ಭಾವನೆ – ವಾತ್ಸಲ್ಯ ಮನುಕುಲದ ಸಂಬಂಧಕ್ಕೆ ಪ್ರೇರಣೆ: ಡಾ| ಸುನೀತಾ ಎಂ. ಶೆಟ್ಟಿ
Team Udayavani, Jan 1, 2022, 11:08 AM IST
ಮುಂಬಯಿ: ಯಾಂತ್ರಿಕ ಜೀವನದಲ್ಲಿ ನಾವು ಏನನ್ನು ಗಳಿಸುತ್ತೇವೆ ಮತ್ತು ಏನನ್ನು ಉಳಿಸುತ್ತೇವೆ ಇದರ ಮೇಲೆ ಪ್ರಸ್ತುತ ನಮ್ಮ ಲಕ್ಷ ಇಲ್ಲದಾಗಿದೆ. ಇದನ್ನು ನಿರ್ಲಕ್ಷಿಸಿದರೆ ಬದುಕು ಶೂನ್ಯವಾಗುವುದು. ಅಟಲ್‌ಜೀ ಅವರ ಮೇಲ್ಪಂಕ್ತಿಯನ್ನು ಅನುಸರಿಸಿ ಮುನ್ನಡೆಯುತ್ತಿರುವ ನಮ್ಮ ಗೋಪಾಲ ಶೆಟ್ಟಿ ಮತ್ತು ಎರ್ಮಾಳ್ ಹರೀಶ್ ಅವರ ಭಾವನೆ ಮತ್ತು ಪ್ರೇಮದ ಒಲವು ನನ್ನ ಆಗಮನಕ್ಕೆ ಕಾರಣವಾಯಿತು. ಭಾವನೆ ಮತ್ತು ವಾತ್ಸಲ್ಯವು ಎರಡು ದರ್ಶನಗಳಾಗಿದ್ದು, ಇದು ಮನುಕುಲದ ಸಂಬಂಧಕ್ಕೆ ಪ್ರೇರಣೆಯಾಗಿದೆ ಎಂದು ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ ಸಂಸ್ಥೆಯ ಸಲಹ ಸಮಿತಿ ಸದಸ್ಯೆ, ಹಿರಿಯ ಸಾಹಿತಿ, ಕವಿಯತ್ರಿ, ಪ್ರಾಧ್ಯಾಪಕಿ ಡಾ| ಸುನೀತಾ ಎಂ. ಶೆಟ್ಟಿ ತಿಳಿಸಿದರು.
ಬಿಜೆಪಿ ಉತ್ತರ ಮುಂಬಯಿ ಜಿಲ್ಲೆ ಮತ್ತು ಸಂಸದ ಶ್ರೀ ಗೋಪಾಲ್ ಸಿ. ಶೆಟ್ಟಿ ತುಳು ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಉಭಯ ಸಂಸ್ಥೆಗಳು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ. ಶೆಟ್ಟಿ ಸಾರಥ್ಯದಲ್ಲಿ ಉಪನಗರ ಕಾಂದಿವಲಿ ಪೂರ್ವದ ಸಮತಾ ನಗರದ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರೀಯ ಉತ್ಕೃಷ್ಟತ ಕೇಂದ್ರದಲ್ಲಿ ಮಾಜಿ ಪ್ರಧಾನಿ, ಕವಿಹೃದಯಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಜಯಂತಿ ಕಾರ್ಯಕ್ರಮದ ಪ್ರಯುಕ್ತ ಡಿ. 29ರಂದು ಸಂಜೆ ಹಮ್ಮಿಕೊಂಡ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಅಭಿವಂದನ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸದ ಗೋಪಾಲ್ ಸಿ. ಶೆಟ್ಟಿ, ಶಾಸಕಿ ಮನಿಷಾ ಚೌಧರಿ, ಮುಂಬಯಿ ಕ್ರಿಕೆಟ್ ಅಸೋಸಿಯೇಶನ್‌ನ ಡಾ| ಪಿ.ವಿ. ಶೆಟ್ಟಿ, ಮುಂಡಪ್ಪ ಎಸ್. ಪಯ್ಯಡೆ, ಸಾಯಿ ಪ್ಯಾಲೇಸ್‌ನ ರವಿ ಎಸ್. ಶೆಟ್ಟಿ, ಸಂಸದ ಶ್ರೀ ಗೋಪಾಲ್ ಸಿ. ಶೆಟ್ಟಿ ತುಳು-ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ ಹಾಗೂ ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಸುನೀತಾ ಎಂ. ಶೆಟ್ಟಿ, ಡಾ| ಸುರೇಶ್ ಎಸ್. ರಾವ್ ಕಟೀಲು, ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಸಮ್ಮಾನಿಸಿ ಅಭಿನಂದಿಸಿದರು.
