ಹೆದ್ದಾರಿ ಮಾರ್ಗ ಫಲಕದಲ್ಲಿ”ಅಕ್ಷರ ದೋಷ’
Team Udayavani, Dec 28, 2021, 1:15 PM IST
ಜೇವರ್ಗಿ: ಹುಮ್ನಾಬಾದದಿಂದ ಕಲಬುರಗಿ ನಗರ ಹಾಗೂ ಜೇವರ್ಗಿ ಪಟ್ಟಣದ ಮೂಲಕ ವಿಜಯಪುರನಗರಕ್ಕೆ ಹಾಯ್ದು ಹೋಗಿರುವ ರಾಷ್ಟ್ರೀಯಹೆದ್ದಾರಿ-50ರಲ್ಲಿ ಕನ್ನಡದ ಕಗ್ಗೊಲೆಯಾಗಿದೆ.ಪರಿಣಾಮ ಊರುಗಳ ನೈಜ ಹೆಸರು ಅರಿಯಲುಪ್ರಯಾಣಿಕರು ಹೆಣಗಾಡಬೇಕಿದೆ.
ರಾಜ್ಯದ ರಾಜಧಾನಿ ಬೆಂಗಳೂರು “ಬ್ ಂಗಳೂರು’, ಹೊಸಪೇಟೆಗೆ”ಹೂಸಪೇಟ’, ಕೋಟ ನೂರಗೆ ಕೋಟ್ನೂರ್, ಸಿರನೂರಗೆ “ಸಿರ್ನೂರ’, ರೇವನೂರಗೆ “ರಾವನೂರ’, ಆಳಂದಗೆ “ಅಳಂದ ಎಂದು ನಗರದ ಮತ್ತು ಊರುಗಳ ಹೆಸರನ್ನು ತಪ್ಪು ತಪ್ಪಾಗಿ ಬರೆದು ಆಭಾಸವುಂಟು ಮಾಡಲಾಗಿದೆ.
ಹೆದ್ದಾರಿ ಪ್ರಾಧಿಕಾರದವರು ಮಾಡಿರುವ ಯಡವಟ್ಟಿನಿಂದಸಾಕಷ್ಟು ಜನರಿಗೆ ನಿತ್ಯ ತೊಂದರೆಯಾಗುತ್ತಿದೆ. ಕೂಡಲೇ ಅಕ್ಷರ ದೋಷ ಸರಿಪಡಿಸಲು ಪ್ರಯತ್ನಿಸಬೇಕು. ಗುರುಲಿಂಗಯ್ಯಸ್ವಾಮಿ ಯನಗುಂಟಿ, ಸ್ಥಳೀಯರು.
ಜೇವರ್ಗಿ ಪಟ್ಟಣ ಮೂಲಕ ಹಾಯ್ದು ಹೋಗಿರುವ ಹೆದ್ದಾರಿ-50ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆಲ ಗ್ರಾಮಗಳ, ನಗರಗಳ ಹೆಸರು ಬರೆದು ಅಳವಡಿಸಿರುವ ನಾಮಫಲಕಗಳಲ್ಲಿ ಆಗಿರುವ ಕನ್ನಡ ಭಾಷೆಯ ಕಗ್ಗೊಲೆಯಾಗಿರುವ ಪರಿ ಇದು.
ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಊರುಗಳ ಸಮೀಪ ಪ್ರಯಾಣಿಕರಿಗೆ, ದೂರದ ಊರುಗಳಿಂದಬರುವವರಿಗೆ, ಸ್ನೇಹಿತರಿಗೆ ಗ್ರಾಮಗಳ ಹೆಸರುಸುಲಭವಾಗಿ ಗುರುತು ಸಿಗುವಂತೆ ಮಾಡುವಉದ್ದೇಶದಿಂದ ಸಹಜವಾಗಿ ಗ್ರಾಮಗಳ ಬಸ್‌ನಿಲ್ದಾಣ ಹಾಗೂ ತಂಗುದಾಣಗಳ ಬಳಿ ಊರುಗಳಹೆಸರು ಬರೆದು ನಾಮಫಲಕ ಹಾಕುವುದು ಸಾಮಾನ್ಯ.
