ನಾಲತವಾಡ: ಭೂತಾಯಿಗೆ ವಿಶೇಷ ಪೂಜೆ ಮಾಡಿ ಎಳ್ಳು ಅಮವಾಸ್ಯೆಯ ಸಂಭ್ರಮ
Team Udayavani, Jan 2, 2022, 4:31 PM IST
ನಾಲತವಾಡ: ಅಲ್ಲಿ ವಿವಿಧ ಬಗೆಯ ಖಾದ್ಯಗಳ ಸಮ್ಮಿಲನವಾಗಿತ್ತು. ನೋಡುಗರ ಬಾಯಲ್ಲಿ ನೀರು ಜಿನುಗುವಂತಹ ರಸದೌತಣ. ಬರದ ಮಧ್ಯೆ ಬರೋ ದಿನಗಳಲ್ಲಾದ್ರು ಭೂತಾಯಿ ತಮ್ಮ ಕೈ ಹಿಡಿಲಿ ಅಂತಾ ಅಲ್ಲಿನ ಜನರು ಭೂತಾಯಿಗೆ ಕೃತಜ್ಞತೆ ಸಲ್ಲಿಸಿದರು.
ಭೂತಾಯಿಗೆ ವಿಶೇಷ ಪೂಜೆ: ನೋವಿನ ಮದ್ಯೆದಲ್ಲೂ ಹೊಸ ನಿರೀಕ್ಷೆಯಿಂದಿರೋ ಕುಟುಂಬಸ್ಥರ ಸಂಭ್ರಮ. ಹೌದು ಇದು ವಿಜಯಪುರ ಜಿಲ್ಲೆ ನಾಲತವಾಡ ಪಟ್ಟಣದಲ್ಲಿ ಕಂಡು ಬಂದ ಎಳ್ಳು ಅಮವಾಸೆಯ ಸಂಭ್ರಮ. ಉತ್ತರ ಕರ್ನಾಟಕದಲ್ಲಿ ಎಳ್ಳ ಅಮವಾಸೆ ವಿಶಿಷ್ಟ ಸಾಂಪ್ರದಾಯಿಕ ಹಬ್ಬವಾಗಿದೆ. ಹಿಂಗಾರಿ ಬೆಳೆ ಇನ್ನೇನು ರೈತರ ಕೈಸೇರೋ ಸಮಯ. ಜೋಳ, ಗೋದಿ ತೆನೆ ಒಡೆಯೋ ಸಂದರ್ಭದಲ್ಲಿ ಬರೋ ಈ ಹಬ್ಬವನ್ನು ಉತ್ತರ ಕರ್ನಾಟಕದ ಜನ್ರು ಸಂಭ್ರಮದಿಂದ ಆಚರಿಸುತ್ತಾರೆ. ಆದ್ರೆ ಸತತ ಬರಗಾಲದಿಂದ ಬೆಂದ ರೈತರು ತಮ್ಮ ಸಂಕಷ್ಟದ ಮದ್ಯೆಯೂ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮನ್ನು ಸಲುಹಿದ ಭೂತಾಯಿ ತಮ್ಮನ್ನೆಂದು ಕೈಬಿಡೋದಿಲ್ಲ ಅನ್ನೋದು ರೈತರ ನಂಬಿಕೆ. ಹೀಗಾಗಿ ಹಬ್ಬದ ಮೂಲಕ ಭೂಮಿ ತಾಯಿಯನ್ನು ಪೂಜಿಸಿ, ಚರಗ ಚಲ್ಲೋ ಮೂಲಕ ಭೂಮಾತೆಗೆ ಕೃತಜ್ಞತೆ ಸಲ್ಲಿಸಿದರು. ಇನ್ನು ವಿವಿಧ ಬಗೆಯ ಸೊಪ್ಪು, ಕಾಳುಗಳು, ಪಲ್ಯೆ, ಚಟ್ನಿ, ರೊಟ್ಟಿ ತಯಾರಿಸಿ ಮನೆಮಂದಿಯಲ್ಲ ತಮ್ಮ ಜಮೀನಿನಲ್ಲೆಲ್ಲ ಸಹಭೋಜನ ಮಾಡಿ ಸಂಭ್ರಮಿಸಿದರು.
ಎಳ್ಳ ಅಮವಾಸೆಗೊಂದು ವಿಶಿಷ್ಟ ಹಿನ್ನೆಲೆ ಇದೆ. ಫಸಲ ನೀಡೋ ಭೂತಾಯಿಗೆ ಮಾಗಿ ಚಳಿಯ ಈ ಸಮಯ ಗರ್ಭವತಿಯಾಗೋ ಸಮಯವಂತೆ. ಹೀಗಾಗಿ ಭೂತಾಯಿಗೆ ಸೀಮಂತ ಮಾಡೋ ಆಚರಣೆಯೇ ಎಳ್ಳು ಅಮವಾಸೆ ಅಂತ ಕೆಲವರು ಹೇಳ್ತಾರೆ. ಇನ್ನು ಕೆಲವರು ರೈತರು ಬೆಳೆದ ತರಕಾರಿ ಹಾಗೂ ಸೊಪ್ಪು ಸೂಸೋ ಸಮಯದಲ್ಲಿ ಮೊದಲು ಸೂಸಿದ ಸೊಪ್ಪಿನಿಂದ ಪೂಜೆ ಮಾಡೋದು ಎಲ್ಲ ಅಮವಾಸೆ ವಿಶೇಷ ಅಂತ ಕೆಲವ್ರು ಹೇಳ್ತಾರೆ. ಭೂಮಿ ಮತ್ತು ರೈತನ ಸಂಬಂಧ ಮೀನು ಮತ್ತು ನೀರಿನಂತೆ. ಹೀಗಾಗಿ ವರ್ಷಪೂರ್ತಿ ಅನ್ನ ನೀಡೋ ಭೂಮಿಯನ್ನು ಎಳ್ಳ ಅಮವಾಸೆ ನೆಪದಲ್ಲಿ ಸಿಂಗರಿಸಿ ಪೂಜಿಸೋದು ವಿಶೇಷವಾಗಿದೆ. ಇನ್ನು ಎಳ್ಳು ಅಮವಾಸೆ ವೇಳೆಯಲ್ಲಿ ಬರೋ ಮಾಗಿ ಚಳಿಗೆ ಹೊಂದಿಕೆಯಾಗುವಂತಹ ಆಹಾರ ಸಿದ್ಧಪಡಿಸೋದು ಕೂಡ ಈ ಹಬ್ಬದ ವಿಶೇಷ. ಆದ್ರೆ ಹಲವು ವರ್ಷದಿಂದ ಬರದ ಬವಣೆಯಲ್ಲಿ ಬಳಲುತ್ತಿರೋ ರೈತರು ಹೊಸ ನಿರೀಕ್ಷೆಯೊಂದಿಗೆ ಕೈಲಾದಷ್ಟು ಪ್ರಮಾಣದಲ್ಲಿ ಹಬ್ಬವನ್ನು ಆಷರಿಸಿರೋದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.