ಮಂಗಳವಾರದ ರಾಶಿಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Jan 4, 2022, 7:23 AM IST
ಮೇಷ:
ನಾಯಕತ್ವಗುಣಗಳಿಂದ ಕಾರ್ಯ ಕ್ಷೇತ್ರ ದಲ್ಲಿ ಸರ್ವಜನರಿಂದ ಗೌರವ. ಭಾÅತೃ ಮಾತೃ ಸಮಾನರಿಂದ ಪ್ರೋತ್ಸಾಹ. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ. ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಯೋಗ.
ವೃಷಭ:
ಉದ್ಯೋಗದಲ್ಲಿ ಉತ್ತಮ ಬದಲಾವಣೆಗೆ ಅವಕಾಶ. ಸ್ವಾವಲಂಬಿ ಗಳಾಗಿ ಕಾರ್ಯ ಸಾಧಿಸಿಕೊಳ್ಳುವ ಕಾಲ. ನೂತನ ಮಿತ್ರರ ಸಮಾಗಮ. ಗೃಹೋಪ ವಸ್ತುಗಳ ಸಂಗ್ರಹ. ಪರೋಪಕಾರ ಮಾಡುವಾಗ ಜಾಗ್ರತೆ.
ಮಿಥುನ:
ಸಂಚಾರದಿಂದ ನಿರೀಕ್ಷಿತ ಸಫಲತೆ. ಉತ್ತಮ ಧನಾರ್ಜನೆ. ಉದಾರತೆ ಯಿಂದಲೂ ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪರಾಕ್ರಮ ಪ್ರದರ್ಶನದಿಂದ ಜನಮನ್ನಣೆ ಗೌರವ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ.
ಕಟಕ:
ಧಾರ್ಮಿಕ ಸಮಾಜಿಕ ಆರ್ಥಿಕ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡದೆ ತಾಳ್ಮೆ ಸಮಾಧಾನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಆರೋಗ್ಯದ ಕಡೆ ಗಮನಹರಿಸಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಧನಾರ್ಜನೆಗೆ ಕೊರತೆಯಾಗದು.
ಸಿಂಹ:
ದೈಹಿಕ ಮಾನಸಿಕ ಒತ್ತಡವಿದ್ದರೂ ಕಾರ್ಯಕ್ಷೇತ್ರದಲ್ಲಿ ಸಫಲತೆ. ನಿರೀಕ್ಷಿತ ಧನಾಗಮ. ಸಹೋದರಾದಿ ಸಮಾನರಿಂದಲೂ ಕಾರ್ಮಿಕ ರಿಂದಲೂ ಸುಖ ಲಭಿಸುವ ದಿನ. ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ದೇವತಾ ಸ್ಥಳ ಸಂದರ್ಶನ.
ಕನ್ಯಾ:
ಉತ್ತಮ ಅಭಿವೃದ್ಧಿ ಇದ್ದರೂ ಆರ್ಥಿಕ ವಿಚಾರದಲ್ಲಿ ಹಿಡಿತವಿರಲಿ. ದಾಕ್ಷಿಣ್ಯ ಪ್ರವೃತ್ತಿಯಿಂದ ಧನ ನಷ್ಟವಾಗುವ ಸಂಭವ. ಪಾಲುದಾರಿಕೆ ವ್ಯವಹಾರಸ್ಥರಿಗೆ ಉತ್ತಮ ಫಲಿತಾಂಶ ಲಭಿಸುವ ಅವಕಾಶ. ಸಾಂಸಾರಿಕ ಸುಖ ವೃದ್ಧಿ.
ತುಲಾ:
ಆರೋಗ್ಯ ವೃದ್ಧಿ. ಜಲೋತ್ಪನ್ನ ವ್ಯವಹಾರದಲ್ಲಿ ಅಭಿವೃದ್ಧಿ. ಗುರುಹಿರಿಯರ ಆರೋಗ್ಯ ಗಮನಿಸಿ. ಉತ್ತಮ ಧನಾರ್ಜನೆ. ಮಕ್ಕಳಿಂದ ಗೌರವ ಪ್ರಾಪ್ತಿ. ಗೃಹೋಪ ವಸ್ತುಗಳ ಸಂಗ್ರಹ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಉದ್ಯೋಗದಲ್ಲಿ ಬದಲಾವಣೆ.
ವೃಶ್ಚಿಕ:
ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಜವಾಬ್ದಾರಿಯುತ ಕಾರ್ಯ ವೈಖರಿ. ಆಸ್ತಿ ವಿಚಾರಗಳಲ್ಲಿ ಪ್ರಗತಿಯಿಂದ ಕೂಡಿದ ಬದಲಾವಣೆ. ಹಿರಿಯರ ಆರೋಗ್ಯ ಗಮನಿಸಿ. ಬಹುಸಂಪತ್ತು ವೃದ್ಧಿಯಾಗುವ ಸಂದರ್ಭ.
ಧನು:
ಗೃಹೋಪ ವಸ್ತುಗಳ ಸಂಗ್ರಹ. ಹೆಚ್ಚಿದ ಜನಸಂಪರ್ಕ. ಗಣ್ಯರ ಭೇಟಿ. ದೂರದ ಬಂಧುಮಿತ್ರರ ಸಹಕಾರ. ಅವಿವಾಹಿತರಿಗೆ ವಿವಾಹ ಯೋಗ. ಉತ್ತಮ ಸಂಬಂಧ ಕೂಡಿ ಬರುವ ಸಮಯ. ಮನೆಯಲ್ಲಿ ಸಂಭ್ರಮದ ವಾತಾವರಣ.
ಮಕರ:
ಅಧ್ಯಯನಶೀಲತೆ. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿ. ಸತ್ಕರ್ಮಕ್ಕೆ ಧನಸಹಾಯ. ದಾಂಪತ್ಯದಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ಗುರುಹಿರಿಯರಲ್ಲಿ ತಾಳ್ಮೆಯಿಂದ ವರ್ತಿಸಿ. ಗೃಹದಲ್ಲಿ ಹಿರಿಯರಿಂದ ಸಂತಸ.
ಕುಂಭ:
ಆಸ್ತಿ ವಿಚಾರಗಳಲ್ಲಿ ಪ್ರಗತಿ. ಗೃಹೋಪವಸ್ತುಗಳ ಸಂಗ್ರಹ. ಸಾಂಸಾರಿಕ ಸುಖ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಬಂಧು ಮಿತ್ರರ ಸಹಾಯ ಸಹಕಾರದಿಂದ ಅಭಿವೃದ್ಧಿ. ಹೆಚ್ಚಿದ ವರಮಾನ. ಹಿರಿಯರಿಂದ ಸುಖ ಸಂತೋಷ.
ಮೀನ:
ಆಭರಣಾದಿಗಳ ಖರೀದಿಗಳು. ಮನೆಗೆ ಸಂಬಂಧಿಸಿದ ವಸ್ತು ಸಂಗ್ರಹ. ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಸಂತೋಷ ವೃದ್ಧಿ. ನೀರೀಕ್ಷೆಗೂ ಮೀರಿದ ಧನಾರ್ಜನೆ. ದಾನ ಧರ್ಮದಲ್ಲಿ ಆಸಕ್ತಿ. ಅವಿವಾಹಿತರಿಗೆ ವಿವಾಹ ಯೋಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.