ಹುಣಸೂರಲ್ಲಿಆನೆ ಕಾಲು ರೋಗ; 8 ಮಂದಿ ವಲಸೆ ಕಾರ್ಮಿಕರಿಗೆ ಆನೆಕಾಲು ರೋಗ ಲಕ್ಷಣ

Team Udayavani, Dec 28, 2021, 12:09 PM IST

ಹುಣಸೂರಲ್ಲಿಆನೆ ಕಾಲು ರೋಗ; 8 ಮಂದಿ ವಲಸೆ ಕಾರ್ಮಿಕರಿಗೆ ಆನೆಕಾಲು ರೋಗ ಲಕ್ಷಣ

ಹುಣಸೂರು:  ಆನೆಕಾಲು ರೋಗವು ಒಂದು ಪರಾವಲಂಬಿ ಸೂಕ್ಷ್ಮಾಣು (ಪ್ಯಾರಸೈಟ್) ಜೀವಿಯಿಂದ ಬರುವ ಖಾಯಿಲೆಯಾಗಿದ್ದು, ಇದು ಸೋಂಕು ಹೊಂದಿದ ಕ್ಯುಲೆಕ್ಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದ್ದು, ಈ ಸೊಳ್ಳೆಯು ಸಾಮಾನ್ಯವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಕಚ್ಚುತ್ತದೆ, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವೆಂದು  ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಚಿದಂಬರಂ ಎಚ್ಚರಿಸಿದರು.

ನಗರದ ಕಲ್ಕುಣಿಕೆಯ ಹೌಸಿಂಗ್ ಬೋರ್ಡ್-2ನೇ ಹಂತ ಹಾಗೂ ಗುರುಗಳ ಕಟ್ಟೆ  ಬಡಾವಣೆಯಲ್ಲಿ ರಕ್ತದ ಮಾದರಿ ಸಂಗ್ರಹಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆರೋಗ್ಯ ಕಾರ್ಯಕರ್ತರು 2016-2019 ರಲ್ಲಿ  ನೀಡಿರುವ ಮಾಹಿತಿಯನ್ನಾಧರಿಸಿ ಸರಕಾರವು ಹೌಸಿಂಗ್ ಬೋಡ್ ಹಾಗೂ ಮುಸ್ಲಿಂಬ್ಲಾಕ್‌ನಲ್ಲಿ ತಲಾ ಒಂದು ಪ್ರಕರಣ ಇರುವುದನ್ನು ಮನಗಂಡು, ಸುತ್ತ ಮುತ್ತಲಿನ ಜನವಸತಿ ಪ್ರದೇಶದ 2 ವರ್ಷಕ್ಕೆ ಮೇಲ್ಪಟ್ಟವರ ರಕ್ತದ ಮಾದರಿ ಸಂಗ್ರಹಿಸಿ, ರೋಗವನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿಗಳ ತಂಡವು ರಾತ್ರಿ 8 ರ ನಂತರ ಪ್ರತಿಮನೆ ಮನೆಗೆತೆರಳಿ ರಕ್ತದ ಮಾದರಿ ಸಂಗ್ರಹಸಲು ಬರುತ್ತಾರೆ, ತಡ ರಾತ್ರಿವರೆಗೂ ಈ ತಪಾಸಣಾ ಕಾರ್ಯ ನಡೆಸಲಿದ್ದು, ಸಾರ್ವಜನಿಕರು ಆರೋಗ್ಯ ಸಿಬ್ಬಂದಿಗಳು ಮನೆ ಬಳಿಗೆ ಬಂದ ವೇಳೆ ಭಯಪಡದೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಮಾತನಾಡಿ ಹೊರ ರಾಜ್ಯಗಳಿಂದ ವಲಸೆ ಬಂದಿರುವ ೮ ಮಂದಿಯಲ್ಲಿ ಈ ರೋಗ ಲಕ್ಷಣ ಕಂಡುಬಂದಿದ್ದು, ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಾಲೂಕಿನ ಎಲ್ಲಾ ಪಿಎಚ್.ಸಿ.ಕೇಂದ್ರಗಳ ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ೪೦ ತಂಡವನ್ನು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,  ಆಯಾ ವಾರ್ಡಗಳ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ತಮ್ಮ ವಾರ್ಡಿನಲ್ಲಿ ನಡೆಯುವ ರಕ್ತದ ಮಾದರಿ ಸಂಗ್ರಹಣೆ ವೇಳೆ ಸಹಕಾರ ನೀಡಬೇಕೆಂದು ಕೋರಿದರು.

