ಒಮಿಕ್ರಾನ್‌ ಏಟಿಗೆ ಕಳೆಗುಂದಿದ ವರ್ಷಾಚರಣೆ

ಕಳೆದ ವರ್ಷ ಸಿಮೀತ ಆಯೋಜನೆ ಮಾಡಿ ಒಂದಿಷ್ಟು ಆಯೋಜಕರು ನಷ್ಟ ಅನುಭವಿಸಿದ್ದರು.

Team Udayavani, Jan 1, 2022, 5:42 PM IST

ಒಮಿಕ್ರಾನ್‌ ಏಟಿಗೆ ಕಳೆಗುಂದಿದ ವರ್ಷಾಚರಣೆ

ಹುಬ್ಬಳ್ಳಿ: 2021ರ ಅದ್ಧೂರಿ ಸ್ವಾಗತಕ್ಕೆ ಕೊರೊನಾ ಕಂಟಕವಾಗಿ ಕಾಡಿದ್ದರೆ, ಇದೀಗ 2022ರ ಸ್ವಾಗತಕ್ಕೆ ಒಮಿಕ್ರಾನ್‌ ಸಂಪೂರ್ಣ ಬ್ರೇಕ್‌ ಹಾಕಿದೆ. ಕ್ಲಬ್‌, ಹೋಟೆಲ್‌ಗ‌ಳಲ್ಲಿ ಪಾರ್ಟಿಗಳ ಮೂಲಕ ಹೊಸ ವರ್ಷ ಬರಮಾಡಿಕೊಳ್ಳುತ್ತಿದ್ದ ಸಂಭ್ರಮ ಕೇವಲ ಮನೆಗೆ ಸೀಮಿತವಾಗಿತ್ತು. ಸರಕಾರದ ಮಾರ್ಗಸೂಚಿ ಪ್ರಕಾರ ಡಿಜೆ ಹಚ್ಚುವಂತಿಲ್ಲ, ನೈಟ್‌ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆ ನಂತರ ವಿನಾಕಾರಣ ಹೊರಗೆ ಓಡಾಡುವಂತಿಲ್ಲ. ಇಂತಹ ಕಠಿಣ ಕ್ರಮಗಳಿಂದಾಗಿ ಹೊಸ ವರ್ಷ ಸ್ವಾಗತದ ಅದ್ಧೂರಿತನ ಕಳೆಗುಂದಿತ್ತು. ಕೋವಿಡ್‌ ಪೂರ್ವದಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೂ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಕಳೆದ ವರ್ಷದಂತೆ ಈ ವರ್ಷವೂ ಯಾವುದೇ ಅದ್ಧೂರಿತನ ಇರಲಿಲ್ಲ. ಹೆಚ್ಚಿನವರು ಮನೆಗಳಲ್ಲಿಯೇ ಹೊಸ ವರ್ಷಕ್ಕೆ ಸ್ವಾಗತ ಕೋರಿದರು.

ಇನ್ನೂ ಕೆಲವರು ರಾತ್ರಿ 10 ಗಂಟೆವರೆಗೆ ಹೋಟೆಲ್‌, ಬಾರ್‌ ಗಳಲ್ಲಿ ಸಮಯ ಕಳೆದು ಮನೆಯತ್ತ ಸಾಗಿದರು. ಒಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ಹೋಟೆಲ್‌, ಕ್ಲಬ್‌ಗಳಲ್ಲಿ ಯಾವುದೇ ಪಾರ್ಟಿಗಳನ್ನು ಆಯೋಜಿಸಲು ಅವಕಾಶ ಇರಲಿಲ್ಲ. 10 ಗಂಟೆಯೊಳಗೇ ಪಾರ್ಟಿಗಳಿದ್ದರೂ ಶೇ.50 ಮಾತ್ರ ಜನರಿಗೆ ಅವಕಾಶವಿತ್ತು. ಹೀಗಾಗಿ ಹೋಟೆಲ್‌, ಕ್ಲಬ್‌ಗಳಲ್ಲಿ ಪಾರ್ಟಿ ಆಯೋಜನೆಗೆ ಕೈ ಹಾಕಿರಲಿಲ್ಲ. ಕಳೆದ ವರ್ಷ ಸಿಮೀತ ಆಯೋಜನೆ ಮಾಡಿ ಒಂದಿಷ್ಟು ಆಯೋಜಕರು ನಷ್ಟ ಅನುಭವಿಸಿದ್ದರು.

