ಅಬ್ಬಬ್ಬಾ ಏನ್ ರುಚಿ ಅಂತಿರಾ “ಮಸಾಲ ಪಡ್ಡು”
ಈ ಖಾದ್ಯವು ಆರೋಗ್ಯಕರವಾಗಿದ್ದು ,ಮಕ್ಕಳಿಗಂತೂ ತುಂಬಾನೇ ಇಷ್ಟ ಪಡುವ ರೆಸಿಪಿಯಾಗಿದೆ.
ಶ್ರೀರಾಮ್ ನಾಯಕ್, Dec 31, 2021, 2:15 PM IST
ಈ ಖಾದ್ಯವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ.ಇದು ಬುಲೆಟ್ ಇಡ್ಲಿ (ಸಣ್ಣ ಗಾತ್ರದ ಇಡ್ಲಿ) ಎಂದು ನೀವು ಬಾವಿಸಬಹುದು ಆದರೆ ಇದು ವಿಭಿನ್ನ ಖಾದ್ಯ. ಪಡ್ಡುವನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ತಯಾರಿಸಲಾಗುತ್ತದೆ. ಹೆಚ್ಚಿನ ಹೋಟೆಲ್ ಗಳು ಈ ಸುಂದರವಾದ ಖಾದ್ಯವನ್ನು ತಯಾರಿಸುವುದು ಬಹಳ ವಿರಳ. ಈ ಖಾದ್ಯವನ್ನು ಕೆಲವು ಕಡೆ ನಾನಾ ರೀತಿಯಲ್ಲಿ ಕರೆಯುತ್ತಾರೆ ಉದಾಹರಣೆಗೆ ಗುಳಿಯಪ್ಪ, ಪಡ್ಡು,ಅಪ್ಪ ,ಎರಿಯಪ್ಪ ಹಾಗೂ ತುಳುವಿನಲ್ಲಿ ಅಪ್ಪ ದಡ್ಡೆ ಎಂತಲೂ ಕರೆಯುತ್ತಾರೆ. ಇದನ್ನು ಶೇಂಗಾ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿ.
ಈ ಖಾದ್ಯವು ಆರೋಗ್ಯಕರವಾಗಿದ್ದು ,ಮಕ್ಕಳಿಗಂತೂ ತುಂಬಾನೇ ಇಷ್ಟ ಪಡುವ ರೆಸಿಪಿಯಾಗಿದೆ. ಹಾಗಿದ್ದರೆ ಇನ್ನೇಕೆ ತಡ ಮನೆಯಲ್ಲಿ ರುಚಿಕರವಾದ “”ಮಸಾಲ ಪಡ್ಡು ” ಹಾಗೂ “ಶೇಂಗಾ ಚಟ್ನಿ ” ಯನ್ನು ಮಾಡಿ ಸವಿಯಿರಿ.
ಮಸಾಲ ಪಡ್ಡು
ಬೇಕಾಗುವ ಸಾಮಗ್ರಿಗಳು
ಬೆಳ್ತಿ ಗೆ ಅಕ್ಕಿ 2 ಕಪ್, ಉದ್ದಿನ ಬೇಳೆ 3/4 ಕಪ್ ಕಡ್ಲೆ ಬೇಳೆ 2 ಚಮಚ, ಮೆಂತೆ 1 ಚಮಚ, ಅವಲಕ್ಕಿ 1/4 ಕಪ್,ತೆಂಗಿನೆಣ್ಣೆ 2 ಚಮಚ, ಹಸಿಮೆಣಸಿನ ಕಾಯಿ 2, ಕರಿಬೇವು 1 ಗರಿ, ಈರುಳ್ಳಿ 3, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ, ಉದ್ದಿನ ಬೇಳೆ, ಕಡ್ಲೆ ಬೇಳೆ ಹಾಗೂ ಮೆಂತೆಯನ್ನು ಹಾಕಿ ಸುಮಾರು 6 ರಿಂದ 7 ಗಂಟೆಗಳ ವರೆಗೆ ನೆನೆಸಿಟ್ಟುಕೊಳ್ಳಿ. ಅವಲಕ್ಕಿ ಯನ್ನು ಬೇರೆ ಪಾತ್ರೆಯಲ್ಲಿ 10 ನಿಮಿಷಗಳ ಕಾಲ ನೆನೆಸಿರಿ, ತದನಂತರ ಮಿಕ್ಸಿ ಜಾರಿಗೆ ನೆನೆಸಿಟ್ಟ ಅಕ್ಕಿ -ಬೇಳೆ ಹಾಗೂ ಅವಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿರಿ. ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು.ರುಬ್ಬಿಟ್ಟ ಹಿಟ್ಟಿಗೆ ಉಪ್ಪನ್ನು ಹಾಕಿ ಸುಮಾರು 8 ರಿಂದ 10 ಗಂಟೆಗಳ ಕಾಲದವರೆಗೆ ಬಿಟ್ಟುಬಿಡಿ.
