2021 : ಕೋಟೆನಾಡಿಗೆ ಬೇವು-ಬೆಲ್ಲದ ಸಮಭಾವ
Team Udayavani, Dec 31, 2021, 4:20 PM IST
ಚಿತ್ರದುರ್ಗ: 2021ನೇ ವರ್ಷ ಜಿಲ್ಲೆಯ ಪಾಲಿಗೆ ಸಿಹಿ ಹಾಗೂ ಕಹಿಯ ಸಮಭಾವ ಕೊಟ್ಟಿದೆ. ರಾಜಕೀಯ, ಧಾರ್ಮಿಕ, ಕ್ರೀಡೆ, ಆರೋಗ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಹಲವು ಮಹತ್ವದ ಘಟನೆಗಳು ಈ ವರ್ಷ ಜರುಗಿವೆ. ಈ ವರ್ಷದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದುಹೊಸ ಸಾರಥಿಗಳು ಆಯ್ಕೆಯಾಗಿದ್ದಾರೆ. ಆದರೆ,ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗೆ ನಡೆಯಬೇಕಿದ್ದ ಚುನಾವಣೆಗಳಿಗೆ ಗ್ರಹಣ ಹಿಡಿಯಿತು. ಇನ್ನೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಿನ ಕಹಿ ನೀಡಿದ ಬಿಜೆಪಿ ಗೆದ್ದು ಬೀಗಿದೆ. ಎರಡು ಚುನಾವಣೆಗಳಲ್ಲಿ ಸೋತಿದ್ದ ಕೆ.ಎಸ್. ನವೀನ್ ಪರಿಷತ್‌ಗೆ ಆಯ್ಕೆಯಾಗುವಲ್ಲಿ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾದರು.
ಇನ್ನೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲಿನ ರುಚಿ ತೋರಿಸಿದ ಕಾಂಗ್ರೆಸ್ ಪಟ್ಟಣ ಪಂಚಾಯಿತಿಯನ್ನು ಕೈ ವಶ ಮಾಡಿಕೊಳ್ಳುವಲ್ಲಿ ಚತುರತೆ ತೋರಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲೂ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ದಕ್ಕದನಿರಾಸೆ ಒಂದೆಡೆಯಾದರೆ,ಜಿಲ್ಲೆಯಿಂದಆಯ್ಕೆಯಾಗಿದ್ದ ಸಂಸದ ಎ.ನಾರಾಯಣಸ್ವಾಮಿ ಕೇಂದ್ರ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿ ಆಯ್ಕೆಯಾಗಿರುವುದು ಜಿಲ್ಲೆಗೆ ಸಿಕ್ಕಿರುವ ಮಾನ್ಯತೆಯಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳು ಗ್ರಾಮ ಪಂಚಾಯಿತಿ, ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಹಲವು ಸಮಾವೇಶ ನಡೆಸಿವೆ. ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಚಿತ್ರದುರ್ಗದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಬೆಂಗಳೂರಿಗೆ ತೆರಳಿ ಗುಣಮುಖರಾಗಿದ್ದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಸಚಿವರಾದ ಈಶ್ವರಪ್ಪ, ಸೋಮಣ್ಣ, ಸುನೀಲ್ ಕುಮಾರ್, ಮಾಧುಸ್ವಾಮಿ ಸೇರಿದಂತೆ ಹಲವು ಮುಖಂಡರು ಜಿಲ್ಲೆಗೆ ಭೇಟಿ ನೀಡಿ ತೆರಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕ ಜಿ.ಎಚ್ .ತಿಪ್ಪಾರೆಡ್ಡಿ ನಿವಾಸದಲ್ಲಿ ಶಾಸಕರ ಸಭೆ ನಡೆಸಿದ್ದರು. ಸಿಎಂ ಸ್ಥಾನದಿಂದ ಬಿ.ಎಸ್ .ಯಡಿಯೂರಪ್ಪ ಕೆಳಗಿಳಿಯುವ ಕೆಲ ದಿನಗಳ ಮೊದಲು ಅವರ ಪುತ್ರ ಬಿ.ವೈ. ವಿಜಯೇಂದ್ರ ಜಿಲ್ಲೆಯ ಎಲ್ಲ ಮಠಾಧೀಶರನ್ನು ಭೇಟಿ ಮಾಡಿ ತೆರಳಿದ್ದರು. ಬಿಎಸ್‌ವೈ ಪದತ್ಯಾಗದ ವೇಳೆ ವಿವಿಧ ಮಠಾಧೀಶರು ಅವರ ಬೆಂಬಲಕ್ಕೆ ನಿಂತಿದ್ದರು.
