ರಾಗಿ ಹುಲ್ಲಿನ ಹೊರೆ ಕಟ್ಟುವ ಯಂತ್ರಕ್ಕೆ ಹೆಚ್ಚಿದ ಬೇಡಿಕೆ
Team Udayavani, Dec 30, 2021, 4:34 PM IST
ಕುದೂರು: ದಿನೇ-ದಿನೇ ಕೂಲಿ ಕಾರ್ಮಿಕರ ಕೊರತೆ ಹಾಗೂ ಹೆಚ್ಚಿನ ಕೂಲಿ ದರದಿಂದ ಹೈರಾಣಾ ಗಿರುವ ರೈತರು ಯಂತ್ರಗಳಿಗೆ ಮೊರೆ ಹೋಗುತ್ತಿ ದ್ದಾರೆ. ತಾಲೂಕಿನಲ್ಲಿ ರಾಗಿ ಹುಲ್ಲು ಗಳಿಗೆ ಪಿಂಡಿ ಕಟ್ಟುವ ಯಂತ್ರ ಸಹಕಾರಿಯಾಗಿದ್ದು ಈ ಯಂತ್ರ ಕ್ಕಾಗಿ ರೈತರಿಂದ ಬೇಡಿಕೆ ಹೆಚ್ಚಿದೆ.
ರೈತರಿಗೆ ವರದಾನ: ರಾಗಿ ಕೂಯ್ಲು ನಂತರ ಹೊಲದಲ್ಲಿ ಬಿದ್ದಿರುವ ಹುಲ್ಲನ್ನು ಕ್ಷಣ ಮಾತ್ರದಲ್ಲಿ 25 ಕೆ.ಜಿ ತೂಕದಷ್ಟು ರಾಗಿ ಹುಲ್ಲಿನ ಪಿಂಡಿ(ಹೊರೆ)ಗಳನು ಕಟ್ಟುತ್ತದೆ. ಒಂದು ಎಕ್ಕರೆಗೆ ಸುಮಾರು 50 ರಿಂದ 60 ಪಿಂಡಿ ಕಟ್ಟುತ್ತದೆ. ಒಬ್ಬರೇ ಅರಾಮಾಗಿ ಪಿಂಡಿಯನ್ನು ಎತ್ತಿಡಬಹುದು. ಇಬ್ಬರು ರೈತರು ಇದ್ದರೆ ಸಾಕು ಈ ಹುಲ್ಲಿನ ಪಿಂಡಿಯನ್ನು ಟ್ಯಾಕ್ಟರ್‌ಗೆ ಸಲಿಸಾಗಿ
ಎತ್ತಿಡಬಹುದು. ಹಾಗೂ ಅನ್‌ಲೊಡ್ ಮಾಡಿ ಬಣವೇ ಹಾಕಬಹುದು.
ಖರ್ಚು ಹೆಚ್ಚಿಲ್ಲ: ಕೂಲಿಕಾರರಿಂದ ರಾಗಿ ಹುಲ್ಲಿನ ಬಣವೆ ಕಟ್ಟಲು ಸಾಕಷ್ಟು ಖರ್ಚು ಬರುತ್ತದೆ. ಯಂತ್ರದ ಮೂಲಕ ಬಣವೆ ಹಾಕಿದರೆ ಹಣ ಮತ್ತು ಸಮಯ ಎರಡು ಉಳಿಯುತ್ತದೆ. ಹಾಗಾಗಿ ಈ ಯಂತ್ರಕ್ಕೆ ಬೇಡಿಕೆ ಹೆಚ್ಚಿದೆ.
ಶೇಖರಣೆಗೆ ಅನುಕೂಲ: ಹಸುಗಳ ಮೇವಿಗೆ ರಾಗಿ ಹುಲ್ಲು ಅತಿ ಅವಶ್ಯಕ. ಹಾಗಾಗಿ ನಮಗೆ ನಷ್ಟ ವಾದರೂ ರಾಗಿ ಬೆಳೆಯುತ್ತೇವೆ. ಯಂತ್ರ ಗಳ ಮೂಲಕ ಪಿಂಡಿ ಕಟ್ಟಿಸಿದರೆ ನಮಗೆ
ಶೇಖರಿಡಿಸಲು ತುಂಬಾ ಅನುಕೂಲ ಆಗುತ್ತದೆ ಎಂದು ರೈತ ಮಂಜುನಾಥ್ ತಿಳಿಸಿದರು.
