ಹದಗೆಟ್ಟ ಆಮ್ರಕಲ್ಲು – ಸೂರ್ಗೋಳಿ ಕ್ರಾಸ್ ರಸ್ತೆ
15 ವರ್ಷಗಳ ಹಿಂದೆ ಡಾಮರು ಕಾಮಗಾರಿ ; ದುರಸ್ತಿಗೆ ಗ್ರಾಮಸ್ಥರ ಆಗ್ರಹ
Team Udayavani, Jan 4, 2022, 5:30 AM IST
ಗೋಳಿಯಂಗಡಿ: ಆಮ್ರಕಲ್ಲು – ಸೂರ್ಗೋಳಿ ಕ್ರಾಸ್ ರಸ್ತೆಯಲ್ಲಿ ಬಹಳಷ್ಟು ಹೊಂಡ – ಗುಂಡಿಗಳು ¬ಉಂಟಾ ಗಿ ದ್ದರಿಂದ ಸಂಚಾರ ದುಸ್ತರವಾಗಿದೆ. ನಿತ್ಯ ನೂರಾರು ಮಂದಿ ಸಂಚರಿಸುವ 4 ಕಿ.ಮೀ. ದೂರದ ಈ ರಸ್ತೆಯ ಅಭಿವೃದ್ಧಿಗೆ ಅಲ್ಲಿನ ಜನರು ಆಗ್ರಹಿಸಿದ್ದಾರೆ.
ಬೆಳ್ವೆ, ಹಿಲಿಯಾಣ, ನಾಲ್ಕೂರು ಈ 3 ಗ್ರಾಮಗಳನ್ನು ಬೆಸೆಯುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತೀ ನಿತ್ಯ ನೂರಾರು ಮಂದಿ ಬೇರೆ ಬೇರೆ ಕಡೆಗಳಿಗೆ ಸಂಚರಿಸಲು ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಬೃಹತ್ ಹೊಂಡಮಯ ವಾಗಿರುವುದರಿಂದ ಈ ರಸ್ತೆಯಲ್ಲಿ ಸಂಚಾರ ಪ್ರಯಾಸ ತರುವಂತಿದೆ.
ಹತ್ತಿರದ ಮಾರ್ಗ
ಈ ರಸ್ತೆಯು ಆಮ್ರಕಲ್ಲು, ತಾರಿಕಟ್ಟೆ ಹಾಗೂ ಸೂರ್ಗೋಳಿ ಭಾಗದ ಜನರಿಗೆ ಬೇರೆ ಬೇರೆ ಕಡೆಗಳಿಗೆ ಸಂಚರಿಸಲು ಮುಖ್ಯ ರಸ್ತೆಯಾಗಿದೆ. ಇದಲ್ಲದೆ ಬೆಳ್ವೆ, ಅಲಾºಡಿ ಭಾಗದ ಜನರಿಗೆ ಮಂದಾರ್ತಿ ದೇವಸ್ಥಾನಕ್ಕೆ ತೆರಳಲು ಹತ್ತಿರದ ಮಾರ್ಗವಾಗಿದೆ. ಬೆಳ್ವೆಯಿಂದ ಮಂದಾರ್ತಿಗೆ ಬೇರೆ ರಸ್ತೆಯಿದ್ದರೂ, ಈ ಮಾರ್ಗವಾಗಿ ಸುಮಾರು 2 ಕಿ.ಮೀ.ನಷ್ಟು ಹತ್ತಿರವಾಗಲಿದೆ. ಆದರೆ ಹದಗೆಟ್ಟ ರಸ್ತೆಯಿಂದಾಗಿ ಈ ರಸ್ತೆಯ ಬದಲು ದೂರದ ಮಾರ್ಗವನ್ನೇ ಅವಲಂಬಿಸುವಂತಾಗಿದೆ.
15 ವರ್ಷದ ಹಿಂದೆ ಕಾಮಗಾರಿ
ಈ ಮಾರ್ಗಕ್ಕೆ ಶಾಸಕರ ಮುತುವರ್ಜಿಯಲ್ಲಿ 15 ವರ್ಷದ ಹಿಂದೆ ಡಾಮರು ಕಾಮಗಾರಿಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಮಾರ್ಗದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕೆಲವೊಮ್ಮೆ ಹೊಂಡ-ಗುಂಡಿಗಳಿಗೆ ತೇಪೆ ಹಾಕುವ ಕಾರ್ಯ ಆಗಿದ್ದು, ಬಿಟ್ಟರೆ, ರಸ್ತೆ ಮರು ಡಾಮರು ಕಾಮಗಾರಿ ಈವರೆಗೆ ನಡೆದಿಲ್ಲ.
ಮರು ಡಾಮರು ಕಾಮಗಾರಿಯಾಗಲಿ
ಈ ಆಮ್ರಕಲ್ಲು – ತಾರಿಕಟ್ಟೆ- ಸೂರ್ಗೋಳಿ ಕ್ರಾಸ್ ರಸ್ತೆ ಹದಗೆಟ್ಟು ಅನೇಕ ಸಮಯವಾಗಿದೆ. ನಿತ್ಯ ಈ ಮಾರ್ಗದಲ್ಲಿ 200ಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ರಸ್ತೆಯ ಅಲ್ಲಲ್ಲಿ ದೊಡ್ಡ ಹೊಂಡ ಬಿದ್ದಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ಶೀಘ್ರ ಈ ರಸ್ತೆಯ ಮರು ಡಾಮರು ಕಾಮಗಾರಿ ಆಗಲಿ ಎನ್ನುವುದಾಗಿ ಈ ಭಾಗದ ಗ್ರಾಮಸ್ಥರು ಆಗ್ರ ಹಿಸಿದ್ದಾರೆ.
ಬೇಡಿಕೆ ಸಲ್ಲಿಕೆ
ಇದು ಕುಂದಾಪುರ ಹಾಗೂ ಸ್ವಲ್ಪ ಭಾಗ ಉಡುಪಿ ಕ್ಷೇತ್ರಕ್ಕೂ ಬರುತ್ತದೆ. ನಾವು ಈಗಾಗಲೇ ನಮ್ಮ ಶಾಸಕರಿಗೆ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಬೇಡಿಕೆ ಸಲ್ಲಿಸಿದ್ದೇವೆ. ಉಡುಪಿಯ ಶಾಸಕರಿಗೂ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಗಮನಕ್ಕೆ ತಂದಿದ್ದಾರೆ. ಈಗಾಗಲೇ ಸುತ್ತಮುತ್ತಲಿನ ಅನೇಕ ರಸ್ತೆ ಅಭಿವೃದ್ಧಿಯಾಗಿದ್ದು, ಆದರೆ ಈ ರಸ್ತೆ ಅನೇಕ ವರ್ಷದ ಹಿಂದೆ ಡಾಮರು ಕಾಮಗಾರಿಯಾಗಿದ್ದು, ಈ ರಸ್ತೆಯ ದುರಸ್ತಿಗೂ ಅನುದಾನ ಮಂಜೂರಾಗುವ ನಿರೀಕ್ಷೆಯಿದೆ.
-ಸೂರ್ಗೋಳಿ ಚಂದ್ರಶೇಖರ ಶೆಟ್ಟಿ, ಅಧ್ಯಕ್ಷರು, ಬೆಳ್ವೆ ಗ್ರಾ.ಪಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.