ಇಂದಿನಿಂದ ಮಾಸ್ಕ್ ಹಾಕದಿದ್ದರೆ 250 ರೂ. ದಂಡ
Team Udayavani, Jan 1, 2022, 5:22 PM IST
ತುಮಕೂರು: ಶೈಕ್ಷಣಿಕ ನಗರದಲ್ಲಿ ತಾರಕಕ್ಕೆ ಏರಿದ್ದ ಕೊರೊನಾ ಮಹಾಮಾರಿ ಜಿಲ್ಲಾಡಳಿತ, ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಬಿಗಿ ಕ್ರಮ ಗಳಿಂದಾಗಿ ಕೊರೊನಾ ಪಾಸಿವಿಟಿದರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದ ವೇಳೆಯಲ್ಲಿ ಮತ್ತೆ ಕೊರೊನಾ ಸೋಂಕಿತರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ತುಮಕೂರು ಮಹಾನಗರ ಪಾಲಿಕೆ ನಗರದಲ್ಲಿಕೊರೊನಾ ವ್ಯಾಪಿಸದಂತೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ನಗರದಲ್ಲಿ ಕೊರೊನಾ ವ್ಯಾಪಕವಾಗಿಹರಡಬಾರದು ಎಂದು ಮುಂಜಾಗ್ರತಾ ಕ್ರಮಗಳನ್ನುಕೈಗೊಂಡಿರುವ ಪಾಲಿಕೆ, ಜನರಲ್ಲಿ ಕೊರೊನಾ ಮತ್ತುಒಮಿಕ್ರಾನ್ ನಿಯಂತ್ರಣಕ್ಕಾಗಿ ಜನರು ಜಾಗೃತಿವಹಿಸಲು ಸೂಚಿ ಸುತ್ತಿದೆ. ರಾಜ್ಯದಲ್ಲಿ ಕೊರೊನಾಜೊತೆಗೆ ಒಮ್ರಿಕಾನ್ ಹೆಚ್ಚಳ ವಾಗು ತ್ತಿರುವ ಭೀತಿಯಹಿನ್ನಲೆ ರಾಜ್ಯ ಸರ್ಕಾರ ಡಿ.28ರಿಂದ ನೈಟ್ ಕರ್ಫ್ಯೂಜಾರಿ ಗೊಳಿಸಿ ಮಾರ್ಗ ಸೂಚಿ ಹೊರಡಿಸಿದೆ.
ನಾಗರಿಕರಿಗೆ ಜಾಗೃತಿ: ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆಗೆ ಪಾಲಿಕೆ ಕ್ರಮ ವಹಿಸುತ್ತಿದೆ. ನಾಲ್ಕು ದಿನಗಳ ಕಾಲ ನಾಗರಿಕರಿಗೆಜಾಗೃತಿ ಮೂಡಿಸಿ, ಮಾಸ್ಕ್ ಹಾಕಲೇಬೇಕು ಎಂದುಎಚ್ಚರಿಕೆ ನೀಡಿ, ಒಂದು ಪಕ್ಷ ಮಾಸ್ಕ್ ಹಾಕದೇನಗರದಲ್ಲಿ ಅಡ್ಡಾಡಿದರೆ ಜ.1ರಿಂದ ಮಾಸ್ಕ್, ಸಾಮಾಜಿಕ ಅಂತರ ಕಾಪಾಡದೆ ನಿಯ ಮಾವಳಿಪಾಲಿಸ ದವರಿಗೆ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ಎಚ್ಚರಿಸಿದ್ದಾರೆ. ಮದುವೆ, ಸಭೆ ಸಮಾರಂಭಗಳಿಗೆ ಸರ್ಕಾ ರದ ಮಾರ್ಗಸೂಚಿ ಅನ್ವಯ 300 ಜನರ ಮಿತಿ ಇದೆ.