ರೋಗ ಲಕ್ಷಣಗಳು:

ಸೋಂಕಿತ ಸೊಳ್ಳೆ ಕಚ್ಚಿದ ವಾರದಲ್ಲಿ ಜ್ವರ, ಮೈ-ಕೈನೋವು, ದುಗ್ದಗ್ರಂಥಿಗಳಲ್ಲಿ(ಲೈಮ್ ಫೋನೋಡ್ಸ್) ನೋವು ಕಾಣಿಸಬಹುದು.ನಂತರ 8-10 ವರ್ಷ ಕಳೆದ ನಂತರ ಕಾಲು ಆನೆಯ ಕಾಲಿನಂತಾಗಲಿದೆ. ಕಾಲು ನೀರು ತುಂಬಿದಂತೆ ದಪ್ಪಗಾಗುವುದು. ಚರ್ಮದಪ್ಪವಾಗಲಿದೆ. ಫೋಡ್ಸ್ ಬರುತ್ತದೆ. ಚರ್ಮದಲ್ಲಿ ಕ್ರಾಕ್ ಆಗಿ ಗಾಯವಾಗುವುದು. ಗಾಯವಾಸಿಯಾಗದಿರುವುದು. ಗಂಡಸರಿಗೆ ಬೀಜ ಚೀಲದಲ್ಲಿ ನೀರು ತುಂಬಿ ದಪ್ಪಗಾಗಲಿದೆ. ಕೆಲ ದಿನದ ನಂತರ ನಡೆಯಲು ಕಷ್ಟ, ಇತರೆ ಕಾಯಿಲೆ ಬರುವುದು.

ರೋಗಕ್ಕೆ ಚಿಕಿತ್ಸೆಗಳೇನು:

ಸೊಳ್ಳೆಯಿಂದ ಸೋಂಕು ಪಡೆದ ಆರಂಭದಲ್ಲೇ ರಾತ್ರಿವೇಳೆ ರಕ್ತ ಮಾದರಿ ಸಂಗ್ರಹಿಸಿ, ಅದರಲ್ಲಿ ಮೈಕ್ರೋಫಿಲಾರಿಯಾ ಪರಾವಲಂಬಿ ಜೀವಿ ಕಂಡುಬಂದಲ್ಲಿ ಡಿಇಸಿ (೬ ಎಂ.ಜಿ-ಕೆ.ಜಿ) ಮಾತ್ರೆಯನ್ನು 12 ದಿನಗಳ ಕಾಲ ನೀಡಿ ಗುಣಪಡಿಸಬಹುದು. ಆರಂಭಿಕ ಹಂತದಲ್ಲೇ ಕಂಡು ಹಿಡಿಯದಿದ್ದರೆ, ಚಿಕಿತ್ಸೆ ಪಡೆಯದಿದ್ದರೆ. 8-10 ವರ್ಷದಲ್ಲಿ ಕಾಲು ಆನೆಕಾಲಿನ ಮಾದರಿ ಊತ ಬರಲಿದೆ. ವಾಸಿಯಾಗುವುದಿಲ್ಲ.

ನಿಯಂತ್ರಣ ಹೇಗೆ:

ಕ್ಯುಲೆಕ್ಸ್ ಸೊಳ್ಳೆಗಳು ಗಲೀಜು ನೀರಿನಲ್ಲಿ(ಚರಂಡಿ, ಕೊಳಚೆನೀರು ಶೇಖರಣಾಸ್ಥಳ, ಕಕ್ಕಸ್ಸುಗುಂಡಿ) ಉತ್ಪತ್ತಿಯಾಗಲಿದೆ. ಮನುಷ್ಯ ವಾಸಿಸುವ ಸ್ಥಳದಿಂದ 3 ಕಿ.ಮೀ. ದೂರ ವ್ಯಾಪ್ತಿಯಲ್ಲಿ ಗಲೀಜು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಮಲಗುವಾಗ ಔಷಧ ಲೇಪಿತ ಸೊಳ್ಳೆ ಪರದೆ ಬಳಸಬೇಕು.  ಸೊಳ್ಳೆ ನಿರೋಧಕ ಕಾಯಿಲ್ ಹಚ್ಚಬೇಕು.  ಕ್ಯುಲೆಕ್ಸ್ ಉತ್ಪತ್ತಿ ಮತ್ತು ಕಚ್ಚಿವಿಕೆ ತಡೆಗಟ್ಟುವುದು. ಆನೆಕಾಲು ರೋಗ ತಡೆಗಟ್ಟುವುದು ನಿಯಂತ್ರಣದ ಮುಖ್ಯವಿಧಾನ.

ಈ ವೇಳೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವನಂಜು, ರತ್ನಾಕುಮಾರಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಲಕ್ಷ್ಮಮ, ಮಹದೇವಯ್ಯ ಸೇರಿದಂತೆ ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯKarnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Divorce: A.R. Rahman ends 29 years of marriage

Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

PKL 11: defeat for bengaluru bulls against Patna pirates

PKL 11: ಬುಲ್ಸ್‌ ಗೆ 10ನೇ ಸೋಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

3-hunsur

Hunsur: ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳ ಬಂಧನ

Parameahwar

Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯKarnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Gangolli

Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.