ಭಾರತ ದೇಶವು ಕಂಡ ಶ್ರೇಷ್ಠ ಕವಿ, ಮಹಾನ್ ರಾಜಕಾರಣಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಜಯಂತಿ ಸ್ಮರಣಾರ್ಥ ಆಯೋಜಿಸಿ ರುವ ಭವ್ಯ ಸಮಾರಂಭದಲ್ಲಿ ನಮ್ಮನ್ನು ಅಭಿಮಾನ ಪೂರ್ವಕವಾಗಿ ಗೌರವಿಸಿ ರುವುದು ಆನಂದ ತಂದಿದೆ ಎಂದು ತಿಳಿಸಿದ ಅವರು, ಅಟಲ್‌ಜೀ ಅವರ ಪ್ರಸಿದ್ಧ ನೀತಿಭೋಧಕ ಕವಿತೆಯೊಂದರ ಸಾಲು ಕ್ಯಾ ಖೊಯಾ.. ಕ್ಯಾ ಪಾಯಾ.. ಜಗ್ ಮೆ, ಮಿಲ್‌ತೆ ಔರ್ ಬಿಛಡ್ತೆ ನಗ್ಮೇ ಮುಜೆ ಕಿಸೀ ಸೆ ನಹಿ ಶಿಖಾಯತ್, ಯಘಪಿ ಛಲಾ ಗಯಾ ಪಗ್ ಪಗ್‌ಮೆ… ಜೀವನ್ ಏಕ್ ಅನಂತ್ ಕಹಾನೀ.. ಪರ್ ತನ್ ಕೀ ಅಪ್ನಿ ಸೀಮಾಯಂ ಅನ್ನು ಸ್ಮರಿಸಿ ಪ್ರತಿ ಹೆಜ್ಜೆಯಲ್ಲೂ ಮೋಸ ಹೋದರೂ ಗತಕಾಲವನ್ನು ಒಮ್ಮೆ ಅವಲೋಕಿಸಿ ನೆನಪುಗಳ ಬುತ್ತಿಯನ್ನು ಮೆಲುಕು ಹಾಕಿ ಮುನ್ನಡೆಯುವ ಅಗತ್ಯವಿದೆ. ಭೂಮಿ ಲಕ್ಷಾಂತರ ವರ್ಷಗಳಷ್ಟು ಹಳೆಯದು, ಜೀವನವು ಶಾಶ್ವತ ಕಥೆ ಮಾತ್ರ. ಆದರೆ ದೇಹವು ಅದರ ಮಿತಿಗಳನ್ನು ಹೊಂದಿದೆ. ನೂರು ಶರತ್ಕಾಲದ ಧ್ವನಿಯಾಗಿದ್ದರೂ ಅದು ಸಾಕು. ಜನನ ಮತ್ತು ಮರಣ ನಿರಂತರ ಚಕ್ರವಾಗಿದ್ದು, ಜೀವನ ಬಂಜಾರ ಶಿಬಿರವಷ್ಟೆ. ಆದ್ದರಿಂದ ಇಂದು ಇಲ್ಲಿ, ನಾಳೆ ಇನ್ನೆಲ್ಲಿಗೆ ಪ್ರಯಾಣಿಸುವಿರಿ ಯಾರಿಗೆ ಗೊತ್ತು. ಈ ಮಧ್ಯೆ ಸಾಮರಸ್ಯ ಸಪ್ರೇಮದಿಂದ ಬಾಳ್ಳೋಣ ಎಂದು ಹಿತನುಡಿಗಳನ್ನಾಡಿದರು.
ಸಂಸದ ಗೋಪಾಲ್ ಸಿ. ಶೆಟ್ಟಿ ಮಾತನಾಡಿ, ನಾವು ರಾಜಕಾರಣಿಗಳ ಮತದ ಉದ್ದೇಶವನ್ನಾಗಿಸಿಯಾದರೂ ಏನೋ ಸಾಧನೆ ಮಾಡುತ್ತೇವೆ. ಆದರೆ ಈ ಪುರಸ್ಕೃತರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹ. ಇವರ ಕರ್ತವ್ಯನಿಷ್ಠೆ ನಿಜಕ್ಕೂ ಅನುಕರಣೀಯ. ಕರ್ಮಭೂಮಿಯಲ್ಲಿದ್ದೂ ಸ್ವರಾಜ್ಯ ಮಾತೃಭಾಷೆ, ಸಂಸ್ಕೃತಿಯನ್ನು ಜೀವಂತವಾಗಿರಿಸುವಲ್ಲಿ ಇವರ ಶ್ರಮ, ಪ್ರಯತ್ನ ಪ್ರಶಂಸನೀಯ. ಅಟಲ್‌ಜೀ ಅವರು ಪೂರ್ತಿ ಜೀವನವನ್ನು ದೇಶಕ್ಕೆ ಸಮರ್ಪಿಸಿದ್ದು, ಅಂತೆಯೇ ಪುರಸ್ಕೃತರೂ ಆದರ್ಶ ವಿಚಾರಗಳನ್ನು ತಮ್ಮ ಜೀವನ ದಲ್ಲಿ ರೂಢಿಸಿಕೊಂಡು ನಮಗೆ ಮಾದರಿ ಯಾಗಿದ್ದಾರೆ ಎಂದು ತಿಳಿಸಿದರು.