ಯಂತ್ರಕ್ಕೆ ಹೆಚ್ಚಿದ ಬೇಡಿಕೆ: ಮೊಡ ಕವಿದ ವಾತಾ ವರಣ ಇದ್ದು ಹೊಲದಲ್ಲಿ ಒಣಗಿ ಬಿದ್ದಿರುವ ಹುಲ್ಲು ನೆನೆಯುತ್ತದೆ ಎಂಬ ಭಯದಿಂದ ರೈತರು ಒಂದು ಪಿಂಡಿಗೆ 40 ರೂ. ನೀಡುತ್ತಿದ್ದಾರೆ. ಬೇಕಾದರೆ ಇನ್ನೂ 5 ರೂ.ಜಾಸ್ತಿ ಕೊಡುತ್ತೇನೆ, ಮೊದಲು ತಮ್ಮ ಹೊಲಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ. ಸಮೀ ಪದ ರಾಜಣ್ಣ ಎಂಬುವವರು ಸಹ ಯಂತ್ರ ಖರೀ ದಿಸಿ ಅಲ್ಲಿನ ರೈತರಿಗೆ ಹುಲ್ಲು ಕಟ್ಟಲು ಬಾಡಿಗೆ ರೂಪದಲ್ಲಿ ಕೊಡುತ್ತಿದ್ದಾರೆ.
ಕೃಷಿ ಇಲಾಖೆಯಿಂದ ಹುಲ್ಲು ಕಟ್ಟುವ ಯಂತ್ರ ಖರೀದಿಸುವ ರೈತರಿಗೆ ಸಬ್ಸಿಡಿ ಇದೆ. ಈ ಯಂತ್ರದ ಬೆಲೆ 3.70 ಲಕ್ಷ ರೂ. ಗಳಿದ್ದು ಸರ್ಕಾರದಿಂದ 1 ಲಕ್ಷ ರೂ.ಸಬ್ಸಿಡಿ ದೊರೆಯಲಿದೆ. ರೈತರು 2.70 ಲಕ್ಷ ರೂ.ಗೆ ಯಂತ್ರ ಖರೀದಿಸಹುದು,
– ಎನ್.ನರಸಿಂಹಯ್ಯ, ಕೃಷಿ ಅಧಿಕಾರಿ ಮಾಗಡಿ
ನಮ್ಮ ಹೊಲದಲ್ಲಿ ಭತ್ತದ ಹುಲ್ಲು ಪಿಂಡಿ ಕಟ್ಟಲು ಯಂತ್ರ ಬಳಸಿದ್ದೇನೆ . ಯಂತ್ರ ಬಳಕೆಯಿಂದ ಕೂಲಿಗೆ ಕೊಡುವ ಹಣ ಉಳಿತಾಯವಾಗುತ್ತದೆ. ಹುಲ್ಲು ಕೂಡ ವೆಸ್ಟ್ ಹಾಗುವುದಿಲ್ಲ,
– ಗಂಗರಾಜು, ರೈತ
ಯಂತ್ರದಿಂದ ಮಾಡಿದ ಪಿಂಡಿಗಳಲ್ಲಿ ಮೂರು ವರ್ಷಗಳವರಗೂ ಮೇವು ಸುರಕ್ಷಿತವಾಗಿರುತ್ತದೆ. ಆದರೆ ಯಂತ್ರ ಗಳ ಬಳಕೆಯಿಂದ ಭೂಮಿಯಲ್ಲಿನ ಸೂಕ್ಷ್ಮ ಜೀವಿಗಳು ನಾಶವಾಗುತ್ತದೆ.
– ಡಾ.ದೇವಾನಂದ, ಕೃಷಿ ತಾಂತ್ರಕ ವಿಭಾಗದ ತಜ್ಞರು.
– ಕೆ.ಎಸ್.ಮಂಜುನಾಥ್, ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.