![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 1, 2022, 4:48 PM IST
ಹೊಸನಗರ: 10 ರೂಪಾಯಿ ಬೆಲೆ ಕೊಟ್ಟು ಖರೀದಿಸಿದ್ದ ಕೋಳಿ ಮರಿಗೆ 52 ರೂ. ಬಸ್ ಚಾರ್ಜ್ ನೀಡಿದ ಪ್ರಸಂಗವೊಂದು ನಡೆದಿದೆ.
ಬೈಂದೂರಿನ ಶಿರೂರಿಗೆ ಹೊರಟಿದ್ದ ಅಲೆಮಾರಿ ಕುಟುಂಬವೊಂದು ಸರ್ಕಾರಿ ಬಸ್ಸು ಹತ್ತಿತ್ತು. ಬಸ್ಸಿನ ಕಂಡಕ್ಟರ್ ಬಂದು ಎಲ್ಲಿಗೆ ಎಂದು ಕೇಳಿದಾಗ ಶಿರೂರು ಹೋಗಬೇಕ್ರಿ.. ಮೂರು ಟಿಕೆಟ್ ಕೊಡ್ರಿ ಅಂದಿಗೆ. ಅದೇ ವೇಳೆ ಪುಟ್ಟ ಚೀಲದಿಂದ ಚಿವ್ ಚಿವ್ ಶಬ್ಧ ಬರುತ್ತಿದ್ದನ್ನು ಆಲಿಸಿದ ಕಂಡಕ್ಟರ್ ಅದು ಏನು ಎಂದು ಪ್ರಶ್ನಿಸಿದ. ಅದು ಒಂದು ಕೋಳಿ ಮರೀರಿ.. ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕೂಡಲೇ ಕಂಡಕ್ಟರ್ ಅದಕ್ಕೂ ಟಿಕೆಟ್ ಮಾಡ ಬೇಕು. ಅದಕ್ಕೂ ರೂಲ್ಸ್ ಇದೆ ಎಂದು ಅರ್ಧ ಚಾರ್ಜ್, ಬರೋಬ್ಬರಿ ರೂ.52 ದರ ಮಾಡಿ ಟಿಕೆಟ್ ಕೊಟ್ಟಿದ್ದಾರೆ . ಮುಖಮುಖ ನೋಡಿಕೊಂಡ ಆ ಮೂವರು ಬೇರೆದಾರಿ ಕಾಣದೆ ಟಿಕೆಟ್ ತಗೆದುಕೊಂಡಿದ್ದಾರೆ.
ಶಿರಸಿ ಸಿದ್ದಾಪುರದಿಂದ ಬಂದ ಆ ಕುಟುಂಬ ರೂ.10 ಕೊಟ್ಟು ಕೋಳಿ ಮರಿ ತಂದಿದ್ದರು. ಬಸ್ಸಿನ ಟಿಕೆಟ್ ದರ ನೋಡಿ ಮೂಗಿಗಿಂತ ಮೂಗುತಿ ಭಾರ ಅಂದಂಗಾಯ್ತು ಎಂದು ಗೊಣಗಿಕೊಂಡರು.ಈ ಇಡೀ ದೃಶ್ಯ ಬಸ್ಸಿನಲ್ಲಿದ್ದವರ ಕುತೂಹಲ ಮತ್ತು ಚರ್ಚೆಗೂ ಗ್ರಾಸವಾಯ್ತು.
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.