ಶೇಂಗಾ ಬಿತ್ತನೆಗೆ ಹೊಸ ಪ್ರಯೋಗ! ಬಿತ್ತನೆಗೆ ಕೃಷಿ ಕಾರ್ಮಿಕರ ಕೊರತೆಗೆ ಪರಿಹಾರ!

Team Udayavani, Dec 29, 2021, 5:59 PM IST

ಶೇಂಗಾ ಬಿತ್ತನೆಗೆ ಹೊಸ ಪ್ರಯೋಗ! ಬಿತ್ತನೆಗೆ ಕೃಷಿ ಕಾರ್ಮಿಕರ ಕೊರತೆಗೆ ಪರಿಹಾರ!

ಕುಂದಾಪುರ: ಭತ್ತ, ನೆಲಗಡಲೆ ಸಹಿತ ಎಲ್ಲ ರೀತಿಯ ಕೃಷಿಗೂ ಈಗ ಕಾರ್ಮಿಕರ ಕೊರತೆ ಸಾಮಾನ್ಯವಾಗಿದ್ದು, ಅದಕ್ಕೆ ಯಾಂತ್ರೀಕೃತ ಕೃಷಿ ಒಂದು ರೀತಿಯಲ್ಲಿ ಪರಿಹಾರ ಎಂಬಂತಾಗಿದೆ. ಭತ್ತದ ಕೃಷಿಯಲ್ಲಿ ನಾಟಿ, ಕಟಾವು ಸಹಿತ ಎಲ್ಲವೂ ಯಾಂತ್ರೀಕರಣಗೊಳ್ಳುತ್ತಿದ್ದು, ಅದೇ ರೀತಿ ಈಗ ಶೇಂಗಾ (ನೆಲಗಡಲೆ) ಬೀಜ ಬಿತ್ತನೆಗೂ ರೈತರು ಹೊಸ ಪ್ರಯೋಗ ಕಂಡುಕೊಂಡಿದ್ದಾರೆ.

ಬೈಂದೂರು ಹೋಬಳಿಯ ಕೆರ್ಗಾಲು, ನಾಯ್ಕನಕಟ್ಟೆ, ಬಿಜೂರು ಭಾಗದಲ್ಲಿ ಈಗ ಶೇಂಗಾ ಬಿತ್ತನೆ ಕಾರ್ಯ ನಡೆಯುತ್ತಿದ್ದು, ಬಿತ್ತನೆಗೆ ರೈತರು, ಕೂಲಿಯಾಳುಗಳ ಬದಲಾಗಿ ಯಂತ್ರದ ಮೊರೆ ಹೋಗಿದ್ದಾರೆ. ಟ್ರ್ಯಾಕ್ಟರ್ ನ ಉಳುಮೆ ಮಾಡುವ ಕೊಕ್ಕೆಗೆ ಒಂದು ಇಂಚಿನ ಪೈಪ್‌ ಕಟ್ಟಿ, 6 ಹಲ್ಲುಗಳ ಮೂಲಕ ಶೇಂಗಾ ಬೀಜ ಬಿತ್ತನೆ ಮಾಡಲಾಗುತ್ತಿದೆ.

