ಬೀದರನಲ್ಲಿ ಯೋಗ ಭವನ ನಿರ್ಮಾಣ: ಗಣಪತರಾವ್
Team Udayavani, Jan 2, 2022, 3:18 PM IST
ಬೀದರ: ಸಾಮೂಹಿಕವಾಗಿ ಧ್ಯಾನಯೋಗ ಮಾಡಲು ಪತಂಜಲಿ ಯೋಗ ಪೀಠದಿಂದ ಬೀದರ ನಗರದಲ್ಲಿ ಅಗತ್ಯ ಸೌಕರ್ಯಗಳುಳ್ಳ ಭವನ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಸ್ಥಳಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಭಾರತ ಸ್ವಾಭಿಮಾನ ಆಂದೋಲನದ ಜಿಲ್ಲಾಧ್ಯಕ್ಷ ಗಣಪತರಾವ್ ಖೂಬಾ ಮನವಿ ಮಾಡಿದರು.
ನಗರದ ರಾಘವೇಂದ್ರ ಮಂದಿರದ ಸಭಾಂಗಣದಲ್ಲಿ ಪತಂಜಲಿ ಯೋಗ ಪೀಠದಿಂದ ಆಯೋಜಿಸಿದ್ದ ಶೂನ್ಯ ಸಂಪಾದನೆ ಉಪಾಸನಾ ಧ್ಯಾನ ಯೋಗ ಶಿಬಿರದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒತ್ತಡ ಬದುಕು, ರೋಗರುಜಿನಗಳಿಂದ ದೂರವಿರಬೇಕಾದರೆ ನಾವೆಲ್ಲ ದಿನಾಲೂ ಧ್ಯಾನ, ಯೋಗ ಮಾಡಬೇಕು. ಜೀವನದಲ್ಲಿ ಶಾಂತಿ, ನೆಮ್ಮದಿ, ಸಂತೃಪ್ತಿಯಿಂದ ಬಾಳಬೇಕಾದರೆ ದಿವ್ಯಔಷಧಿ ಧ್ಯಾನ, ಯೋಗವಾಗಿದೆ ಎಂದರು.
ಯೋಗ ಗುರು ಮಡಿವಾಳ ದೊಡ್ಡಮನಿ ಮಾತನಾಡಿ, ಪಂಚಭೂತಗಳಿಂದ ಕೂಡಿದ ಈ ಪ್ರಕೃತಿ ಬಹಳ ಸುಂದರವಾಗಿದೆ. ನಮಗೆ ಪ್ರಕೃತಿ ಎಲ್ಲವನ್ನೂ ಧಾರೆ ಎರೆದಿದೆ. ಅದನ್ನು ಸದುಪಯೋಗ ಮಾಡಿಕೊಂಡು ಪರಿಸರವನ್ನು ನೋಡಿ ನಾವು ಬಹಳಷ್ಟು ಪಾಠ ಕಲಿಯಬೇಕಾಗಿದೆ ಎಂದರು.
ಸಾಹಿತಿ ಎಂ.ಜಿ. ದೇಶಪಾಂಡೆ ಕವನ ವಾಚಿಸಿದರು. ಡಾ| ನಂದಕುಮಾರ ತಾಂದಳೆ ಮತ್ತು ಡಾ| ಸಿ.ಎಸ್. ಮಾಲಿಪಾಟೀಲ ಇನ್ನಿತರರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಯೋಗ ಸಾಧಕರಾದ ಗುರನಾಥ ಮೂಲಗೆ, ಯೋಗೇಂದ್ರ ಯದಲಾಪುರೆ, ಧೊಂಡಿರಾಮ ಚಾಂದಿವಾಲೆ, ನೀಲಮ್ಮ, ಶಕುಂತಲಾ ವಾಲಿ, ವಿಜಯಲಕ್ಷ್ಮೀ ಡೋಯಿಜೋಡೆ ಅವರನ್ನು ಸನ್ಮಾನಿಸಲಾಯಿತು. ಪ್ರಶಾಂತ ಹೊಳಸಮುದ್ರಕರ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಶ್ರೀಕಾಂತ ಮೋದಿ ವಂದಿಸಿದರು. ಡಾ| ಸುನೀಲಕುಮಾರ ಮಂಗಲಗಿ, ಶಂಕರರಾವ ಚಿದ್ರಿ, ಜಗನ್ನಾಥ ಮಹಾರಾಜ, ಪ್ರೊ| ಉಮಾಕಾಂತ ಮೀಸೆ, ಚಂದ್ರಶೇಖರ ಹೆಬ್ಟಾಳೆ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.