ಪಂಚ ರಾಜ್ಯ ಚುನಾವಣೆ ಮುಂದೂಡಿಕೆ ಸಾಧ್ಯವಿಲ್ಲ: ಕೇಂದ್ರಕ್ಕೆ ಚುನಾವಣಾ ಆಯೋಗ
ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸುವುದು ಹಾಗೂ ಇನ್ನಿತರ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಸೂಚನೆ ನೀಡಿದೆ.
Team Udayavani, Dec 28, 2021, 12:42 PM IST
ನವದೆಹಲಿ : ಕೋವಿಡ್ ಹಾಗೂ ಓಮಿಕ್ರಾನ್ ಹರಡುವಿಕೆಯ ಭೀತಿಯ ಮಧ್ಯೆಯೂ ಮುಂದಿನ ವರ್ಷ ಎದುರಾಗುವ ಪಂಚರಾಜ್ಯಗಳ ಚುನಾವಣೆ ಮುಂದೂಡುವುದು ಅಸಾಧ್ಯ ಎಂದು ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಗೋವಾ, ಮಣಿಪುರ, ಪಂಜಾಬ್, ಉತ್ತರ ಖಂಡ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಸಬೇಕಿದೆ. ಇದರ ಮಧ್ಯೆಯೇ ಕೋವಿಡ್ ಹೆಚ್ಚಳ ಭೀತಿ ರಾಷ್ಟ್ರವನ್ನು ಕಾಡುತ್ತಿದೆ. ಗೋವಾ ಹಾಗೂ ಪಂಜಾಬ್ ನಲ್ಲಿ ಅಧ್ಯಯನ ಪ್ರವಾಸ ನಡೆಸಿದ ಬಳಿಕ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಜತೆಗೆ ಸೋಮವಾರ ಸಭೆ ನಡೆಸಿದ ಆಯೋಗ ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸಿದೆ.
ಚುನಾವಣೆ ನಡೆಸುವುದು ಸಂವಿಧಾನಾತ್ಮಕ ಕರ್ತವ್ಯ ಹಾಗೂ ಅನಿವಾರ್ಯತೆ. ಅದನ್ನು ಮುಂದೂಡುವುದು ಅಸಾಧ್ಯ. ಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸುವುದು ಹಾಗೂ ಇನ್ನಿತರ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಉತ್ತರಖಂಡದಲ್ಲಿ ಮೊದಲ ಡೋಸ್ ಲಸಿಕೆ ಪ್ರಕ್ರಿಯೆ ಶೇ.೧೦೦ರಷ್ಟು ಪೂರ್ಣಗೊಂಡಿದೆ. ಉತ್ತರ ಪ್ರದೇಶದಲ್ಲಿ ಶೇ. ೮೫, ಮಣಿಪುರ, ಪಂಜಾಬ್ ಶೇ.80, ಗೋವಾದಲ್ಲಿ ಶೇ.100ರಷ್ಟು ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ಲಸಿಕೆಯನ್ನು ಶೀಘ್ರ ಪೂರೈಸುವುದಕ್ಕೆ ಆಯೋಗ ಸಲಹೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.