ತಾಂತ್ರಿಕತೆ ಅಳವಡಿಕೆ; ಡಿಸಿಸಿ ಬ್ಯಾಂಕಿಗೆ ರಾಜ್ಯ ಮಟ್ಟದ ಗೌರವ
Team Udayavani, Jan 1, 2022, 4:47 PM IST
ಕೋಲಾರ: ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕತೆ ಅಳವಡಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿಗೆ ರಾಜ್ಯಮಟ್ಟದ ಗೌರವ ಲಭಿಸಿದೆ ಎಂದುಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹರ್ಷ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲೇ ಮೊದಲ ಬಾರಿಗೆ ಸಹಕಾರಸಂಘಗಳ ಚಟುವಟಿಕೆಗಳನ್ನು ಗಣಕೀಕರಣಗೊಳಿಸುವ ಕಾರ್ಯದಲ್ಲಿ ಮಾಡಿರುವ ಸಾಧನೆ, ಎಟಿಎಂ ಬಳಕೆ, ಮೊಬೈಲ್ ಬ್ಯಾಂಕಿಂಗ್, ಇ-ಶಕ್ತಿ ಅನುಷ್ಠಾನ ಮತ್ತಿತರ ತಾಂತ್ರಿಕತೆ ಅಳವಡಿಕೆಯಲ್ಲಿ ಮಾಡಿರುವ ಸಾಧನೆಗಾಗಿ ನಬಾರ್ಡ್ ಈ ಪ್ರಶಸ್ತಿ ನೀಡಿದೆ ಎಂದು ತಿಳಿಸಿದರು.
ಮೂರು ಬ್ಯಾಂಕ್‌ಗಳಿಗೂ ಗೌರವ: ಬ್ಯಾಂಕಿಂಗ್ ಸೇವೆಯ ಕುರಿತು ಸಾರ್ವಜನಿಕರು, ಗ್ರಾಹಕರಿಗೆ ಹೆಚ್ಚಿನ ಮಾಹಿತಿ, ಸೌಲಭ್ಯ ಒದಗಿಸಿರುವುದನ್ನು ಗಮನಿಸಿ ಈಪ್ರಶಸ್ತಿಯನ್ನು ನೀಡಲಾಗುತ್ತಿದೆ. ರಾಜ್ಯದ ಕೋಲಾರ,ಉತ್ತರಕನ್ನಡ,ಧಾರವಾಡ ಜಿಲ್ಲಾ ಸಹಕಾರ ಬ್ಯಾಂಕುಗಳು ಈ ಗೌರವಕ್ಕೆ ಭಾಜನವಾಗಿದೆ ಎಂದು ತಿಳಿಸಿದರು.
ಜ.12ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ರೆಡಿಷನ್ ಬ್ಲೂ ಅತ್ರಿಯಾ ಹೋಟೆಲ್‌ನಲ್ಲಿ ನಡೆಯುವ “ರಾಜ್ಯ ಸಾಲ ಯೋಜನೆ ವಿಚಾರ ಸಂಕಿರಣ’ದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕಿನ ಸಾಧನೆಗೆ ಹೆಮ್ಮೆ: ಕಳೆದ 10 ವರ್ಷ ಹಿಂದೆ ದಿವಾಳಿಯಾಗಿದ್ದ ಕೋಲಾರ ಡಿಸಿಸಿ ಬ್ಯಾಂಕ್ ಈಗಾಗಲೇ ಎನ್‌ಪಿಎ ನಿರ್ವಹಣೆಯಲ್ಲೂ ರಾಜ್ಯಕ್ಕೆ ಮೊದಲೆಂಬ ಸಾಧನೆಯ ಗೌರವಕ್ಕೆ ಪಾತ್ರವಾಗಿದ್ದು, ಮಹಿಳೆಯರಿಗೆ ಸಾಲ ನೀಡಿಕೆ, ಪ್ರತಿ ಮಹಿಳಾ ಸದಸ್ಯರಿಗೂ ಎಟಿಎಂ ಕಾರ್ಡ್ ನೀಡಿಕೆಯಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.
ಬ್ಯಾಂಕ್‌ನಲ್ಲೇ ಹೆಚ್ಚು ಸೌಲಭ್ಯ: ಆಡಳಿತ ಮಂಡಳಿಯ ನಿರಂತರ ಪ್ರಯತ್ನ, ಸಿಬ್ಬಂದಿಯ ಪರಿಶ್ರಮ, ಸಾಲ ವಿತರಣೆ ಜತೆಗೆ ಠೇವಣಿ ಸಂಗ್ರಹ, ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳು ಈಗಾಗಲೇ ಪ್ರಶಂಸೆಗೆಪಾತ್ರವಾಗಿವೆ. ಸಹಕಾರ ಬ್ಯಾಂಕ್ ಒಂದರಲ್ಲಿ ವಾಣಿಜ್ಯ ಬ್ಯಾಂಕನ್ನು ಮೀರಿಸುವ ರೀತಿಯಲ್ಲಿ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಮೂಲಕ ನೆಫ್ಟ್, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವುದರ ಜತೆಗೆ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ತಮ್ಮ ಮನೆ ಬಾಗಿಲಲ್ಲೇ ಹಣ ತಲುಪಿಸಲು ಕೈಗೊಂಡಿರುವ ಮೊಬೈಲ್ ಬ್ಯಾಂಕಿಂಗ್ ವಾಹನ ಸೌಲಭ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಠೇವಣಿದಾರರಿಗೂ ಹಣ ವಾಪಸ್ ಮಾಡಲಾಗದ ಸ್ಥಿತಿ ತಲುಪಿದ್ದ ಬ್ಯಾಂಕ್ ಇಂದು ಸಾವಿರಾರು ಕೋಟಿರೂ. ವಹಿವಾಟು ನಡೆಸುವ ಮೂಲಕ ಪಾರದರ್ಶಕ ವಹಿವಾಟಿಗೂ ಸಾಕ್ಷಿಯಾಗಿದ್ದು, ಗಣಕೀಕರಣ ಕಾರ್ಯ ಜ.15 ರೊಳಗೆ ಪೂರ್ಣಗೊಳ್ಳಲು ಇತ್ತೀಚೆಗೆ ನಡೆದಸಭೆಯಲ್ಲಿ ಕಟ್ಟಪ್ಪಣೆ ನೀಡಲಾಗಿದೆ ಎಂದು ವಿವರಿಸಿದರು.
ಒಟ್ಟಾರೆಯಾಗಿ ಡಿಸಿಸಿ ಬ್ಯಾಂಕ್ ಕುರಿತು ವಿನಾಕಾರಣ ಟೀಕೆ ಮಾಡುತ್ತಿದ್ದವರಿಗೆ ಈಗ ಸಂದಿರುವ ಈ ಗೌರವ ಸೂಕ್ತ ಉತ್ತರ ನೀಡಿದಂತಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.