ಹೋಟೆಲ್‌ನವರ ಆಕ್ರೋಶ
ಕಳೆದ ಎರಡು ವರ್ಷಗಳಿಂದ ಯಾವುದೇ ವ್ಯಾಪಾರ-ವಹಿವಾಟು ಇಲ್ಲದೇ ಪರಿತಪಿಸುತ್ತಿರುವ ಇಂತಹ ಸಮಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಇದ್ದ ಒಂದು ಅವಕಾಶವನ್ನು ಸರಕಾರ ಕಸಿದುಕೊಂಡಿದೆ. ಹತ್ತು ಹಲವು ಕಾರ್ಯಕ್ರಮಗಳು, ಚುನಾವಣೆಗಳು, ರಾಜಕೀಯ ಕಾರ್ಯಕ್ರಮಗಳು, ಮದುವೆಗಳಿಗಿರದ ನಿಯಮಗಳನ್ನು ಹೊಸ ವರ್ಷದ ಆಚರಣೆಗೆ ರೂಪಿಸಿ ಹೋಟೆಲ್‌ ಉದ್ಯಮ ನಷ್ಟ ಅನುಭಿಸುವಂತೆ ಮಾಡಿದೆ ಎನ್ನುವುದು ಹೋಟೆಲ್‌ ಉದ್ಯಮಿಗಳ ಆಕ್ರೋಶವಾಗಿದೆ.

ಎಲ್ಲಿಯೂ ಆಚರಣೆ ಇಲ್ಲ ನಗರದ ಡೆನಿಸನ್‌ ಹೋಟೆಲ್‌, ಓಶಿಯನ್‌ ಪರ್ಲ್, ನವೀನ ಹೋಟೆಲ್‌, ಹಂಸ್‌ ಹೋಟೆಲ್‌, ಕ್ಯೂಬಿಕ್ಸ್‌ ಹೋಟೆಲ್‌, ಫಾರ್ಚೂನ್‌ ಹೋಟೆಲ್‌, ಗ್ರ್ಯಾಂಡ್ ಹೋಟೆಲ್‌, ಫರ್ಲ್ ಹೋಟೆಲ್‌, ಪ್ರಸಿಡೆಂಟ್‌, ತಾರಾ ಎಮರಾಯಲ್ಡ್‌ ಹೋಟೆಲ್‌, ಕಾಟನ್‌ ಕೌಂಟಿ, ಲೋಟಸ್‌ ಗಾರ್ಡನ್‌ ಸೇರಿದಂತೆ ಎಲ್ಲ ಹೋಟೆಲ್‌ ಗಳಲ್ಲಿರುತ್ತಿದ್ದ ಹಬ್ಬದ ಕಳೆ ಈ ಬಾರಿ ಇರಲಿಲ್ಲ.

ಒಮಿಕ್ರಾನ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ನೈಟ್‌ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸರಕಾರದ ಆದೇಶ ಉಲ್ಲಂಘಿಸಿ ಏನೂ ಮಾಡುವಂತಿಲ್ಲ. ಇದರಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಸಂಪೂರ್ಣ ಬ್ರೇಕ್‌ ಬಿದ್ದಿದೆ. ಹೋಟೆಲ್‌ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಪ್ರದೀಪ್‌ ಶಾಹ್‌,
ಓಷಿಯನ್‌ ಪರ್ಲ್ ಹೋಟೆಲ್‌

ಹೊಸ ವರ್ಷದ ಆಚರಣೆ ಏನೂ ಇಲ್ಲ, ಕಳೆದ ವರ್ಷವೂ ಇದೇ ರೀತಿ ಆಗಿತ್ತು. ಸರಕಾರ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರಾತ್ರಿ 9 ಗಂಟೆಗೆ ಬಂದ್‌ ಮಾಡಿ, ರಾತ್ರಿ 10 ಗಂಟೆಗೆ ಒಳಗಡೆ ಯಾರನ್ನು ತೆಗೆದುಕೊಳ್ಳುವಂತಿಲ್ಲ. ಹೀಗಾಗಿ ಈ ಬಾರಿಯೂ ಯಾವುದೇ ಸಂಭ್ರಮಾಚರಣೆಯಿಲ್ಲ.
ಅರುಣ ಸವದತ್ತಿ,
ವ್ಯವಸ್ಥಾಪಕ, ಡೆನಿಸನ್ಸ್‌ ಹೋಟೆಲ್‌

ಟಾಪ್ ನ್ಯೂಸ್

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.