ತೀರ್ಥಹಳ್ಳಿ: ಕುಡಿದ ಮತ್ತಿನಲ್ಲಿ ಶಾಲೆಯ ವಿಗ್ರಹ ಧ್ವಂಸ ಮಾಡಿದ ಕುಡುಕ
Team Udayavani, Dec 28, 2021, 6:55 PM IST
ತೀರ್ಥಹಳ್ಳಿ: ತಾಲ್ಲೂಕಿನ ಹಾರೊಗೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಮ್ಮೂರ ಶಾಲೆಯಲ್ಲಿದ ಸರಸ್ವತಿ ವಿಗ್ರಹವನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.
ಘಟನೆಯ ಬಗ್ಗೆ ಯಾರೋ ಕಿಡಿಗೇಡಿಗಳು ಮದ್ಯ ಕುಡಿದು ದಾಂಧಲೆ ಮಾಡಿದ್ದಾರೆ ಎಂಬುದಾಗಿ ಸುದ್ದಿ ಹಬ್ಬಿತ್ತಾದರೂ ವಾಸ್ತವವಾಗಿ ಕಳೆದ 1ವಾರದ ಹಿಂದೆ ಗೋವಿಂದ ಎಂಬುವವನು ಶಾಲೆಯ ಮುಖ್ಯ ಶಿಕ್ಷಕಿ ಬಳಿ ಬಂದು ಕುಡಿಯುವುದಕ್ಕೆ ನೀರು ಕೇಳಿದ್ದಾರೆ ನೀರು ಕೊಡದೆ ಶಿಕ್ಷಕಿ ಆಚೆ ಕಳಿಸಿದಾರೆ ಎಂದು ಸಿಟ್ಟಿಗೆ ಗೋವಿಂದ ಈ ದಾಂಧಲೆ ನಡೆಸಿದ್ದಾರೆ.
ಗೋವಿಂದ ಹಾರೋಗೊಳಿಗೆ ಸುತ್ತಮುತ್ತ ಕಳೆದ ಇಪ್ಪತ್ತು ವರ್ಷಗಳಿಂದ ಕೆಲ ಬಲಾಡ್ಯರ ಮನೆಗಳಿಗೆ ಅಡಿಕೆ ಆರಿಸುವ ಕೆಲಸಕ್ಕೆ ಈತ ಕಾಯಂ ಕೆಲಸಗಾರ,
ಈತ ಒಬ್ಬನೆ ಇದ್ದು ಸ್ಥಳೀಯ ರಂಗಮಂದಿರದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಊರಿನಲ್ಲಿ ಅಡಿಕೆ ಆರಿಸುವ ಕೆಲಸ ಮಾಡುವುದು ಅವರು ಕೊಡುವ ಚೂರುಪಾರು ಹಣದಲ್ಲಿ ಮದ್ಯ ಸೇವನೆ ಮಾಡುವುದು ಇವರ ಕಾಯಕ ಎಂಬುದರ ಬಗ್ಗೆ ಸ್ಥಳೀಯರು ಆರೋಪಿಸಿದ್ದು, ಈತ ಕುಡಿಯಲು ನೀರು ಕೊಡಲಿಲ್ಲ ಎಂಬ ಕಾರಣಕ್ಕೆ ಶಾಲೆಯ ಎದುರು ನಿರ್ಮಾಣ ಮಾಡಿದ ಗಾಂಧೀಜಿ ಪ್ರತಿಮೆ, ಸರಸ್ವತಿ ಪ್ರತಿಮೆ, ವಿವೇಕಾನಂದ, ಬುದ್ಧ ಪ್ರತಿಮೆ ಪುಡಿ ಪುಡಿ ಮಾಡಿ ಶಾಲೆಯ ಹಿಂದಿನ ತೋಟದಲ್ಲಿ ಇರುವ ಪೈಪ್ ಲೈನ್ ಮತ್ತು ಪೈಪಿಗೆ ಅಳವಡಿಸಿದ ಆರು ಜೆಟ್ ಮುರಿದು ಹಾಕಿದ್ದಾನೆ.
ಸ್ಥಳೀಯ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಸಸಿತೋಟ ಮಂಜುನಾಥ್ ರವರು ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಾರೆ. ದೂರಿನ ಆಧಾರದ ಮೇಲೆ ಪೋಲೀಸರು ಈತನನ್ನು ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.