ಒಂದು ಬಾಣಲೆಗೆ ಎಣ್ಣೆ, ಸಣ್ಣಗೆ ಹಚ್ಚಿದ ಹಸಿಮೆಣಸು, ಕರಿಬೇವು ಹಾಗೂ ಈರುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಹರಿಯಿರಿ. ತಣ್ಣಗೆ ಆದ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಟ್ಟ ಹಿಟ್ಟಿಗೆ ಹಾಕಿ ಕಲಸಿರಿ.
ಓಲೆಯ ಮೇಲೆ ಪಡ್ಡು ಹಂಚನ್ನು ಇಟ್ಟುಕೊಳ್ಳಿ. ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ ಮಾಡಿಟ್ಟ ಹಿಟ್ಟನ್ನು ಎಲ್ಲಾ ರಂಧ್ರದೊಳಗೆ ಮೂಕ್ಕಾಲು ಭಾಗದಷ್ಟು ಹಾಕಿರಿ (ಯಾಕೆಂದರೆ ಅದು ಬೆಂದ ನಂತರ ಅವು ಅರಳುತ್ತದೆ) ಒಂದು ಬದಿ ಬೆಂದ ನಂತರ ಮತ್ತೂಂದು ಬದಿ ಮುಗುಚಿ ಬೇಯಿಸಿರಿ. ಬಿಸಿ-ಬಿಸಿಯಾದ ಮಸಾಲ ಪಡ್ಡು ರೆಡಿಯಾಗಿದೆ.
ಶೇಂಗಾ ಚಟ್ನಿ
ಬೇಕಾಗುವ ಸಾಮಗ್ರಿಗಳು
ಶೇಂಗಾ 1 ಕಪ್,ತೆಂಗಿನೆಣ್ಣೆ 1 ಚಮಚ, ಹಸಿಮೆಣಸು 5 ಬೆಳ್ಳುಳ್ಳಿ 4 ಎಸಳು, ಕರಿಬೇವು 1 ಗರಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಹುಣಸೇ ಹಣ್ಣು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ:
ತೆಂಗಿನೆಣ್ಣೆ 1 ಚಮಚ, ಸಾಸಿವೆ 1 ಚಮಚ ,ಉದ್ದಿನ ಬೇಳೆ 1 ಚಮಚ, ಕರಿಬೇವು 1 ಗರಿ ಒಣಮೆಣಸು 2
ತಯಾರಿಸುವ ವಿಧಾನ
ಒಂದು ಬಾಣಲೆಗೆ ಹಸಿ ಶೇಂಗಾವನ್ನು ಹಾಕಿ ಕೆಂಪಾಗುವ ತನಕ ಹುರಿದು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ (ತಣ್ಣಗಾದಬಳಿಕ ಬೀಜದ ಸಿಪ್ಪೆಯನ್ನು ತೆಗೆದಿಡಿ). ಆ ಮೇಲೆ ಬಾಣಲೆಗೆ ಎಣ್ಣೆ ,ಹಸಿಮೆಣಸು, ಬೆಳ್ಳುಳ್ಳಿ , ಕರಿಬೇವು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ನಂತರ ಇದನ್ನು ಹುರಿದಿಟ್ಟ ಶೇಂಗಾ ಬೀಜ ಜೊತೆಗೆ ಮಿಕ್ಸಿ ಜಾರಿಗೆ ಹಾಕಿ ಉಪ್ಪುನ್ನು ಸೇರಿಸಿ ರುಬ್ಬಿರಿ. ನಂತರ ಮೇಲಿರುವ ಒಗ್ಗರಣೆ ಸಾಮಗ್ರಿಯನ್ನು ಹಾಕಿ ಒಗ್ಗರಣೆ ಹಾಕಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.