ಅದೇ ರೀತಿ ಸರ್ಕಾರ ಮಾರ್ಗಸೂಚಿ ಹೊರಡಿ ಸಿದ್ದು, ಸಿನಿಮಾ ವೀಕ್ಷಣೆಗೂ ನಿರ್ಬಂಧ ವಿಧಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ಕ್ರಮ: ಸಭೆ, ಸಮಾರಂಭಗಳಿಗೆ ಹೆಚ್ಚು ಜನರು ಸೇರಿದರೆ ನಮ್ಮ ಅಧಿಕಾರಿಗಳತಂಡ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಪಾಲಿಕೆ ನೋಡಲ್ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರುಇದ್ದು ಅವರು ಈ ಸಂಬಂಧ ಕಲ್ಯಾಣಮಂಟಪಮಾಲೀಕರಿಗೂ ಸೂಚನೆ ನೀಡುತ್ತಿದ್ದಾರೆ. ನಗರದಲ್ಲಿ ಇದುವರೆಗೂ ಕೊರೊನಾ ನಿಯಂತ್ರಣದಲ್ಲಿತ್ತು.ಜನರು ಕೊರೊನಾ ಹೋಗಿತು ಎಂದು ಆರಾಮಾಗಿಮಾಸ್ಕ್ ಇಲ್ಲದೇ ಓಡಾಡಿಕೊಂಡು ಇದ್ದರು. ಮಾಸ್ಕ್ಹಾಕದಿದ್ದರೂ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ.ಆದರೆ, ಈಗ ಬೇರೆ ಬೇರೆ ಕಡೆಗಳಲ್ಲಿ ಕೊರೊನಾಜೊತೆಗೆ ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನಲೆ ನಗರದಲ್ಲಿಸೋಂಕು ಉಲ್ಬಣ ವಾಗಬಾರದು ಎನ್ನುವ ಮುನ್ನೆಚ್ಚರಿಕೆಯಿಂದ ಪಾಲಿಕೆ ಜನರಿಗೆ ಕಸದ ಆಟೋ ಮೂಲಕ ಮತ್ತು ಇತರೆ ಮೂಲಗಳ ಮೂಲಕ ಕಡ್ಡಾಯವಾಗಿಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನು ಮೀರಿದ ಜನರು ಜನವರಿ 1ರಿಂದ ಹೊಸವರ್ಷ ಪರವಾಗಿಲ್ಲ ಎಂದು ರಸ್ತೆಗಳಲ್ಲಿ ಮಾಸ್ಕ್ ಇಲ್ಲದೇತಿರುಗಾಡಲು ಮುಂದಾದರೆ, ಪಾಲಿಕೆ ಅಧಿಕಾರಿಗಳು250 ರೂ. ದಂಡ ಹಾಕಲಿದ್ದಾರೆ. ಈ ಬಗ್ಗೆ ನಾಗರಿಕರು ಜಾಗೃತಿ ವಹಿಸುವುದು ಮುಖ್ಯವಾಗಿದೆ.
ನಗರದಲ್ಲಿ ಕೊರೊನಾ ಲಸಿಕೆ ಶೇ.109ರಷ್ಟು ಸಾಧನೆ :
ತುಮಕೂರು ನಗರದಲ್ಲಿ ಕೊರೊನಾ ಲಸಿಕೆ ನೀಡುವಲ್ಲಿ ಉತ್ತಮ ಸಾಧನೆಯಲ್ಲಿದೆ. ಮೊದಲ ಡೋಸ್ ಶೇ.109ರಷ್ಟು ಸಾಧನೆಯಾಗಿದೆ. ಕೋವಿಡ್ ಮೊದಲ ಡೋಸ್ ಲಸಿಕೆಯನ್ನು ಜನರು ಹಾಕಿಸಿಕೊಂಡಿದ್ದಾರೆ.