40 ವರ್ಷದ ಕೇಶವ ಸೃಷ್ಟಿ ಗೋಶಾಲೆ ವಿಶ್ವವಿದ್ಯಾಲಯದಂತಿದೆ : ಸಚಿವ ಚವ್ಹಾಣ್
Team Udayavani, Dec 29, 2021, 7:16 PM IST
ಮುಂಬಯಿ : ಮಹಾರಾಷ್ಟ್ರದ ಭಾಯಂದರ್ ನಲ್ಲಿರುವ ಕೇಶವ ಸೃಷ್ಟಿ ಗೋಶಾಲೆಗೆ ಇಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಅಧ್ಯಯನ ನಡೆಸಿದರು. ಸುಮಾರು 40 ವರ್ಷಗಳಿಂದ ಕೇಶವ ಶಾಲೆ ನಡೆಯುತ್ತಿದ್ದು ಗೋಉತ್ಪನ್ನ ತಯಾರಿಕೆಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದು ಸಚಿವರು ಹೇಳಿದರು.
ಸರ್ಕಾರಿ, ಖಾಸಗಿ, ಹವ್ಯಾಸಿ ಎಲ್ಲರಿಗೂ ಇಲ್ಲಿ ತರಬೇತಿ ನೀಡಲಾಗುತ್ತದೆ. ಸಾವಯವ ಕೃಷಿಗೆ ಪೂರಕವಾಗುವಂತೆ ಸಾವಯವ ಗೊಬ್ಬರದ ಬಳಕೆ, ಕೀಟನಾಶಕಗಳ ಬಳಕೆ ಇಲ್ಲದೇನೆ ಕೇವಲ ಗೋಮೂತ್ರದಿಂದ ತಯಾರಾದ ಜೀವಾಮೃತ ಗಳ ಬಳಕೆ ಮೂಲಕ ಕೃಷಿಗೆ ಆದ್ಯತೆ ನೀಡುತ್ತಿರುವುದು ಇಲ್ಲಿನ ವಿಶೇಷತೆ. ಅಲ್ಲದೆ ನೀರಿನ ಸದ್ಬಳಕೆ, ನೀರಿನ ಸಂರಕ್ಷಣೆ, ಅಂತರ್ಜಲ ಹೆಚ್ಚಿಸಲು ತೆಗೆದುಕೊಂಡ ಕ್ರಮಗಳು ನಿಜಕ್ಕೂ ವಿಶೇಷವಾಗಿವೆ. ಅಲ್ಲದೆ ಕೇಶವ ಸೃಷ್ಟಿ ಗೋಶಾಲೆ ಇಂದು ವಿಶ್ವವಿದ್ಯಾಲಯದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವರು ಬಣ್ಣಿಸಿದ್ದಾರೆ.
ಕೇಶವ ಸೃಷ್ಟಿ ಗೋಶಾಲೆಯಲ್ಲಿ ವನೌಷಧಿ, ಸಾವಯವ ಆಧಾರಿತ ಕೃಷಿ, ವೃದ್ಧಾಶ್ರಮ ಹಾಗೆ ನಿವಾಸಿ ಶಾಲೆಗಳು ಈ ಪರಿಸರದಲ್ಲಿ ನಡೆಯುತ್ತಿವೆ ಎಂದು ಅವರು ವಿವರಿಸಿದ್ದಾರೆ.
