ಪ್ರೊ ಕಬಡ್ಡಿ : ಮುಂಬಾ-ತಮಿಳ್ ಟೈ ; ಯುಪಿ ಯೋಧಾ ಎದುರು ಜೈಪುರ ಜಯ
Team Udayavani, Dec 27, 2021, 11:05 PM IST
ಬೆಂಗಳೂರು : ಸೋಮವಾರದ ಪ್ರೊ ಕಬಡ್ಡಿ ಮುಖಾಮುಖೀಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ ಗೆಲುವಿನ ಸಂಭ್ರಮ ಆಚರಿಸಿದೆ. ಅದು ಯುಪಿ ಯೋಧಾ ತಂಡವನ್ನು 32-29 ಅಂತರದಿಂದ ಮಣಿಸಿ ಎರಡನೇ ಜಯ ಸಾಧಿಸಿತು. ರೈಡರ್ ಅರ್ಜುನ್ ದೇಶ್ವಾಲ್ (11 ಅಂಕ), ಆಲ್ರೌಂಡರ್ಗಳಾದ ದೀಪಕ್ ಹೂಡಾ (9 ಅಂಕ) ಮತ್ತು ನಿತಿನ್ ರಾವಲ್ (4 ಅಂಕ) ಜೈಪುರ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಯುಪಿ ಯೋಧಾ ಸಾಂ ಕವಾಗಿ ಹೋರಾಡಲು ವಿಫಲವಾಯಿತು. ರೈಡರ್ ಸುರೇಂದರ್ ಗಿಲ್ ಏಕಾಂಗಿಯಾಗಿ ಹೋರಾಡಿ 10 ಅಂಕ ಗಳಿಸಿಕೊಟ್ಟರು. ರೈಡರ್ ಪ್ರದೀಪ್ ನರ್ವಾಲ್ ಯಶಸ್ಸು ಕಾಣಲಿಲ್ಲ (3 ಅಂಕ). ಈ ಜಯದೊಂದಿಗೆ ಜೈಪುರ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ನೆಗೆಯಿತು.
3 ಪಂದ್ಯಗಳಲ್ಲಿ 2 ಸೋಲನುಭವಿಸಿದ ಯೋಧಾ 7ನೇ ಸ್ಥಾನಿಯಾಯಿತು.
ರೋಚಕ ಮುಖಾಮುಖೀ
ಮೊದಲ ಪಂದ್ಯದ ರಭಸ ಕಂಡಾಗ ತಮಿಳ್ ದೊಡ್ಡ ಅಂತರದಲ್ಲಿ ಗೆಲ್ಲುವ ಸೂಚನೆ ಲಭಿಸಿತ್ತು. ಬಳಿಕ ಮುಂಬಾ ತಿರುಗಿ ಬಿತ್ತು. ಗೆಲುವಿನ ಹಂತಕ್ಕೂ ಬಂತು. ಆದರೆ ಅಂತಿಮ ಫಲಿತಾಂಶ 30-30 ಅಂತರದಿಂದ ಟೈ ಆಯಿತು!
ತಮಿಳ್ ತಲೈವಾಸ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿಯಿತು. ಇದನ್ನು ತಡೆದುಕೊಳ್ಳಲು ಮುಂಬಾಗೆ ಸಾಧ್ಯವಾಗಲಿಲ್ಲ. ರೈಡರ್ ಮನ್ಜಿàತ್, ನಾಯಕ ಸುರ್ಜೀತ್ ಸಿಂಗ್ ತಲೈವಾಸ್ಗೆ ಉತ್ತಮ ಮುನ್ನಡೆ ತಂದಿತ್ತರು. ಆದರೂ ವಿರಾಮದ ವೇಳೆ ಇದನ್ನು 17-14ಕ್ಕೆ ಇಳಿಸುವಲ್ಲಿ ಮುಂಬಾ ಯಶಸ್ವಿಯಾಯಿತು.
ದ್ವಿತೀಯಾರ್ಧದಲ್ಲಿ ಯು ಮುಂಬಾ ತಿರುಗಿ ಬಿತ್ತು. ರೈಡರ್ ವಿ. ಅಜಿತ್ ಪರಾಕ್ರಮದಿಂದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಅವರು 15 ಅಂಕ ತಂದಿತ್ತರು. ಅವರ 22 ರೈಡ್ಗಳಲ್ಲಿ 12 ರೈಡ್ ಯಶಸ್ವಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎಡವಟ್ಟು ಮಾಡಿಕೊಂಡು ಗೆಲುವಿನ ಅವಕಾಶವನ್ನು ಕೈಚೆಲ್ಲಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.