ಡಾ| ಸುರೇಶ್ ರಾವ್ ಮಾತನಾಡಿ, ಅಟಲ್ ಮಹೋತ್ಸವ ಶುಭಾವಸರದಲ್ಲಿ ಯುವ ಸಮ್ಮೇಳನದ ಸಮ್ಮಾನ ನಮ್ಮನ್ನು ಮತ್ತೆ ಯುವಜನರನ್ನಾಗಿಸಿದೆ. ಈ ಗೌರವ ತಾರುಣ್ಯವನ್ನು ಮೆಲುಕು ಹಾಕಿಸು ವಂತೆ ಮಾಡಿದೆ. ನಾವು ಕರ್ನಾಟಕದ ಮೂಲವಾಸಿಗಳಾಗಿದ್ದರೂ ಕಳೆದ ನಾಲ್ಕೈದು ದಶಕಗಳಿಂದ ಮುಂಬಯಿ ವಾಸಿಗಳಾಗಿ ಸೇವಾ ನಿರತರಾಗಿದ್ದೇವೆ. ಆದ್ದರಿಂದ ಮುಂಬಯಿಯನ್ನೇ ಕರ್ಮ ಭೂಮಿಯನ್ನಾಗಿಸಿ ಬಾಳುತ್ತಿದ್ದು, ಈ ನೆಲದ ಗೌರವ ಸರ್ವಶ್ರೇಷ್ಠವಾಗಿಸಿ ಸ್ವೀಕರಿಸಿದ್ದೇವೆ ಎಂದರು.
ನಮ್ಮವರ ಸಮ್ಮಾನವೆಂದು ಖುಷಿಯಿಂದ ಸ್ವೀಕರಿಸಿದ್ದೇವೆ. ಗೋಪಾಲ್ ಶೆಟ್ಟಿ ಅವರು ದೊಡ್ಡ ಧುರೀಣ ಮತ್ತು ತುಳು ಕನ್ನಡಿ ಗರ ಲೋಕಪ್ರಿಯ ಸಂಸದ ಎಂದು ಚಂದ್ರಶೇಖರ ಪಾಲೆತ್ತಾಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಗಲ್ ಪ್ರಭಾತ್ ಲೋದಾ, ನ್ಯಾಯವಾದಿ ಸಿದ್ಧಾರ್ಥ್ ಶರ್ಮಾ, ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಿಟ್ಟೆ ಎಂ.ಜಿ. ಶೆಟ್ಟಿ, ಡಾ| ಸತೀಶ್ ಶೆಟ್ಟಿ, ಮಾಜಿ ನಗರ ಸೇವಕ ಶಿವಾನಂದ ಶೆಟ್ಟಿ, ಬಿಜೆಪಿ ಮೀರಾ- ಭಾಯಂದರ್ ಜಿಲ್ಲಾ ಉಪಾಧ್ಯಕ್ಷ ಮುನ್ನಾಲಾಯಿಗುತ್ತು ಸಚ್ಚಿದಾನಂದ ಎಂ. ಶೆಟ್ಟಿ, ಮಹೇಶ್ ಶೆಟ್ಟಿ ತೆಳ್ಳಾರ್, ಗಿರೀಶ್ ಶೆಟ್ಟಿ ತೆಳ್ಳಾರ್, ಕೃಷ್ಣ ಶೆಟ್ಟಿ ಚಾರ್ಕೋಪ್, ರಘುರಾಮ ಕೆ. ಶೆಟ್ಟಿ (ಅವೆನ್ಯೂ), ಸಾಣೂರು ಮನೋಹರ್ ಕಾಮತ್, ವಿಜಯ್ ಆರ್. ಭಂಡಾರಿ, ಮಾಳ ಕರುಣಾಕರ ಶೆಟ್ಟಿ, ಗೌತಮ್ ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಅನಿಲ್ ಸಾಲ್ಯಾನ್, ತುಳು ಸಂಘ ಬೊರಿವಲಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಅರುಷಾ ಎನ್. ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರೀ ಆ್ಯಂಡ್ ಎಗ್ರಿಕಲ್ಚರ್ ಉಪಾಧ್ಯಕ್ಷ ಕರುಣಾಕರ್ ಎಸ್. ಶೆಟ್ಟಿ ಅವರು ಪುರಸ್ಕೃತರನ್ನು ಪರಿಚಯಿಸಿದರು. ಯುವ ಜಿಲ್ಲಾ ಕಾರ್ಯದರ್ಶಿ ಅವಿನಾಶ್ ರಾಯ್ ಕಾರ್ಯಕ್ರಮ ನಿರೂಪಿಸಿದರು. ಮುಂಡಪ್ಪ ಎಸ್. ಪಯ್ಯಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.