5](https://www.udayavani.com/wp-content/uploads/2024/12/5-36-150x90.jpg)
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-150x90.jpg)
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
![Krantiveer Brigade launched by worshipping the feet of 1008 saints: KS Eshwarappa](https://www.udayavani.com/wp-content/uploads/2024/12/kse-150x87.jpg)
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
![BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ](https://www.udayavani.com/wp-content/uploads/2024/12/3-34-150x90.jpg)
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.