![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 30, 2021, 3:49 PM IST
ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಚಿತ್ರ ‘ಆರ್ ಆರ್ ಆರ್’ ಬಿಡುಗಡೆಗೂ ಮುನ್ನ ಭಾರೀ ಹವಾ ಸೃಷ್ಟಿಸಿದೆ. ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ನಿರ್ದೇಶನದ ಚಿತ್ರವು ಸುಮಾರು 6000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜನವರಿ 7ರಂದು ತೆರೆ ಕಾಣುತ್ತಿದೆ. ಆದರೆ ಭಾರತದಲ್ಲಿ ಕೋವಿಡ್ ಸೋಂಕು ಸಂಖ್ಯೆ ಹೆಚ್ಚುತ್ತಿರುವ ಕಾರಣ ಆರ್ ಆರ್ ಆರ್ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದೀಗ ನಿರ್ದೇಶಕ ರಾಜಮೌಳಿ ಅವರು ಈ ಸುದ್ದಿಗಳನ್ನು ಅಲ್ಲಗಳೆದಿದ್ದು, ನಿಗದಿಯಂತೆ ಜ.7ರಂದೇ ಚಿತ್ರ ಬಿಡುಗಡೆಯಾಗುತ್ತದೆ ಎಂದಿದ್ದಾರೆ.
ಬಾಲಿವುಡ್ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. “ಬ್ರೇಕಿಂಗ್ ನ್ಯೂಸ್.. ಆರ್ ಆರ್ ಆರ್ ಜ.7ರಂದೇ ಬರುತ್ತಿದೆ. ಎಸ್ ಎಸ್ ರಾಜಮೌಳಿ ಅವರೇ ನನ್ನ ಬಳಿ ಹೇಳಿದ್ದಾರೆ. ಚಿತ್ರ ಮುಂದೂಡಿಕೆಯಾಗಿಲ್ಲ” ಎಂದು ತರಣ್ ಆದರ್ಶ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:2021ರ ಹಿನ್ನೋಟ: ದೇಶದ ಪ್ರಮುಖ ಘಟನಾವಳಿ-ಲಕ್ಷದ್ವೀಪ ವಿವಾದ, ರಾವತ್ ದುರಂತ, ಹಿಂಸಾಚಾರ
ಕೋವಿಡ್ ವೈರಸ್ ಸಾಂಕ್ರಾಮಿಕದಿಂದಾಗಿ ಚಿತ್ರದ ನಿರ್ಮಾಣ ಮತ್ತು ಬಿಡುಗಡೆ ಹಲವಾರು ಬಾರಿ ವಿಳಂಬವಾಗಿತ್ತು. ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಗ್ರ್ಯಾಂಡ್ ರಿಲೀಸ್‌ಗೆ ಮುಂಚಿತವಾಗಿ ಅನೇಕ ನಗರಗಳಲ್ಲಿ ಚಿತ್ರದ ಪ್ರಚಾರವನ್ನು ನಡೆಸುತ್ತಿದ್ದಾರೆ.
#Xclusiv… BREAKING NEWS… ‘RRR’ VERY MUCH ON 7 JAN 2022… SS RAJAMOULI OFFICIAL STATEMENT TO ME… No postponement. #SSRajamouli #JrNTR #RamCharan #RRR #RRRMovie #RRRPreReleaseEvent #RoarOfRRRInKerala pic.twitter.com/DmHdvp986U
— taran adarsh (@taran_adarsh) December 29, 2021
ಆಂಧ್ರ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ ಅವರನ್ನು ಆಧರಿಸಿದ ಕಾಲ್ಪನಿಕ ಕಥೆಯನ್ನು ಆರ್ ಆರ್ ಆರ್ ಮಾಡಲಾಗಿದೆ.
ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಜೊತೆಗೆ ಆರ್‌ಆರ್‌ಆರ್ ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ರೇ ಸ್ಟೀವನ್ಸನ್, ಒಲಿವಿಯಾ ಮೋರಿಸ್, ಅಲಿಸನ್ ಡೂಡಿ, ಸಮುದ್ರಕನಿ ಮತ್ತು ಶ್ರಿಯಾ ಸರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.