ಸಾಗಿದ ಪಾದಯಾತ್ರೆಗಳು
ಮೀಸಲಾತಿಗಾಗಿ ಜಿಲ್ಲೆಯಲ್ಲಿ ಈ ವರ್ಷ ಎರಡು ಪಾದಯಾತ್ರೆಗಳು ಸಾಗಿದವು. ವರ್ಷಾರಂಭದಲ್ಲಿ ಕನಕ ಗುರುಪೀಠದ ಶ್ರೀಗಳು ಪಾದಯಾತ್ರೆ ನಡೆಸಿದರೆ, ನಂತರದ ತಿಂಗಳಲ್ಲಿ ಪಂಚಮಸಾಲಿ ಪೀಠದ ಶ್ರೀಗಳು ಪಾದಯಾತ್ರೆ ನಡೆಸಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಡೆದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮುರುಘಾ ಮಠದಿಂದ ನಡೆಯುವ ಶರಣ ಸಂಸ್ಕೃತಿ ಉತ್ಸವ ಹಾಗೂ ಶ್ರೀ ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ 3ನೇ ದಶಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದವು. ಮಠದ ಭಕ್ತರು ಮುರುಘಾ ಶ್ರೀಗಳ ಬೆಳ್ಳಿಯ ಪುತ್ಥಳಿ ನಿರ್ಮಿಸಿ ಸಮರ್ಪಣೆ ಮಾಡಿದ್ದರು. ಮಾದಾರ ಚನ್ನಯ್ಯ ಸ್ವಾಮೀಜಿ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನವೆಂಬರ್‌ನಲ್ಲಿ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ ನಡೆಯಿತು. ಆನ್‌ಲೈನ್ ಮೂಲಕ ಮತ್ತೆ ಕಲ್ಯಾಣ ಕಾರ್ಯಕ್ರಮ ಹೆಚ್ಚು ಜನರನ್ನು ತಲುಪಿತ್ತು.
ಹಾಲಿ-ಮಾಜಿ ಸಿಎಂಗಳಿಗೆ ಪುರಸ್ಕಾರ
ಮುರುಘಾಮಠದಿಂದಇದೇ ಮೊದಲ ಬಾರಿಗೆ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ ಶರಣಶ್ರೀ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಸವ ಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಶರಣ ಸಂಸ್ಕೃತಿ ಉತ್ಸವದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ| ಕೆ.ಕಸ್ತೂರಿ ರಂಗನ್ ಹಾಗೂ ಸರೋದ್ ವಾದಕ ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತರಳಬಾಳು ಶ್ರೀಗಳಿಗೆ ಆದಿಕವಿ ಪುರಸ್ಕಾರ
ನೀಲಕಂಠ ಸ್ವಾಮಿದೇಗುಲಕ್ಕೆಬೆಳ್ಳಿಕವಚ ಹಿಂದೂಗಣಪತಿ ಸ್ಥಳಬದಲಾವಣೆ ಅಖೀಲ ಭಾರತೀಯ ಸಾಹಿತ್ಯ ಪರಿಷತ್ ಸಿರಿಗೆರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತರಳಬಾಳು ಬೃಹನ್ಮಠದ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ ಆದಿಕವಿ ಪ್ರಶಸ್ತಿ ನೀಡಿ ಗೌರವಿಸಿದರು. ಸಂಸ್ಕೃತ ವಿದ್ವಾಂಸ ಡಾ| ಶಂಕರ್ ರಾಜಾರಾಮನ್ ಅವರಿಗೆ ವಾಗೆªàವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನೀಲಕಂಠೇಶ್ವರ ದೇವಾಲಯ ಬೆಳ್ಳಿ ಕವಚ
