ಗ್ರಾಹಕರ ಆಯೋಗಗಳ ವ್ಯಾಜ್ಯ ಮೊತ್ತದ ಮಿತಿ ಬದಲಿಸಿದ ಕೇಂದ್ರ
Team Udayavani, Dec 31, 2021, 6:42 AM IST
ಹೊಸದಿಲ್ಲಿ: ದೇಶದಲ್ಲಿ ಗ್ರಾಹಕರ ಆಯೋಗಗಳಲ್ಲಿರುವ ಕೇಸ್ಗಳ ಸಂಖ್ಯೆ ಕಡಿಮೆಗೊಳಿಸಲು ಮತ್ತು ಕ್ಷಿಪ್ರವಾಗಿ ಪ್ರಕರಣಗಳ ವಿಲೇವಾರಿಯಾಗಲು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಿ ಕೇಂದ್ರ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ಇದರಿಂದಾಗಿ ಜಿಲ್ಲಾ ಮಟ್ಟದಲ್ಲಿರುವ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ 50 ಲಕ್ಷ ರೂ. ವರೆಗಿನ ಸೇವೆ ಮತ್ತು ವಸ್ತುಗಳ ಖರೀದಿಯಲ್ಲಿ ಉಂಟಾಗಿರುವ ನ್ಯೂನ ತೆಗಳನ್ನು ಪರಿಶೀಲಿಸಿ, ತೀರ್ಮಾನ ಪ್ರಕಟಿಸಬಹುದು. ಸದ್ಯ ಇರುವ ನಿಯಮಗಳ ಅನ್ವಯ 1 ಕೋಟಿ ರೂ. ವರೆಗಿನ ದೂರು ಗಳನ್ನು ವಿಲೇವಾರಿ ಮಾಡಬಹುದು. ರಾಜ್ಯ ಮಟ್ಟದಲ್ಲಿನ ಗ್ರಾಹಕರ ಆಯೋಗ 50 ಲಕ್ಷ ರೂ.ಗಳಿಂದ 2 ಕೋಟಿ ರೂ. ವರೆಗಿನ ಮೌಲ್ಯದ ಸೇವೆಗಳಿಗೆ ಸಂಬಂಧಿಸಿದ ವ್ಯಾಜ್ಯಕ್ಕೆ ತೀರ್ಮಾನ ಪ್ರಕಟಿಸಬಹುದು.
ಇದುವರೆಗಿನ ನಿಯಮ ಪ್ರಕಾರ 1 ಕೋಟಿ ರೂ.ಗಳಿಂದ 10 ಕೋಟಿ ರೂ. ವರೆಗಿನ ಮೌಲ್ಯದ ಕೇಸ್ಗಳಿಗೆ ತೀರ್ಮಾನ ಪ್ರಕಟಿಸುತ್ತಿದ್ದವು. ಇನ್ನು ಹೊಸದಿಲ್ಲಿಯಲ್ಲಿ ರುವ ರಾಷ್ಟ್ರ ಮಟ್ಟದ ಗ್ರಾಹಕರ ಆಯೋಗ 2 ಕೋಟಿ ರೂ. ಮೌಲ್ಯಕ್ಕಿಂತ ಹೆಚ್ಚಿನ ವಸ್ತುಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಿಶೀಲಿಸಿ ತೀರ್ಮಾನ ನೀಡಲಿದೆ. 2019ರಲ್ಲಿ ಜಾರಿಗೊಳಿಸಲಾಗಿದ್ದ ಗ್ರಾಹಕರ ಹಿತಾಸಕ್ತಿ ಕಾಯ್ದೆಯ ಅನ್ವಯ ಈ ನಿಯಮಗಳನ್ನು ಪರಿಷ್ಕರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.