ಇಲ್ಲಿ ವಿಶೇಷವಾಗಿ ದೇಶೀಯ ಗೋವುಗಳನ್ನು ಸಾಕಲಾಗಿದ್ದು ಗೀರ್ ತಳಿಯ 250ಕ್ಕೂ ಹೆಚ್ಚು ಗೋವುಗಳನ್ನು ಇಲ್ಲಿ ಪಾಲನೆ ಮಾಡಲಾಗುತ್ತಿದ್ದು ನಿತ್ಯ 2 ಟನ್ ಗೊಬ್ಬರ ಬಳಸಿ 30 ಕೆಜಿ ಬಯೋಗ್ಯಾಸ್ ತಯಾರು ಮಾಡಲಾಗುತ್ತಿದೆ. ಈ ಬಯೋಗ್ಯಾಸ್ ಕೇಶವ ಸೃಷ್ಟಿ ಗೋಶಾಲೆಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಉತ್ಪಾದನೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಗ್ಯಾಸ್ ಉತ್ಪಾದನೆಯಾದ ನಂತರ ಉಳಿಯುವಂತಹ ಸ್ಲರಿ ಬಳಸಿಕೊಂಡು ಅನೇಕ ಉಪ ಉತ್ಪನ್ನಗಳನ್ನು ತಯಾರಿ ಮಾಡಲಾಗುತ್ತದೆ .ಗೋಮಯ ಮತ್ತು ಗೋಮೂತ್ರದಿಂದ 20ಕ್ಕೂ ಹೆಚ್ಚು ಉತ್ಪನ್ನಗಳನ್ನು ಕೇಶವ ಸೃಷ್ಟಿ ಗೋಶಾಲೆಯಲ್ಲಿ ತಯಾರು ಮಾಡಲಾಗುತ್ತಿದೆ. ಇಲ್ಲಿ ತಯಾರಾದ ಉತ್ಪನ್ನಗಳು ಅತ್ಯಂತ ಗುಣಮಟ್ಟದಿಂದ ಕೂಡಿದ್ದು ಇದಕ್ಕೆ ಬೇಕಾದ ಮಾರುಕಟ್ಟೆಯನ್ನು ಸಹ ಗೋಶಾಲೆಯವರು ಸಿದ್ಧಪಡಿಸಿಕೊಂಡಿದ್ದಾರೆ. ಇಲ್ಲಿನ ಅಧಿಕಾರಿಗಳ ಅನುಭವದಂತೆ ಗೋವುಗಳನ್ನು ಅದರ ಹಾಲಿಗೆ ಮಾತ್ರ ಬಳಸಿಕೊಳ್ಳದೆ, ಗೋಮಯ, ಗೋಮೂತ್ರ ಬಳಸಿಕೊಂಡು ಗೋಶಾಲೆಗಳನ್ನು ಹೇಗೆ ಸ್ವಾವಲಂಬಿಯಾಗಿ ನಡೆಸಬಹುದು ಎನ್ನುವ ನಿಟ್ಟಿನಲ್ಲಿ ಕೇಶವ ಸೃಷ್ಟಿ ಗೋಶಾಲೆ ಮಾದರಿಯಾಗಿದೆ.
ಕೇಶವ ಸೃಷ್ಟಿ ಪರಿಸರದಲ್ಲಿ ಗ್ರಾಮವಿಕಾಸದ ಪರಿಕಲ್ಪನೆಗಳು, ಮಹಾರಾಷ್ಟ್ರಾದ 75 ಕ್ಕೂ ಹೆಚ್ವು ಗ್ರಾಮಗಳಲ್ಲಿ ಗ್ರಾಮವಿಕಾಸದ ಯೋಜನೆಗಳು ಜಾರಿಯಲ್ಲಿವೆ. ಔಷಧಿ ಗಿಡಮೂಲಿಕೆಗಳ ಉಪಯೋಗ ಮಾಡಿಕೊಂಡು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ವಿಶೇಷ ಔಷಧಗಳಿಗೆ ಪೇಟೆಂಟ್ ಪಡೆದುಕೊಂಡು ಮಾರಾಟ ಸಹ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಸುಮಾರು 160 ಎಕರೆ ಪ್ರದೇಶದಲ್ಲಿ ಕೃಷಿ ಹಾಗೂ ಇವುಗಳಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಕೃಷಿಯನ್ನು ಹಾಗೂ ಅವುಗಳನ್ನು ಬಳಸಿಕೊಂಡು ಸಮೃದ್ಧವಾದ ಗೋಶಾಲೆ ಮತ್ತು ಕೃಷಿ ನಡೆಸಬಹುದಾಗಿದೆ.ಕೇಶವ ಸೃಷ್ಟಿ ಗೋಶಾಲೆಯಲ್ಲಿ ಕೃಷಿ ಹಾಗೂ ಗೋಪಾಲನೆ ಗಳ ಬಗ್ಗೆ ತರಬೇತಿ ಸಹ ನೀಡಲಾಗುತ್ತದೆ. 600ಕ್ಕೂ ಹೆಚ್ಚು ಜನರು ತರಬೇತಿ ಹಾಗೂ ಬೇರೆ ಬೇರೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಮ್ಮ ರಾಜ್ಯದ ಗೋಶಾಲೆಗಲ್ಲಿ ಮಹಾರಾಷ್ಟ್ರ ಮಾದರಿ ಅಳವಡಿಸಿಕೊಂಡರೆ ಪ್ರತಿಯೊಬ್ಬ ರೈತ, ಪಶುಪಾಲಕರು ಹಾಗೂ ಜಾನುವಾರು ಸಾಕಣೆ ಮಾಡುವವರು ಆರ್ಥಿಕವಾಗಿ ಮತ್ತಷ್ಟು ಸಬಲರಾಗಬಲ್ಲರು-ಪ್ರಭು ಚವ್ಹಾಣ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.