ವಿಮಾ ಯೋಜನೆಯಿಂದ ಕಷ್ಟ ದಿಂದ ಪಾರಾಗಲು ಅವಕಾಶ: ಮಹೇಶ್
Team Udayavani, Jan 1, 2022, 9:22 PM IST
ಸಾಗರ: ಮ್ಯಾಮ್ಕೋಸ್ ಷೇರುದಾರರು ಸಂಸ್ಥೆಯ ವಿಮಾ ಯೋಜನೆಯಲ್ಲಿ ಒಳಗೊಳ್ಳುವ ಮೂಲಕ ಅಗತ್ಯ ಸಂದರ್ಭದಲ್ಲಿ ವಿಮಾ ಹಣ ಪಡೆಯುವ ಮೂಲಕ ಕಷ್ಟದಿಂದ ಪಾರಾಗಲು ಅವಕಾಶವಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಹುಲ್ಕಳಿ ಹೇಳಿದರು. ಇಲ್ಲಿನ ಮ್ಯಾಮ್ಕೋಸ್ ಸಭಾಂಗಣದಲ್ಲಿ ಮ್ಯಾಮ್ಕೋಸ್ ವತಿಯಿಂದ ಷೇರುದಾರರಿಗೆ ಆರೋಗ್ಯ ವಿಮಾ ಯೋಜನೆಯಡಿ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಿ ಅವರು ಮಾತನಾಡಿದರು.
ಮ್ಯಾಮ್ಕೋಸ್ ನಲ್ಲಿ 27 ಸಾವಿರಕ್ಕೂ ಹೆಚ್ಚು ಷೇರುದಾರರಿದ್ದು, ವಿಮಾ ಯೋಜನೆಯಲ್ಲಿ ಪಾಲ್ಗೊಂಡವರ ಸಂಖ್ಯೆ 4,530 ಮಾತ್ರ ಇದೆ. ಕೇವಲ 7200 ರೂ. ವಿಮಾ ಮೊತ್ತವನ್ನು ಪಾವತಿ ಮಾಡಿದರೆ ನಾಲ್ಕು ಲಕ್ಷದವರೆಗೆ ಆರೋಗ್ಯ ವಿಮೆ ಪಡೆಯಲು ಸಾಧ್ಯವಿದೆ. ಷೇರುದಾರರು ವಿಮಾ ಯೋಜನೆ ವ್ಯಾಪ್ತಿಗೆ ಬರುವ ಮೂಲಕ ತುರ್ತು ಸಂದರ್ಭದಲ್ಲಿ ಆರೋಗ್ಯ ವಿಮೆ ಪಡೆಯಬೇಕು. ಇದರಲ್ಲಿ ಈಗ ಕುಟುಂಬಸ್ಥರೆಲ್ಲರ ಹೆಸರು ಸಹ ಸೇರಿಸಲು ಅವಕಾಶವಿದೆ ಎಂದು ಹೇಳಿದರು. ಗುಂಪು ವಿಮಾ ಯೋಜನೆಯಡಿ ಕಳೆದ ವರ್ಷ 1.33 ಕೋಟಿ ರೂ. ಸೌಲಭ್ಯ ನೀಡಲಾಗಿದೆ.
ಗುಂಪು ವಿಮಾ ಯೋಜನೆಯಡಿ ಕುಟುಂಬಸ್ಥರೆಲ್ಲರೂ ಸೇರಬಹುದು. ಜೊತೆಗೆ 80 ವರ್ಷ ಮೇಲ್ಪಟ್ಟ ವ್ಯಕ್ತಿಗೂ ವಿಮೆ ಸಿಗುತ್ತದೆ. ಗುಂಪು ವಿಮಾ ಯೋಜನೆಯಲ್ಲಿ ಸಂಸ್ಥೆಯ 22 ಸಾವಿರ ಷೇರುದಾರರು ಪಾಲ್ಗೊಂಡಿದ್ದಾರೆ. ಮ್ಯಾಮ್ಕೋಸ್ ಷೇರುದಾರರ ಹಿತ ಕಾಯುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಬೆಳೆಗಾರರು ಮ್ಯಾಮ್ಕೋಸ್‌ಗೆ ಅಡಕೆ ಮಾರಾಟ ಮಾಡುವ ಮೂಲಕ ಮ್ಯಾಮೊಸ್ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಮ್ಯಾಮ್ಕೋಸ್ ನಿರ್ದೇಶಕರಾದ ತಿಮ್ಮಪ್ಪ ಶ್ರೀಧರಪುರ, ಬಿ.ಜಿ. ದಿನೇಶ್ ಬರದವಳ್ಳಿ, ಕೀರ್ತಿರಾಜ್ ಕಾನಳ್ಳಿ, ವಿಜಯಲಕ್ಷಿ ¾ರಾಮಪ್ಪ, ರತ್ನಾಕರ್, ವಿಮಾ ಸಂಸ್ಥೆಯ ಅಭಿವೃದ್ಧಿ ಅ ಧಿಕಾರಿ ನಾಗರಾಜ್, ಮ್ಯಾಮೊRàಸ್ ಸ್ಥಳೀಯ ಘಟಕದ ವ್ಯವಸ್ಥಾಪಕ ಚನ್ನಕೇಶವ ಸಿ.ಸಿ. ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.