ನಗರದ ಶ್ರೀ ನೀಲಕಂಠೇಶ್ವರ ದೇವಾಲಯ ಗರ್ಭಗುಡಿಗೆ ಬೆಳ್ಳಿ ಕವಚ ಅರ್ಪಿಸಲಾಯಿತು. ಮೇಲುದುರ್ಗದ ಶ್ರೀ ಏಕನಾಥೇಶ್ವರಿ ದೇವಿಗೆ ಸಿದ್ಧಪಡಿಸಿದ್ದ ಬಂಗಾರದ ಆಭರಣಗಳನ್ನು ಖಜಾನೆಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಕೋವಿಡ್ ಕಾರಣಕ್ಕೆ ಪ್ರಸಿದ್ಧ ನಾಯಕಹಟ್ಟಿತಿಪ್ಪೇರುದ್ರ ಸ್ವಾಮಿಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು.ನಗರದ ಭೋವಿಗುರು ಪೀಠದಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇÍರ Ì ಸ್ವಾಮೀಜಿ ಅವರ 36ನೇ ವಸಂತೋತ್ಸವ, 22ನೇ ಸಮಾಜ ಸೇವಾದೀಕ್ಷೆ ಹಾಗೂ 11ನೇ ಪಟ್ಟಾಧಿಕಾರ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ
ರಾಷ್ಟ್ರಮಟ್ಟದಲ್ಲಿ ಖ್ಯಾತಿಯಾಗಿರುವ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಸ್ಟೇಡಿಯಂ ರಸ್ತೆ ಬದಲು ಬಿ.ಡಿ. ರಸ್ತೆಯ ಜೈನ ಧಾಮದಲ್ಲಿ ನಡೆಯಿತು. ಕೋವಿಡ್ ಕರಿಛಾಯೆಯ ನಡುವೆಯೂಶೋಭಾಯಾತ್ರೆ ಇಲ್ಲ ಎನ್ನುವ ಪ್ರಕಟಣೆ ಹೊರಡಿಸಿದ್ದರೂ ನಿರೀಕ್ಷೆ ಮೀರಿದ ಅದ್ಧೂರಿ ಶೋಭಾಯಾತ್ರೆ ಜರುಗಿತು. ಜೋಗಿಮಟ್ಟಿ ರಸ್ತೆಯಲ್ಲಿ ಏಕತಾ ಹಿಂದು ಮಹಾಗಣಪತಿ ಪ್ರತಿಷ್ಠಾಪನೆಯಾಯಿತು.
ಬುದ್ಧ ಧಮ್ಮದೀಕ್ಷಾ ಸಮಾರಂಭ
ಬೆಂಗಳೂರು ಮಹಾ ಬೋ ಸಂಸ್ಥೆ ಕಾರ್ಯದರ್ಶಿ ಪೂಜ್ಯ ಆನಂದ ಭಂತೇಜಿ ನೇತೃತ್ವದಲ್ಲಿ 103 ಜನರಿಗೆ ಬುದ್ಧ ಧಮ್ಮ ದೀಕ್ಷೆ ಸಮಾರಂಭ ಜರುಗಿತು.ಸಂಸ್ಥೆ ಜ್ಞಾನರಕ್ಕಿತ್ ಭಂತೇಜಿ ಹಾಗೂ ಸೌಖ್ಯಾನಂದಭಂತೇಜಿ ಸಾಥ್ ನೀಡಿದರು. ದೀಕ್ಷಾ ಸಮಾರಂಭಕ್ಕೂ ಮೊದಲು ನಗರದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣ ಬಳಿ (ಬುದ್ಧ ನಗರ)ಜೈ ಭೀಮ್‌ಯುವಕ ಸಂಘ ಸ್ಥಾಪಿಸಿದ್ದ ಬುದ್ಧರ ಪ್ರತಿಮೆಯನ್ನು ಆನಂದ ಭಂತೇಜಿ ಅನಾವರಣಗೊಳಿಸಿದರು.