ಆದರೆ ಅದೇ ಊರುಗಳ ಹೆಸರುಗಳನ್ನು ಹೆದ್ದಾರಿ ಪ್ರಾಧಿಕಾರವೀಗ ಮಾಡಿರುವ ಎಡವಟ್ಟಿನಿಂದ ಪ್ರಯಾಣಿಕರ ಹಾಗೂ ಗ್ರಾಮಸ್ಥರಿಂದ ನಿತ್ಯ ಅಪಹಾಸ್ಯಕ್ಕೀಡಾಗುತ್ತಿರುವುದು ಒಂದೆಡೆಯಾದರೆಮತ್ತೂಂದೆಡೆ ಕನ್ನಡ ಭಾಷೆ ಕಗ್ಗೊಲೆಯಾಗಿ ಕನ್ನಡಿಗರಆಕ್ರೋಶಕ್ಕೆ ಕಾರಣವಾಗಿದೆ. ಬಹಳಷ್ಟು ಗ್ರಾಮಗಳ ಹೆಸರು ನಾಮಫಲಕಗಳಲ್ಲಿ ಕಾಗುಣಿತ ದೋಷದಿಂದ ಗ್ರಾಮಗಳಿಗೆ ಬರುವ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ. ಬಹಳಷ್ಟುಕಡೆ ಕಾಗುಣಿತ ತಪ್ಪಿನಿಂದ ಈ ರೀತಿಯ ಆವಾಂತರ ನಾಮಫಲಕಗಳಲ್ಲಾಗಿದ್ದು, ಸರಿಪಡಿಸುವ ಗೋಜಿಗೆ ಯಾರೂ ಮುಂದಾಗಿಲ್ಲ.
ಕಲಬುರಗಿಯಿಂದ ಜೇವರ್ಗಿ ಮಾರ್ಗವಾಗಿ ಸಿಂದಗಿಗೆ ತೆರಳುವ ಮಾರ್ಗದುದ್ದಕ್ಕೂ ಬಹಳಷ್ಟು ಗ್ರಾಮಗಳ ಹೆಸರು ತಪ್ಪಾಗಿ ನಾಮಫಲಕಗಳಲ್ಲಿಅಳವಡಿಸಲಾಗಿದೆ. ಆದರೆ ಯಾರೂ ಕೂಡ ಈಬಗ್ಗೆ ಧ್ವನಿ ಮೊಳಗಿಸಿ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸಕ್ಕೆ ಮುಂದಾಗಿಲ್ಲ. ಈ ಮಾರ್ಗದ ಮೂಲಕ ರಾಜ್ಯದ ಮಂತ್ರಿಗಳು, ಶಾಸಕರು, ಜಿಲ್ಲಾ-ರಾಜ್ಯಮಟ್ಟದ ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಈ ಬಗ್ಗೆ ಯಾರೂ ಗಮನ ಹರಿಸದಿರುವುದು ಬೇಸರದ ಸಂಗತಿ.
ಅಕ್ಷರ ದೋಷದಿಂದ ಊರಿನ ನಿಜವಾದ ಹೆಸರೇನು ಎಂದು ಅರಿಯಲು ಅವರಿವರ ಸಹಾಯ ಪಡೆಯುವಂತಾಗಿದೆ. ಇದರಿಂದ ವಾಹನಚಾಲಕರಿಗೆ ಗೊಂದಲ ಸೃಷ್ಟಿಯಾಗಿದೆ. ಕನ್ನಡಪರ ಸಂಘಟನೆ ಕಾರ್ಯಕರ್ತರು ನಿತ್ಯ ಇದೇ ರಸ್ತೆ ಮೇಲೆ ಸಂಚರಿಸಿದರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ.
ಹೆದ್ದಾರಿ ಪ್ರಾಧಿಕಾರದವರು ಮಾಡಿರುವ ಯಡವಟ್ಟಿನಿಂದ ಸಾಕಷ್ಟು ಜನರಿಗೆ ನಿತ್ಯ ತೊಂದರೆಯಾಗುತ್ತಿದೆ. ಕೂಡಲೇ ಅಕ್ಷರ ದೋಷಸರಿಪಡಿಸಲು ಪ್ರಯತ್ನಿಸಬೇಕು.-ಗುರುಲಿಂಗಯ್ಯಸ್ವಾಮಿ ಯನಗುಂಟಿ, ಸ್ಥಳೀಯರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದು ಕೂಡಲೇ ಅಕ್ಷರ ದೋಷ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. -ವಿನಯಕುಮಾರ ಪಾಟೀಲ, ತಹಶೀಲ್ದಾರ್, ಜೇವರ್ಗಿ
-ವಿಜಯಕುಮಾರ ಎಸ್.ಕಲ್ಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.