ಮುಸ್ಲಿಂ,ಕ್ರಿಶ್ಚಿಯನ್ನರಿಗಿರದ ಹಸ್ತಕ್ಷೇಪ ದೇವಾಲಯಗಳಿಗೇಕೆ: ಸಿ.ಟಿ.ರವಿ ಪ್ರಶ್ನೆ
Team Udayavani, Dec 30, 2021, 4:00 PM IST
ಚಿಕ್ಕಮಗಳೂರು : ಮುಸ್ಲಿಮರಿಗೆ ವಕ್ಫ್ ಬೋರ್ಡ್ ಇದೆ, ಕ್ರಿಶ್ಚಿಯನ್ನರಿಗೆ ಅವರ ಬೋರ್ಡ್ ಇದೆ, ಅಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ, ಹಿಂದೂಗಳ ದೇವಾಲಯಕ್ಕೆ ಏಕೆ ಸರ್ಕಾರದ ಹಸ್ತಕ್ಷೇಪ ಇರಬೇಕು ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಹಿಂದೂ ದೇವಾಲಯದ ಹಣವನ್ನ ಹಿಂದೂ ದೇವಾಲಯಕ್ಕೆ ಬಳಕೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು. ದೇವಾಲಯಗಳು ಪರಾವಲಂಬಿಯಾಗದೆ ನಡೆದುಕೊಂಡು ಹೋಗಬೇಕು. ಕೆಲವು ದೇವಸ್ಥಾನಗಳಿಗೆ ದೀಪ ಹಚ್ಚಲು ಕೊಡ ಸರಕಾರವನ್ನು ಕೇಳಬೇಕಾದಂತಹ ಪರಿಸ್ಥಿತಿ ಇದೆ ಎಂದರು.
ಯಾರೋ ಮೇಸೆಜ್ ಹಾಕಿದ್ದರು. ಕರೆಂಟ್ ಬಿಲ್‍ನಲ್ಲೂ ಮಸೀದಿ-ದೇವಸ್ಥಾನಕ್ಕೆ ಒಂದೊಂದು ರೇಟ್ ಎಂದು ಹೇಳಿದ್ದಾರೆ. ಸುಳ್ಳೋ-ಸತ್ಯವೋ ಎಂದು ಪರಿಶೀಲನೆ ಮಾಡಬೇಕು. ಸಚಿವ ಸುನಿಲ್ ಕುಮಾರ್ ಗೆ ಫೋನ್ ಮಾಡಿದೆ, ಅವರು ನಾಟ್ ರೀಚೆಬಲ್‍ನಲ್ಲಿ ಇದ್ದರು. ಪರ್ ಯೂನಿಟ್ ರೇಟ್ ಎಷ್ಟು ಬಳಸುತ್ತಾರೋ ಅಷ್ಟು, ಎಲ್ಲರಿಗೂ ಒಂದೇ ಇರಬೇಕು ಎಂದರು.
ದೇವಸ್ಥಾನಗಳು ಸಮಾಜದ ಸ್ವತ್ತು, ದೇಶಾದ್ಯಂತ ಸಮಾಜಕ್ಕೆ ವಾಪಸ್ ಕೊಡುವ ಕೆಲಸವಾಗಬೇಕು. ಭಕ್ತರು ದಾನ-ದತ್ತಿ ನೀಡಿದ್ದಾರೆ, ಭಾವನೆ ಬೆರೆಸಿ ಕಾಣಿಕೆ ಹಾಕಿದ್ದಾರೆ ಎಂದರು.
ಬ್ರಿಟಿಷರು ಹಿಂದೂ ದೇವಾಲಯದ ಆದಾಯಕ್ಕೆ ಕೈಹಾಕಿದಾಗ ಸರ್ಕಾರದ ಕಪಿಮುಷ್ಠಿಗೆ ಬಂತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.