ನೋವು ಮರೆಸಿ ಹರ್ಷ ತರಲಿ ಹೊಸ ವರ್ಷ
Team Udayavani, Jan 1, 2022, 7:22 PM IST
ದಾವಣಗೆರೆ: ಮಹಾಮಾರಿ ಕೊರೊನಾದ ಅನಾಹುತ,ಅತಿವೃಷ್ಟಿ ,ಸಾವು, ನೋವು, ಬೆಳೆ ಹಾನಿ ಒಳಗೊಂಡಂತೆಅನೇಕ ಸಂಕಷ್ಟಕ್ಕೆ ಸಾಕ್ಷಿಯಾಗಿದ್ದ 2021 ಇತಿಹಾಸದ ಗರ್ಭದಲ್ಲಿ ಸೇರಿದೆ. ನೂತನ ವರ್ಷ-2022 ಜಿಲ್ಲೆಯಜನತೆಯಲ್ಲಿ ಒಂದಿಷ್ಟು ಹೊಸ ನಿರೀಕ್ಷೆ ಮೂಡಿಸಿದೆ.ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆ 2021ರಲ್ಲಿ ಸಿಹಿಗಿಂತಲೂ ಹೆಚ್ಚಾಗಿ ಅಹಿತಕರ, ಕಹಿ ಘಟನೆಗಳಿಗೆ ಸಾಕ್ಷಿಯಾಯಿತು.
ಮಹಾಮಾರಿಕೊರೊನಾ 350ಕ್ಕೂ ಹೆಚ್ಚು ಜನರನ್ನು ಬಲಿ ಪಡೆಯಿತು.ದುಡಿಮೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡಅನೇಕ ಕುಟುಂಬಗಳು ನಲುಗುತ್ತಿವೆ.ಅನೇಕ ಮಕ್ಕಳುಪೋಷಕರಿಲ್ಲದೆ ಅನಾಥರಾದರು. ಜೀವನವೇ ದುಸ್ತರವಾಯಿತು. ಆರೋಗ್ಯ ಕ್ಷೇತ್ರ ತುರ್ತು ಪರಿಸ್ಥಿತಿಎದುರಿಸುವಂತಾಗಿತ್ತು.
ಇನ್ನು ಗ್ರಾಮೀಣ ಭಾಗ ಈಗ್ಗೂಕೊರೊನಾ ನೀಡಿದ ಹೊಡೆತದಿಂದ ಬಸವಳಿದವು. 2021ರ ವರ್ಷಾಂತ್ಯಕ್ಕೆ ಕೊರೊನಾ ಅಬ್ಬರಕಡಿಮೆಯಾಗಿದೆ. ಹಿಂದೆ ಸಾವಿರದ ಸಂಖ್ಯೆಯಲ್ಲಿದ್ದಕೊರೊನಾಸಕ್ರಿಯಪ್ರಕರಣಗಳಸಂಖ್ಯೆಎರಡಂಕಿಯಲ್ಲೇ ಸುತ್ತು ಹಾಕುತ್ತಿದೆ. ಸಾವಿನ ಪ್ರಕರಣಗಳ ಸದ್ದಡಗಿದೆ.ಕೊರೊನಾದ ರೂಪಾಂತರಿ ಒಮಿಕ್ರಾನ್ ಭಯದ ಹಿನ್ನೆಲೆಯಲ್ಲಿ ರಾತ್ರಿಕರ್ಫ್ಯೂ ಜಾರಿಯಲ್ಲಿದ್ದು,ಕೊರೊನಾಮತ್ತೆ ಕಾಡದಿರಲಿ ಎಂಬುದು ಜನರ ಭಾವನೆ.
ಅದಕ್ಕೆತಕ್ಕಂತೆ ಪ್ರತಿಯೊಬ್ಬರೂ ಕೊರೊನಾ ಮಾರ್ಗಸೂಚಿ,ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಮೂಲಕ ಮಹಾಮಾರಿ ಕೊರೊನಾವನ್ನು ದೂರಇಡುವಂತಾಗಬೇಕು ಎಂಬ ಅಭಿಲಾಷೆ ವ್ಯಕ್ತವಾಗುತ್ತಿದೆ.2022 ದಾವಣಗೆರೆ ಜಿಲ್ಲೆಯ ಸಾಮಾಜಿಕ,ರಾಜಕೀಯ, ಕೃಷಿ ಕ್ಷೇತ್ರದಲ್ಲಿ ಹೊಸ ನಿರೀಕ್ಷೆಮೂಡಿಸಿದೆ.
ಆಗಿದ್ದು ಆಗಿ ಹೋಯಿತು. ಹೊಸವರ್ಷ ಎಲ್ಲರ ಜೀವನದಲ್ಲೂ ಹೊಸತನ ಹೊತ್ತು ತರಲಿಎಂಬ ಆಶಾಭಾವನೆ ಕಂಡು ಬರುತ್ತಿದೆ. ಹೊಸ ನಿರೀಕ್ಷೆಹುಟ್ಟು ಹಾಕುತ್ತಾ ಬಂದಿರುವ 2022ರಲ್ಲಿ ಜನರ ನಿರೀಕ್ಷೆಈಡೇರುವ ಮೂಲಕ ಮಾದರಿ ಜಿಲ್ಲೆಯಾಗಲಿ ಎಂಬಸದಾಶಯ ಎಲ್ಲರದ್ದಾಗಿದೆ.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.