ಅಪಾಯ ತಂದೊಡ್ಡಿದ ಕೋವಿಡ್
ಕೋವಿಡ್ ಎರಡನೇ ಅಲೆ ಕಾರಣಕ್ಕೆ ಮತ್ತೆ ಲಾಕ್‌ಡೌನ್ ಆಯಿತು. ಮೊದಲ ಅಲೆಗಿಂತ ಎರಡನೇ ಅಲೆ ವೇಳೆ ಸಾವು-ನೋವು ಅಧಿಕವೆನಿಸಿತು. ಕೋವಿಡ್ ಚಿಕಿತ್ಸೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷÂತೋರುತ್ತಿದ್ದಾರೆ ಎಂಬ ವಿಡಿಯೊ ವೈರಲ್ ಆಗಿತ್ತು. ಕೋವಿಡ್ ಲಸಿಕೆಯಲ್ಲಿ ಆಗಿದ್ದ ಹಿನ್ನೆಡೆ ಈಗ ಸರಿಯಾಗುವ ಹಂತದಲ್ಲಿದ್ದು, ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಎರಡು ಆಮ್ಲಜನಕ ಉತ್ಪಾದ ಘಟನಾ ಘಟಕ ಸಹಿತ ವಿವಿಧ ತಾಲೂಕು ಆಸ್ಪತ್ರೆಗಳಲ್ಲೂ ಘಟಕ ಸ್ಥಾಪನೆಗೆ ಒತ್ತು ನೀಡಲಾಯಿತು.
ಎಸ್‌ಎನ್‌ಮನೆ ಸ್ಮಾರಕವಾಗಲು ಹಂತ
ಮಾಜಿ ಮುಖ್ಯಮಂತ್ರಿ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕ ಮಾಡುವ ಬಹುದಿನಗಳ ಬೇಡಿಕೆ ಈಡೇರಿಕೆಗೆ ಸರ್ಕಾರದ ಮಹತ್ವದ ಆದೇಶ ಹೊರ ಬಿದ್ದಿದೆ. ಸರ್ಕಾರ 5 ಕೋಟಿ ರೂ.ಅನುದಾನ ಬಿಡುಗಡೆ ಘೋಷಿಸಿತ್ತು. ಬಳಿಕ ಸರ್ಕಾರ ತನ್ನ ಆದೇಶವನ್ನು ಮಾರ್ಪಡಿಸಿ ನಿವಾಸ ಖರೀದಿ, ಸಂರಕ್ಷಣೆ ಮಾಡುವುದಾಗಿ ಪ್ರಕಟಿಸಿದೆ.
ಮನೆಯೊಳಗೆ ನುಗ್ಗಿದ ಚಿರತೆ
ಕೋಟೆನಾಡಿನಲ್ಲಿ ಚಿರತೆಗಳ ವರಸೆ ಹೊಸತಲ್ಲ, ಆದರೆ ತುರುವನೂರು ಬಳಿಯ ಮುದ್ದಾಪುರ ಗ್ರಾಮದಲ್ಲಿಆಕಸ್ಮಿಕವಾಗಿ ಮನೆಯೊಂದಕ್ಕೆ ನುಗ್ಗಿದ ಚಿರತೆಯನ್ನು ಅರಣ್ಯಾ ಧಿಕಾರಿಗಳಿಗೆ ಒಪ್ಪಿಸುವ ನಿಟ್ಟಿನಲ್ಲಿ ಗೃಹಿಣಿಯೊಬ್ಬರ ಧೈರ್ಯ, ಜಾಣ್ಮೆ ಮೆರೆದರು. ಗ್ರಾಮಸ್ಥರ ಸಹಕಾರದಿಂದ ಇಲಾಖೆ ಸಿಬ್ಬಂದಿ ಚಿರತೆ ಭೋನಿಗೆ ಕೆಡವಿದರು.
