ಪ್ರಭಾವ ಬಳಸಿ ರೈತರ ಹಣ ಲೂಟಿ
Team Udayavani, Jan 1, 2022, 5:12 PM IST
ಕನಕಪುರ: ಹಾಲು ಉತ್ಪಾದಕರ ಕಟ್ಟಡ ಕಾಮಗಾರಿಯಲ್ಲಿ ನಕಲಿ ಎಸ್ಟಿಮೆಟ್ ಸೃಷ್ಟಿಸಿ ಸಂಘದಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಹಾಗೂ ಹಾಲುಒಕ್ಕೂಟಗಳ ಶಿಬಿರದ ಉಪವ್ಯವಸ್ಥಾಪಕರು ಶಾಮಿಲಾಗಿರೈತರ ಹಣ ಲೂಟಿ ಮಾಡಿದ್ದಾರೆ ಎಂದು ಸಂಘದಸದಸ್ಯ ಕಾಳರಾಜು ಗಂಭೀರವಾದ ಆರೋಪ ಮಾಡಿದರು.
ತಾಲೂಕಿನ ಸಾತನೂರು ಹೋಬಳಿಯ ಕಬ್ಟಾಳು ಗ್ರಾಮದಲ್ಲಿ ಹಾಲು ಉತ್ಪಾದಕರಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರದಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಡೇರಿ ಸಂಘದ ಅಧ್ಯಕ್ಷಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಶಂಕರ್ ತಮ್ಮ ರಾಜಕೀಯ ಪ್ರಭಾವ ಬಳಸಿ ಸಂಘದ ಮುಖ್ಯಕಾರ್ಯನಿರ್ವಹಕ ಅಧಿಕಾರಿಗೆ ತಪ್ಪು ಮಾಹಿತಿ ನೀಡಿ ಅವರ ಮೇಲೆ ಒತ್ತಡ ತಂದು 14 ಲಕ್ಷ ಹಣಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ವರ್ಷದ ಹಿಂದೆ ನೂತನವಾಗಿ ನಿರ್ಮಾಣ ಮಾಡಿರುವ ಹಾಲು ಉತ್ಪಾದಕರ ಸಹಕಾರ ಸಂಘದನೂತನ ಕಟ್ಟಡಕ್ಕೆ 11.92ಲಕ್ಷ ರೂ ಗೆ ಎಸ್ಟಿಮೆಟ್‌ರೂಪಿಸಲಾಗಿತ್ತು. ಆದರೆ ಕಾಮಗಾರಿ ನೆಪದಲ್ಲಿಹಣ ಲೂಟಿ ಮಾಡಲು ಸಂಘದ ಅಧ್ಯಕ್ಷ ಸ್ವಾಮಿ,ಆಡಳಿತ ಮಂಡಳಿಯ ಕೆಲ ನಿರ್ದೇಶಕರು,ಜಿಪಂ ಮಾಜಿ ಸದಸ್ಯ ಶಂಕರ್ ಅವರೊಂದಿಗೆಶಾಮಿಲಾಗಿದ್ದಾರೆ. ಶಂಕರ್ ತಮ್ಮರಾಜಕೀಯ ಪ್ರಭಾವ ಬಳಸಿ ಸಂಘದಮುಖ್ಯ ಕಾರ್ಯನಿರ್ವಾಹಕರಿಗೆ ತಪ್ಪುಮಾಹಿತಿ ನೀಡಿ 26 ಲಕ್ಷ ರೂಗೆ ನಕಲಿಎಸ್ಟಿಮೆಟ್ ಸೃಷ್ಟಿಸಿ ಸಂಘದಿಂದ 14 ಲಕ್ಷ.ವಿಧಾನ ಪರಿಷತ್ ಸದಸ್ಯರ ಅನುದಾನದಿಂದ3.ಹಾಲು ಒಕ್ಕೂಟದಿಂದ 3, ಕೆಎಂಎಫ್ ನಿಂದ 3, ಹಾಗೂ ಧರ್ಮ ಸ್ಥಳ ಸಂಸ್ಥೆಯಿಂದ1ಲಕ್ಷ ಸೇರಿ ಒಟ್ಟು 24 ಲಕ್ಷ ರೂ.ಹಣ ಬಿಡುಗಡೆಮಾಡಿಕೊಂಡು ಸಂಘದ ಸದಸ್ಯರಿಗೆ ವಂಚಿಸಿದ್ದಾರೆ.
ಸಹಕಾರ ಸಂಘದ ಮೇಲಧಿಕಾರಿಗಳು ಸೂಕ್ತ ತನಿಖೆನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು ರೈತರಹಣವನ್ನು ವಸೂಲಿ ಮಾಡಬೇಕು ಎಂದು ಸಂಘದ ಸದಸ್ಯ ಕಾಳರಾಜು ಆಗ್ರಹ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.