ಆದರೆ, ಎರಡನೇ ಡೋಸ್ ಲಸಿಕೆಯಲ್ಲಿ ಸಾಧನೆ ಕಡಿಮೆಯಾಗಿದ್ದು, ಶೇ.78ರಷ್ಟು ಪ್ರಗತಿಯಾಗಿದೆ. ನಗರದ ಪ್ರತಿ ಪಿಎಚ್‌ಸಿ ಕೇಂದ್ರ ಮತ್ತು ನಿಗದಿಪಡಿಸಿರುವ ಸ್ಥಳಗಳಲ್ಲಿ ಮಹಾಮೇಳಗಳನ್ನು ಮಾಡಿ, ಲಸಿಕೆ ಯನ್ನು ಹಾಕಲಾಗುತ್ತಿದ್ದು, ಯಾರು ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯದವರು ಕಡ್ಡಾಯವಾಗಿಲಸಿಕೆ ಪಡೆಯಬೇಕು ಎಂದು ಪಾಲಿಕೆ ಎಚ್ಚರಿಸುತ್ತಿದೆ. ಅವಧಿ ಮೀರಿದರೂ 2ನೇ ಡೋಸ್ ಲಸಿಕೆಪಡೆಯದವರನ್ನು ಫೋನ್ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದೆ. ಪ್ರತಿ ಬುಧವಾರ ಆಯಾ ವಾರ್ಡ್ ಪ್ರದೇಶದಲ್ಲಿ ಲಸಿಕೆ ಮೇಳ ಆಯೋಜಿಸುತ್ತಿದ್ದು, ಲಸಿಕೆ ಬಾಕಿ ಉಳಿಸಿಕೊಂಡವರ ಬಗ್ಗೆ ಅಂಗನವಾಡಿಕಾರ್ಯ ಕರ್ತೆಯರಿಂದ ಮನೆ ಮನೆ ಸಮೀಕ್ಷೆ ಮಾಡಿಸಲಾಗುತ್ತಿದೆ. ಜನರು ತಪ್ಪದೇ ಲಸಿಕೆ ಪಡೆಯಿರಿ ಎಂದು ಆಯುಕ್ತೆ ರೇಣುಕಾ ಮನವಿ ಮಾಡಿದ್ದಾರೆ.
ನಗರದಲ್ಲಿ ಈಗಕೊರೊನಾನಿಯಂತ್ರಣದಲ್ಲಿದೆ.ದಿನಕ್ಕೆ 1-2 ಪಾಸಿ ಟೀವ್ ಬರುತ್ತಿವೆ. ಬೇರೆ ಕಡೆ ಕೊರೊನಾ ಹೆಚ್ಚುತ್ತಿರುವ ಹಿನ್ನಲೆ ನಮ್ಮಲ್ಲಿಯೂ ನೈಟ್ ಕರ್ಫ್ಯೂಜಾರಿ, ಕಠಿಣ ಕ್ರಮಗಳ ಅನುಷ್ಠಾನಕ್ಕೆ ತಂದಿದ್ದು, ಸರ್ಕಾ ರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ.ಸೋಂಕಿನ ತಡೆಗೆ ನಾಗರಿಕರ ಸಹಕಾರಅಗತ್ಯ. ಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲಾಡಳಿತದ ಮಾರ್ಗದರ್ಶನಲ್ಲಿ ಕ್ರಮ ಕೈಗೊಳ್ಳಲಾಗುವುದು. – ರೇಣುಕಾ, ಆಯುಕ್ತೆ, ಮಹಾನಗರಪಾಲಿಕೆ
ರಾಜ್ಯದ ವಿವಿಧೆಡೆ ಒಮಿಕ್ರಾನ್, ಕೊರೊನಾಜಾಸ್ತಿಯಾಗುತ್ತಿದೆ.ದೇವರ ದಯೆ ಈಗ ನಮ್ಮ ನಗರದಲ್ಲಿಕೊರೊನಾ ನಿಯಂ ತ್ರಣದಲ್ಲಿದೆ. ಸೋಂಕುಹರಡಬಾರದು ಎಂದು ನಗರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ.ಮಾಸ್ಕ್ ಹಾಕದಿದ್ದರೆ ದಂಡ ಹಾಕುವುದುಸೇರಿದಂತೆ ಇತರೆ ಕ್ರಮ ಕೈಗೊಳ್ಳಲುಮುಂದಾಗಿದ್ದು, ಜನರು ಕೊರೊನಾ ತಡೆಗೆಸಹಕಾರ ನೀಡಬೇಕು. –ಬಿ.ಜಿ.ಕೃಷ್ಣಪ್ಪ, ಪಾಲಿಕೆ ಮೇಯರ್
– ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.