ಶಕ್ತಿಧಾಮದ ಮಕ್ಕಳೊಂದಿಗೆ ಖೊ-ಖೋ ಆಡಿದ ಶಿವಣ್ಣ !
Team Udayavani, Dec 29, 2021, 5:27 PM IST
1. ಕೊರಗಜ್ಜನ ಗುಡಿಗೆ ಕಾಂಡೋಮ್ ಪ್ರಕರಣಕ್ಕೆ ತಿರುವು
ಮಾರ್ನಮಿಕಟ್ಟೆಯ ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೋಮ್ ನ್ನು ಇಟ್ಟು ಅಪವಿತ್ರಗೊಳಿಸಿದ ಘಟನೆ ತೀವ್ರ ಜನಾಕ್ರೋಶಕ್ಕೆ ಗುರಿಯಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2. ಕೊರಗ ಸಮಾಜಕ್ಕೆ ಪೊಲೀಸ್ ದೌರ್ಜನ್ಯ: ಪಿ.ಎಸ್.ಐ ಅಮಾನತ್ತು
ಸೋಮವಾರ ರಾತ್ರಿ ಕೋಟತಟ್ಟು ಕೊರಗ ಕಾಲೋನಿಯ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸ್ ಲಾಟಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ. ಈ ಸಂಬಂಧ ಕೋಟ ಠಾಣಾಧಿಕಾರಿ ಸಂತೋಷ್ ಬಿ ಪಿ ಅವರನ್ನು ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಅವರು ಆದೇಶ ಹೊರಡಿಸಿದ್ದಾರೆ.
3. ಯೂರೋಪ್ ನಲ್ಲಿ ಕ್ರೈಸ್ತ ಧರ್ಮ ನೆಲ ಕಚ್ಚುತ್ತಿದೆ: ಪ್ರತಾಪ್ ಸಿಂಹ
ಯೂರೋಪಿಯನ್ ದೇಶಗಳಲ್ಲಿ ಕ್ರೈಸ್ತ ಧರ್ಮ ನೆಲ ಕಚ್ಚುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಆ ಕಾರಣಕ್ಕಾಗಿ ನಮ್ಮ ದೇಶದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನವೇ ಮತಾಂತರ ಎಂದು ಅವರು ಆರೋಪಿಸಿದ್ದಾರೆ.
4. ಮಾಲೇಗಾಂವ್ ಸ್ಫೋಟಕ ಪ್ರಕರಣ: ಉಲ್ಟಾ ಹೊಡೆದ ಸಾಕ್ಷಿ!
2008ರ ಮಾಲೇಗಾಂವ್ ಸ್ಫೋಟಕ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಉತ್ತರಪ್ರದೇಶದ ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಆರೆಸ್ಸೆಸ್ನ ನಾಲ್ವರು ನಾಯಕರ ಹೆಸರುಗಳನ್ನು ಹೇಳುವಂತೆ ಮಹಾರಾಷ್ಟ್ರ ಉಗ್ರ ನಿಗ್ರಹ ಪಡೆ ನನ್ನ ಮೇಲೆ ಒತ್ತಡ ಹೇರಿತ್ತು ಎಂದು ಸಾಕ್ಷಿಯೊಬ್ಬರು ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ.
5. ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಹೆಚ್ಚಳ
ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ ನಲ್ಲಿ ಮೊದಲ ಬಾರಿ ಪತ್ತೆಯಾದ ಕೋವಿಡ್ 19ನ ನೂತನ ರೂಪಾಂತರ ತಳಿ ಒಮಿಕ್ರಾನ್ ಇದೀಗ ಭಾರತದ 21 ರಾಜ್ಯಗಳಲ್ಲಿ ಹರಡಿದೆ. ಮತ್ತೊಂದೆಡೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 781ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
6. ಬಿಜೆಪಿಗೆ ಅಧಿಕಾರ ನೀಡಿದ್ರೆ 75 ರೂ.ಗೆ ಮದ್ಯ: ವೀರರಾಜು
ಆಂಧ್ರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಒಂದು ವೇಳೆ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ನೀಡಿದರೆ, 75 ರೂಪಾಯಿಗೆ ಮದ್ಯ ನೀಡಲಾಗುವುದು ಎಂದು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
7. ಮಕ್ಕಳೊಂದಿಗೆ ಶಿವಣ್ಣ ಖೊ-ಖೋ ಆಟ!
ಪವರ್ಸ್ಟಾರ್ ಪುನೀತ್ ರಾಜಕುಮಾರ್ ಆಶ್ರಯವಾಗಿ ನಿಂತಿದ್ದ ಮೈಸೂರಿನ “ಶಕ್ತಿಧಾಮ’ ಮಕ್ಕಳ ಕೇಂದ್ರಕ್ಕೆ ಇತ್ತೀಚೆಗೆ ನಟ ಶಿವರಾಜಕುಮಾರ್ ಭೇಟಿ ನೀಡಿದರು. ಈ ವೇಳೆ “ಶಕ್ತಿಧಾಮ’ದ ಮಕ್ಕಳೊಂದಿಗೆ ಕೆಲ ಸಮಯ ಕಳೆದ ಶಿವರಾಜಕುಮಾರ್ ಅಲ್ಲಿನ ಮಕ್ಕಳೊಂದಿಗೆ, ತಾನು ಮಕ್ಕಳಂತೆ ಬೆರೆತು ಖೋ- ಖೋ ಆಟ ಆಡಿದ್ದಾರೆ.
8. ವಿಕೆಟ್ ಕೀಪಿಂಗ್ ನಲ್ಲಿ ರಿಷಭ್ ಪಂತ್ ಶತಕ
ಸೂಪರ್ ಸ್ಪೋರ್ಟ್ ಪಾರ್ಕ್ ನಲ್ಲಿ ಭಾರತದ ಭರವಸೆಯ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿರುವ ರಿಷಭ್ ಪಂತ್ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಒಟ್ಟಾರೆ ರಿಷಭ್ ಪಂತ್ ಈ ವರೆಗೆ 100 ವಿಕೆಟ್ ಪತನಕ್ಕೆ ಕಾರಣರಾಗಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು