ಪ್ರೊ ಕಬಡ್ಡಿ: ಪುನೇರಿ ಮೇಲೆ ತಮಿಳ್ ತಲೈವಾಸ್ ಸವಾರಿ
Team Udayavani, Dec 31, 2021, 10:28 PM IST
ಬೆಂಗಳೂರು: ಎಂಟನೇ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ಮೊದಲ ಗೆಲುವು ಸಾಧಿಸಿದೆ. ದಿನದ ಮೊದಲ ಪಂದ್ಯದಲ್ಲಿ ಅದು ಪುನೇರಿ ಪಲ್ಟಾನ್ ವಿರುದ್ಧ 36-26 ಅಂಕಗಳಿಂದ ಗೆದ್ದು ಬಂದಿತು. ಪಾಟ್ನಾ ಪೈರೇಟ್ಸ್ ಮತ್ತು ಬೆಂಗಾಲ್ ವಾರಿಯರ್ ನಡುವಿನ ಇನ್ನೊಂದು ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಇದನ್ನು ಪಾಟ್ನಾ 44-30 ಅಂತರದಿಂದ ಜಯಿಸಿತು.
ಮನ್‌ಜೀತ್ ಸಾಹಸ
ಇದು ಈ ಕೂಟದಲ್ಲಿ ತಮಿಳ್ ತಲೈವಾಸ್‌ಗೆ ಒಲಿದ ಮೊದಲ ಜಯ. 4 ಪಂದ್ಯಗಳನ್ನಾಡಿರುವ ತಲೈವಾಸ್ ಎರಡನ್ನು ಟೈ ಮಾಡಿಕೊಂಡು, ಒಂದರಲ್ಲಿ ಸೋಲನುಭವಿಸಿತ್ತು. ಇನ್ನೊಂದೆಡೆ ಪುನೇರಿ 4 ಪಂದ್ಯಗಳಲ್ಲಿ 3 ಸೋಲನುಭವಿಸಿ ಕೊನೆಯ ಸ್ಥಾನಕ್ಕೆ ಅಂಟಿಕೊಂಡಿತು.
ತಲೈವಾಸ್ ಮೇಲುಗೈಯಲ್ಲಿ ರೈಡರ್ ಮನ್‌ಜೀತ್ ಸಾಹಸ ಮಹತ್ವದ್ದಾಗಿತ್ತು. ಅವರು 17 ರೈಡ್ ನಡೆಸಿ ಸರ್ವಾಧಿಕ 8 ಅಂಕ ತಂದಿತ್ತರು. 5 ಟಚ್ ಪಾಯಿಂಟ್ ಮತ್ತು 3 ಬೋನಸ್ ಪಾಯಿಂಟ್ ಇದರಲ್ಲಿ ಸೇರಿತ್ತು. 17ರಲ್ಲಿ 5 ರೈಡ್ ಯಶಸ್ವಿಯಾಗಿತ್ತು. ಮನ್‌ಜೀತ್ ಹೊರತುಪಡಿಸಿದರೆ ನಾಯಕನೂ ಆಗಿರುವ ಡಿಫೆಂಡರ್ ಸುರ್ಜೀತ್ ಸಿಂಗ್ 3 ಅಂಕ ಗಳಿಸಿದರು. ಡಿಫೆಂಡರ್‌ಗಳಾದ ಸಾಗರ್ ಮತ್ತು ಸಾಹಿಲ್ ತಲಾ 2 ಅಂಕ ಕೊಡಿಸಿದರು. ವಿರಾಮದ ವೇಳೆ 18-11 ಮುನ್ನಡೆಯಲ್ಲಿದ್ದ ತಮಿಳ್ ತಲೈವಾಸ್ ಆಗಲೇ ಗೆಲುವಿನ ಸೂಚನೆ ನೀಡಿತ್ತು.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ : ರಾಹುಲ್ ಟೀಮ್ ಇಂಡಿಯಾ ನಾಯಕ
ಪುನೇರಿ ಹಿನ್ನಡೆಯಲ್ಲಿ ರಾಹುಲ್ ಚೌಧರಿ ಅವರ ವೈಫಲ್ಯ ಎದ್ದು ಕಂಡಿತು. ಅವರು ಕಳೆದ ವರ್ಷದ ಕಳಫೆ ಫಾರ್ಮನ್ನೇ ಮುಂದುವರಿಸಿದ್ದು ತಂಡದ ಪಾಲಿಗೆ ದೊಡ್ಡ ಆಘಾತವಾಗಿದೆ. ಈ ಪಂದ್ಯದಲ್ಲಿ ರಾಹುಲ್ ತಂದಿತ್ತದ್ದು ಕೇವಲ ಎರಡಂಕ. ಮತ್ತೋರ್ವ ರೈಡರ್ ಪಂಕಜ್ ಮೋಹಿತೆ ಸಾಹಸ ಗಮನಾರ್ಹ ಮಟ್ಟದಲ್ಲಿತ್ತು. ಅವರಿಂದ ತಂಡಕ್ಕೆ ಎಂಟಂಕಗಳ ಲಾಭವಾಯಿತು. ರೈಡರ್ ಅಸ್ಲಾಮ್ ಮತ್ತು ಡಿಫೆಂಡರ್ ವಿಶಾಲ್ ಭಾರದ್ವಾಜ್ ತಲಾ 4 ಅಂಕ ತಂದು ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.