ಅಕಾಲಿಕ ಮಳೆಗೆ ರೈತರು ಹೈರಾಣು
ಈ ವರ್ಷ ಜಿಲ್ಲೆಯಲ್ಲಿ ಹಿಂಗಾರು ಹಾಗೂ ಮುಂಗಾರಿನ ನಡುವೆ ವ್ಯತ್ಯಾಸವೇ ಇರಲಿಲ್ಲ. ಹಿಂಗಾರಿನ ಅಕಾಲಿಕ ಮಳೆಯಿಂದ ಬೆಳೆಗಳು ಹಾಳಾದವು. ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದವು. ಭದ್ರಾ ಜಲಾಶಯದ ಜೊತೆಗೆ ಮಳೆಯ ನೀರು ಸೇರಿ ವಾಣಿವಿಲಾಸ ಸಾಗರಕ್ಕೆ 125 ಅಡಿ ನೀರು ಭರ್ತಿಯಾಗಿ 63 ವರ್ಷಗಳ ನಂತರ ಹೊಸ ಇತಿಹಾಸ ಸೃಷ್ಟಿಯಾಯಿತು.
ತಗ್ಗದ ಅಪಘಾತಗಳು
ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನವೂ ಒಂದಿಲ್ಲೊಂದು ಕಡೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಈ ವರ್ಷ ಈರುಳ್ಳಿ ಸಾಗಿಸುವಾಗ ನಾಲ್ವರು ಲಾರಿಗಳ ಡಿಕ್ಕಿಯಿಂದ ಮೃತಪಟ್ಟ ಪ್ರಕರಣ ಮಾಸುವ ಮುನ್ನವೇ ಮತ್ತೂಂದು ಪ್ರಕರಣದಲ್ಲಿ ಈರುಳ್ಳಿ ತುಂಬಿದ್ದ ಲಾರಿ ಡಿಕ್ಕಿಯಿಂದಲೇ ಮೂವರು ರೈತರು ಮೃತಪಟ್ಟಿದ್ದರು. ಮಳೆಯಿಂದ ಮನೆ ಗೋಡೆ ಕುಸಿದು ಹಿರಿಯೂರು ತಾಲೂಕಿನ ಹೋ.ಚಿ.ಬೋರಯ್ಯ ಬಡಾವOಯ ಲ್ಲಿ ನಾಲ್ವರು, ಚಳ Ûಕೆರೆ ತಾಲೂಕಿನ ಇಬ್ಬರು ಮೃತಪಟ್ಟಿದ್ದರು. ಜಿಲ್ಲೆಯಲ್ಲಿ
ಸಚಿವರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯೊಬ್ಬರು ಸಚಿವ ಬಿ.ಶ್ರೀರಾಮುಲು ಅವರೆದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಈ ವರ್ಷದಲ್ಲಿ ದಾಖಲಾಗಿದೆ. ಚಿತ್ರದುರ್ಗ ತಾಲೂಕಿನ ಇಸಾಮುದ್ರದಲ್ಲಿ ವಿಷಾಹರ ಸೇವನೆಯಿಂದ ನಾಲ್ವರು ಅಸು ನೀಗಿದರು. ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತು.
ತಿಪ್ಪೇಸ್ವಾಮಿ ನಾಕಿಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.