ಗೋಶಾಲೆಯ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನೆ : ಸಚಿವ ಪ್ರಭು ಚವ್ಹಾಣ್
Team Udayavani, Dec 30, 2021, 8:49 PM IST
ಗುಜರಾತ್ : ಜಾಮನಗರದಲ್ಲಿರುವ ಸಿದ್ದಾರ್ಥ ವ್ಯಾಸ ಅವರ ಮ್ಯಾಕ್ಸಿಮ್ ಎನ್ವಿರಾನ್ಮೇಂಟಲ್ ಸಲ್ಯೂಷನ್ ಬಯೋ ಗ್ಯಾಸ ಘಟಕಕ್ಕೆ ಇಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಚರ್ಚೆ ನಡೆಸಿದರು. ಗುಜರಾತ ನಗರದ ತ್ಯಾಜ್ಯವನ್ನು ಹಾಗೂ ಸಿದ್ದಾರ್ಥ ಗೋಶಾಲೆಯಲ್ಲಿನ ತ್ಯಾಜ್ಯವನ್ನು ಬಳಸಿಕೊಂಡು ಗ್ಯಾಸ್ ಉತ್ಪಾದಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ನಗರದ ತ್ಯಾಜ ಬಳಕೆ ಮಾಡಿಕೊಂಡು ಗ್ಯಾಸ್ ಉತ್ಪತ್ತಿ ಮಾಡುತ್ತಿರುವುದರಿಂದ ನಗರದಲ್ಲಿ ಕಸದ ವಿಲೇವಾರಿ ಸರಿಯಾಗಿ ಆಗುತ್ತಿರುವುದು ಗಮನಾರ್ಹ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಇಲ್ಲಿ ಉತ್ಪತ್ತಿಯಾಗುತ್ತಿರುವ ಗ್ಯಾಸ್ ಗುಜರಾತ್ ಗ್ರೀಡ್ ಗೆ ಸಹ ನೀಡುತ್ತಿರುವುದು ವಿಷೇಶ. ಜಾಮನಗರವನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಸಿದ್ದಾರ್ಥ ವ್ಯಾಸ ಅವರ ಸಂಸ್ಥೆ ಬಹುದೊಡ್ಡ ಪಾತ್ರವಹಿಸಿದೆ ಅಲ್ಲದೆ ಕಸದ ವಿಲೇವಾರಿ ಸಹ ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕಸದಿಂದ ರಸದ ಪರಿಕಲ್ಪನೆ ಅತ್ಯಂತ ಅಚ್ಚುಕಟ್ಟಾಗಿ ಇಲ್ಲಿ ಅನುಷ್ಟಾನವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ನಮ್ಮಲ್ಲಿಯೂ ಈ ತರಹದ ಪ್ರಯತ್ನಗಳು ಆದಲ್ಲಿ ರಾಜ್ಯವನ್ನು ಮತ್ತಷ್ಟು ಸ್ವಚ್ಛವನ್ನಾಗಿಸಬಹುದು ಅಲ್ಲದೇ ತ್ಯಾಜ್ಯದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಆನಂದ ಬಾಬಾ ಗೋಶಾಲೆ, ರಾಜಕೋಟ್ ನಲ್ಲಿರುವ ಶ್ರೀಜಿ ಗೊಶಾಲೆಗೆ ಸಹ ಸಚಿವರು ಭೇಟಿ ನೀಡಿ ಗೋಶಾಲೆಯ ನಿರ್ವಹಣೆ ಕುರಿತು ಆಡಳಿತ ಮಂಡಳಿಯ ಸದಸ್ಯರ ಜೊತೆ ಚರ್ಚೆ ನಡೆಸಿದರು. ಗೋಶಾಲೆಗಳಲ್ಲಿ ಗೋಆಧಾರಿತ ಕೃಷಿ ಮತ್ತು ಗೋಉತ್ಪನ್ನಗಳ ಉತ್ಪಾದನೆ ಗುಜರಾತ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಸಂತಸ ತಂದಿದೆ. ನಮ್ಮ ರಾಜ್ಯದಲ್ಲಿ ಸಹ ಎಲ್ಲ ಗೋಶಾಲೆಗಳು ಆತ್ಮ ನಿರ್ಭರವಾಗಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಅನುಸರಿಸಲು ಉತ್ತೇಜನ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಗುಜರಾತ, ಉತ್ತರಪ್ರದೇಶ, ಮಹಾರಾಷ್ಟ್ರಾದಲ್ಲಿ ಗೋಶಾಲೆಗಳು ಬಯೋಗ್ಯಾಸ ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದು ನನ್ನ ಗಮನ ಸೆಳೆದಿದೆ ಎಂದು ಸಚಿವರು ತಿಳಿಸಿದ್ದಾರೆ. ಇದೇ ಮಾದರಿಗಳನ್ನು ರಾಜ್ಯದ ಖಾಸಗಿ ಮತ್ತು ಸರ್ಕಾರಿ ಗೋಶಾಲೆಗಳಲ್ಲಿ ಅಳವಡಿಸಿಕೊಳ್ಳಬಹುದಾದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜಕೋಟ್ ನಲ್ಲಿರುವ ಕರುಣಾ ಫೌಂಡೇಶನ್ ನಿರ್ವಹಿಸುತ್ತಿರುವ ಪಶುಪಾಲನಾ ಸಹಾಯವಾಣಿ ಹಾಗೂ ಅಂಬುಲೆನ್ಸ್ ವೀಕ್ಷಣೆ ಮಾಡಲಾಯಿತು. ನಗರ ಪ್ರದೇಶದಲ್ಲಿ ತೊಂದರೆಗೀಡಾದ ಜಾನುವಾರಗಳನ್ನು ತೆಗೆದುಕೊಂಡು ಬರಲು ಲಿಫ್ಟಿಂಗ್ ಮಷೀನ್ ಸೇರಿದಂತೆ ಜಾನುವಾರಗಳ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲ ಪರಿಕರಗಳನ್ನು ಅಂಬುಲೆನ್ಸ್ ನಲ್ಲಿ ಒದಗಿಸಲಾಗಿದೆ ಕರ್ನಾಟಕದಲ್ಲಿ ಅನುಷ್ಟಾನಗೊಂಡಿರುವ ಪಶು ಸಂಜೀವಿನಿ ಮಾದರಿಯಲ್ಲಿಯೇ ಇದು ಕಾರ್ಯನಿರ್ವಹಿಸುತ್ತಿದೆ.
ಯಾವುದೇ ಜಾನುವಾರುಗಳು ಕಾಲು ಕಳೆದುಕೊಂಡು ನರಳುತ್ತಿದ್ದಾರೆ ಕರುಣಾ ಫೌಂಡೇಶನ್ ಮೂಲಕ ಅವುಗಳಿಗೆ ಕೃತಕವಾಗಿ ಕಾಲು ಅಳವಡಿಸಿ ಜಾನುವಾರುಗಳ ಮೂಕ ರೋದನೆಗೆ ಧ್ವನಿಯಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.