ಖರ್ಚು ಕಡಿಮೆ
ಕೆರ್ಗಾಲು ಗ್ರಾ.ಪಂ. ಮಾಜಿ ಅಧ್ಯಕ್ಷ, ನಾಯ್ಕನಕಟ್ಟೆಯ ಸುಂದರ್‌ ಕೊಠಾರಿ ಅವರು ಈ ಭಾಗದಲ್ಲಿ ಮೊದಲ ಬಾರಿಗೆ ಈ ಪ್ರಯೋಗಕ್ಕೆ ಮುಂದಾಗಿದ್ದು, ಅವರ ಪ್ರಕಾರ ಎರಡು ಎಕರೆಗೆ ಈ ಬಾರಿ ಈ ಯಂತ್ರದ ಮೂಲಕ ಒಟ್ಟಾರೆ 3 ಸಾವಿರ ರೂ. ಖರ್ಚಾಗಿದೆ. ಅದೇ ಕಾರ್ಮಿಕರನ್ನು ಬಳಸಿಕೊಂಡರೆ, ಬೆಳಗ್ಗೆ, ಸಂಜೆ, ಮರು ದಿನ 3 ಹೊತ್ತಿಗೆ 18 ಜನ ಕಾರ್ಮಿಕರ ಅಗತ್ಯವಿರುತ್ತದೆ. ಇವರಿಗೆ ಕೂಲಿಯೇ ದುಬಾರಿಯಾಗುತ್ತದೆ. ಆದರೆ ಇದರಲ್ಲಿ ಕೇವಲ ಇಬ್ಬರು ಕೂಲಿಯಾಳುಗಳಿದ್ದರೆ ಸಾಕು ಎನ್ನುತ್ತಾರೆ.

ಕಾರ್ಮಿಕರ ಸಮಸ್ಯೆಗೆ ಪರಿಹಾರ
ನೆಲಗಡಲೆ ಕೃಷಿ ಸಹಿತ ಎಲ್ಲ ಕೃಷಿ ಕಾರ್ಯಕ್ಕೂ ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ ತಲೆದೋರಿದೆ. ಈ ಯಾಂತ್ರೀಕೃತ ಕೃಷಿ ಮೂಲಕ ಅದಕ್ಕೆ ತಕ್ಕಮಟ್ಟಿಗೆ ಪರಿಹಾರ ಸಿಕ್ಕಂತಾಗಿದೆ. ಕೂಲಿಯಾಳು ಮೂಲಕ ಎಕರೆಗೆ ಕನಿಷ್ಠ 3 ಗಂಟೆ ಬಿತ್ತನೆಗೆ ವ್ಯಯವಾದರೆ, ಇದರಲ್ಲಿ ಒಂದು, ಒಂದೂವರೆ ಗಂಟೆಯೊಳಗೆ ಎಲ್ಲ ಕಾರ್ಯ ಮುಗಿಯುತ್ತದೆ.

ಬಿತ್ತನೆ ಕಾರ್ಯ ಚುರುಕು
ಹಿಂಗಾರು ಹಂಗಾಮಿನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಹಾಗೂ ಕೋಟ ಹೋಬಳಿಯ 18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ರೈತರು ನೆಲಗಡಲೆ ಬೆಳೆಯುತ್ತಾರೆ. ನಿರಂತರ ಮಳೆಯಿಂದಾಗಿ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮಳೆ ಕಡಿಮೆಯಾಗಿರುವುದರಿಂದ ಈಗ ಗದ್ದೆ ಒಣಗಿದ್ದು, ಚಳಿಯೂ ಇರುವುದರಿಂದ ಬಿತ್ತನೆಗೆ ಪ್ರಶಸ್ತ ವಾತಾವರಣವಿದೆ.

ಟಾಪ್ ನ್ಯೂಸ್

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

1-karkala

Karkala: ನಕ್ಸಲ್ ನಾಯಕ ವಿಕ್ರಂ ಗೌಡ ಹೆಬ್ರಿಯ‌ ಕಾಡಿನಲ್ಲಿ ಎನ್ ಕೌಂಟರ್ ಗೆ ಬಲಿ

udupi

udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

Udupi: ಗೀತಾರ್ಥ ಚಿಂತನೆ-98: ಮೋಹ ಸಹಜ, ಬಿಡದಿರುವುದು ಮಾತ್ರ ತಪ್ಪು

Udupi: ಗೀತಾರ್ಥ ಚಿಂತನೆ-98: ಮೋಹ ಸಹಜ, ಬಿಡದಿರುವುದು ಮಾತ್ರ ತಪ್ಪು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.